ಚಂಡಗಡ ಡ್ಯಾಮ್‌ನಲ್ಲಿ ಬಿದ್ದು ಬೆಳಗಾವಿ ಸಹೋದರರ ಸಾವು

By Kannadaprabha News  |  First Published Jun 12, 2023, 10:02 AM IST

ನೆರೆಯ ಮಹಾರಾಷ್ಟ್ರದ ಚಂಡಗಡ ತಾಲೂಕಿನ ತಿಲಾರಿ ಡ್ಯಾಮ ಹಿನ್ನಿರಿನಲ್ಲಿ ಮುಳಗಿ ಬೆಳಗಾವಿ ಮೂಲದ ಸಹೋದರರಿಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ನಡೆದಿದೆ. 


ಬೆಳಗಾವಿ (ಜೂ.12): ನೆರೆಯ ಮಹಾರಾಷ್ಟ್ರದ ಚಂಡಗಡ ತಾಲೂಕಿನ ತಿಲಾರಿ ಡ್ಯಾಮ ಹಿನ್ನಿರಿನಲ್ಲಿ ಮುಳಗಿ ಬೆಳಗಾವಿ ಮೂಲದ ಸಹೋದರರಿಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ನಡೆದಿದೆ. ಬೆಳಗಾವಿ ನಗರದ ಕ್ಯಾಂಪ ಪ್ರದೇಶದ ನಿವಾಸಿಗಳಾದ ರೀಹಾನ್ ಅಲ್ತಾಫ್ ಖಾನ್ (15) ಹಾಗೂ ಮುಸ್ತಫಾ ಅಲ್ತಾಫ್ ಖಾನ್ (12) ಮೃತರು. ಶನಿವಾರ ಸಂಜೆ ಅಲ್ತಾಪ್ ಖಾನ್ ಕುಟುಂಬಸ್ಥರೊಂದಿಗೆ ಹಾಜಗೋಳಿ ಗ್ರಾಮ ಸಮೀಪ ಇರುವ ತಿಲಾರಿ ಡ್ಯಾಮ್ ಕಡೆಗೆ ಪ್ರವಾಸಕ್ಕೆ ತೆರಳಿದ್ದಾರೆ.  ತಿಲಾರಿ ಡ್ಯಾಮ್ ಹಿನ್ನೀರಿನ ದಡದಲ್ಲಿ ಚಾಳೊಬಾ ದೇವಸ್ಥಾನ ಇದೆ. ವಿಕೇಂಡ್ ಮಜಾ ಮಾಡಲು ಹೋಗಿದ್ದಾರೆ. 

ಕೈ, ಕಾಲು ತೊಳೆದುಕೊಳ್ಳಲು ಡ್ಯಾಮ್‌ನಲ್ಲಿ ರಿಹಾನ್ ಮತ್ತು ಮುಸ್ತಫಾ ನೀರಿನಲ್ಲಿ ಇಳಿದ ಸಂದರ್ಭದಲ್ಲಿ ಕಾಲು ಜಾರಿ ನೀರಿನೊಳಗೆ ಬಿದ್ದಿದ್ದಾರೆ. ನೀರಿನ ಆಳ ಹೆಚ್ಚಿದ್ದರಿಂದ ಸ್ಥಳದಲ್ಲಿದ್ದ ಕುಟುಂಬಸ್ಥರು ರಕ್ಷಣೆ ಮಾಡಲು ಸಾಧ್ಯವಾಗಲಿಲ್ಲ. ನಂತರ ಅಸಹಾಯಕರಾಗಿ ಚೀರಾಟ, ಕೂಗಾಟ ನಡೆಸಿದ್ದರಿಂದ ಸ್ಥಳೀಯರು ಬಂದಿದ್ದಾರೆ. ನಂತರ ಮಾಹಿತಿ ಸಿಗುತ್ತಿದ್ದಂತೆ ಈಜುಗಾರರೊಂದಿಗೆ ಚಂಡಗಡ ಪೊಲೀಸ್ ಘಟನಾ ಸ್ಥಳಕ್ಕೆ ಆಗಮಿಸಿ ಪತ್ತೆ ಕಾರ್ಯ ನಡೆಸಿದ್ದಾರೆ. ಭಾನುವಾರ ಬೆಳಿಗ್ಗೆ ಇಬ್ಬರ ಮೃತದೇಹಗಳು‌ ಸಿಕ್ಕಿವೆ. ಈ ಘಟನೆ ಕುರಿತು  ಚಂಡಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Tap to resize

Latest Videos

ಮಾತು ತಪ್ಪದೇ ಎಲ್ಲ 5 ಗ್ಯಾರಂಟಿ ಈಡೇ​ರಿ​ಕೆ: ಡಿ.ಕೆ.ಶಿವಕುಮಾರ್‌

ವೈದ್ಯ ವಿದ್ಯಾರ್ಥಿನಿ ಸಾವು: ಮೆರಿಟ್‌ ಆಧಾರದಲ್ಲಿ ಸರ್ಕಾರಿ ಕೋಟಾದಡಿ ಉಚಿತ ಮೆಡಿಕಲ್‌ ಸೀಟ್‌ ಪಡೆದಿದ್ದ ಪ್ರತಿಭಾವಂತ ವಿದ್ಯಾರ್ಥಿನಿ ಡಾ.ದರ್ಶಿನಿ ಸಾವಿಗೆ ಕಾರಣರಾದ ಎಂವಿಜೆ ಮೆಡಿಕಲ್‌ ಕಾಲೇಜಿನ ಆಡಳಿತ ಮಂಡಳಿ ಹಾಗೂ ಸಂಬಂಧಿಸಿದವರ ವಿರುದ್ಧ ಕೈಗೊಂಡಿರುವ ತನಿಖೆ ದಿಕ್ಕು ತಪ್ಪದಂತೆ ಸರ್ಕಾರ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‌ಬಾಬು ಆಗ್ರಹಿಸಿದ್ದಾರೆ. ಶಾಲಾ ಶಿಕ್ಷಕಿಯೊಬ್ಬರ ಪುತ್ರಿಯಾದ ದರ್ಶಿನಿ ಸಾವಿಗೆ ಕಾರಣರಾದ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಈ ಪ್ರಕರಣದ ಸಂಬಂಧ ಕೋಲಾರ ಜಿಲ್ಲಾ ಪೊಲೀಸ್‌ ಇಲಾಖೆ ಹಾಗೂ ಎಸ್ಪಿಯವರು ಕೈಗೊಂಡಿರುವ ಕ್ರಮ ಸ್ವಾಗತಾರ್ಹ. 

10 ವರ್ಷ ಮಹಿಳೆಯರಿಗೆ ಉಚಿತ ಪ್ರಯಾಣ: ಸಚಿವ ರಾಮಲಿಂಗಾರೆಡ್ಡಿ

ಇಂತಹ ಪ್ರಕರಣಗಳು ಮರುಕಳಿಸದಂತೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು, ಪ್ರತಿಭಾವಂತ ಮಕ್ಕಳ ಜೀವ ರಕ್ಷಣೆಗೆ ಕಾನೂನು ತರಬೇಕು ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ. ಬಳ್ಳಾರಿ ಜಿಲ್ಲೆಯ ಬಸಮ್ಮ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿರುವ ಜಿ.ರಾಜೇಶ್ವರಿ ದಂಪತಿ ಪುತ್ರಿಯಾದ ದರ್ಶಿನಿ ವೈದ್ಯೆಯಾಗುವ ಕನಸು ಕಂಡಿದ್ದ ಪ್ರತಿಭೆ. ತಂದೆಯ ಸಾವಿನ ನಡುವೆಯೂ ತಾಯಿಯ ಆರೈಕೆಯಲ್ಲಿ ಬೆಳೆದು ಮೆರಿಟ್‌ ಆಧಾರದ ಮೇಲೆ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಸೀಟ್‌ ಪಡೆದು ವ್ಯಾಸಂಗ ಮುಗಿಸಿ, ಎಂವಿಜೆ ಕಾಲೇಜಿನಲ್ಲಿ ಎಂಎಸ್‌ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದರು ಎಂದು ತಿಳಿಸಿದ್ದಾರೆ.

click me!