Bengaluru: ಜಾಲಹಳ್ಳಿ ಜಂಕ್ಷನ್‌ನಲ್ಲಿ ಇನ್ನೆರಡು ವರ್ಷ ಟ್ರಾಫಿಕ್‌: ಶೀಘ್ರದಲ್ಲಿ ಸಂಚಾರ ಬದಲಾವಣೆ

Published : Jun 12, 2023, 07:02 AM IST
Bengaluru: ಜಾಲಹಳ್ಳಿ ಜಂಕ್ಷನ್‌ನಲ್ಲಿ ಇನ್ನೆರಡು ವರ್ಷ ಟ್ರಾಫಿಕ್‌: ಶೀಘ್ರದಲ್ಲಿ ಸಂಚಾರ ಬದಲಾವಣೆ

ಸಾರಾಂಶ

ಕಳೆದ ಐದು ವರ್ಷದಿಂದ ಭೂಸ್ವಾಧೀನ ಪ್ರಕ್ರಿಯೆಯಿಂದ ನೆನೆಗುದಿಗೆ ಬಿದ್ದ ಜಾಲಹಳ್ಳಿ ಕ್ರಾಸ್‌ ಜಂಕ್ಷನ್‌ ಅಂಡರ್‌ ಪಾಸ್‌ ಕಾಮಗಾರಿ ಆರಂಭಗೊಂಡಿದ್ದು, ಶೀಘ್ರದಲ್ಲಿ ಸಂಚಾರ ಮಾರ್ಗ ಬದಲಾವಣೆ ಆಗಲಿದೆ. 

ವಿಶ್ವನಾಥ ಮಲೇಬೆನ್ನೂರು

ಬೆಂಗಳೂರು (ಜೂ.12): ಕಳೆದ ಐದು ವರ್ಷದಿಂದ ಭೂಸ್ವಾಧೀನ ಪ್ರಕ್ರಿಯೆಯಿಂದ ನೆನೆಗುದಿಗೆ ಬಿದ್ದ ಜಾಲಹಳ್ಳಿ ಕ್ರಾಸ್‌ ಜಂಕ್ಷನ್‌ ಅಂಡರ್‌ ಪಾಸ್‌ ಕಾಮಗಾರಿ ಆರಂಭಗೊಂಡಿದ್ದು, ಶೀಘ್ರದಲ್ಲಿ ಸಂಚಾರ ಮಾರ್ಗ ಬದಲಾವಣೆ ಆಗಲಿದೆ. ಹೀಗಾಗಿ, ತುಮಕೂರು ರಸ್ತೆಯಲ್ಲಿ (ರಾಷ್ಟ್ರೀಯ ಹೆದ್ದಾರಿ-4) ವಾಹನ ಸವಾರರು ಟ್ರಾಫಿಕ್‌ ಸಮಸ್ಯೆ ಎದುರಿಸಬೇಕಾಗುತ್ತದೆ. ಅಯ್ಯಪ್ಪಸ್ವಾಮಿ ದೇವಸ್ಥಾನದ ಸುಬ್ರಾತೋ ಮುಖರ್ಜಿ ರಸ್ತೆ ಕಡೆಯಿಂದ ಕಾಮಗಾರಿ ಆರಂಭಿಸಲಾಗಿದ್ದು, ಕೆಲವೇ ದಿನದಲ್ಲಿ ತುಮಕೂರು ರಸ್ತೆ ಜಂಕ್ಷನ್‌ನಲ್ಲಿ ಕಾಮಗಾರಿ ಶುರುವಾಗಲಿದೆ. ಆಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನ ಸವಾರರು ಟ್ರಾಫಿಕ್‌ ಸಮಸ್ಯೆ ಎದುರಾಗಲಿದೆ. 

ಈಗಾಗಲೇ ಪೀಣ್ಯ ಫ್ಲೈಓವರ್‌ ಮೇಲ್ಭಾಗದಲ್ಲಿ ಭಾರೀ ವಾಹನಗಳ ಸಂಚಾರ ನಿಷೇಧಿಸಲಾಗಿದೆ. ಬಸ್‌, ಲಾರಿ ಸೇರಿದಂತೆ ಎಲ್ಲಾ ಭಾರೀ ವಾಹನಗಳು ಜಾಲಹಳ್ಳಿ ಕ್ರಾಸ್‌ ಜಂಕ್ಷನ್‌ ಮೂಲಕವೇ ಸಂಚಾರಿಸಬೇಕಾಗಲಿದೆ. ಹೀಗಾಗಿ, ಭಾರೀ ಪ್ರಮಾಣದ ಸಂಚಾರ ದಟ್ಟಣೆ ಉಂಟಾಗಲಿದೆ. ರಾಷ್ಟ್ರೀಯ ಹೆದ್ದಾರಿ 4ರ ಜಾಲಹಳ್ಳಿ ಕ್ರಾಸ್‌ ಜಂಕ್ಷನ್‌ ಬಳಿ ಭಾರಿ ಪ್ರಮಾಣ ಸಂಚಾರ ದಟ್ಟಣೆ ಉಂಟಾಗುತ್ತಿತ್ತು. ಪೀಣ್ಯ ಕೈಗಾರಿಕಾ ಪ್ರದೇಶ ಎರಡನೇ ಹಂತದ ರಿಂಗ್‌ ರಸ್ತೆ ಹಾಗೂ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಸುಬ್ರಾತೋ ಮುಖರ್ಜಿ ರಸ್ತೆಯಲ್ಲಿ (ಎಂ.ಎಸ್‌.ರಸ್ತೆ) ಸಾರ್ವಜನಿಕರು ಪ್ರತಿನಿತ್ಯ ಭಾರೀ ಸಂಚಾರ ದಟ್ಟಣ ಎದುರಿಸುತ್ತಿದ್ದರು. 

1ನೇ ಗ್ಯಾರಂಟಿ ಜಾರಿ, ನುಡಿದಂತೆ ನಡೆದಿದ್ದೇವೆ: ಸಚಿವ ಪ್ರಿಯಾಂಕ್‌ ಖರ್ಗೆ

ಈ ಹಿನ್ನೆಲೆಯಲ್ಲಿ ಬಿಬಿಎಂಪಿ 2016-17 ಹಾಗೂ 2017-18ನೇ ಸಾಲಿನ ರಾಜ್ಯ ಸರ್ಕಾರದ 57 ಕೋಟಿ ಅನುದಾನದಲ್ಲಿ ಗ್ರೇಡ್‌ ಸಪರೇಟರ್‌ (ಅಂಡರ್‌ ಪಾಸ್‌) ನಿರ್ಮಿಸುವ ಕಾಮಗಾರಿ ಕೈಗೊಳ್ಳಲು ತೀರ್ಮಾನಿಸಿತ್ತು. ಅಂಡರ್‌ ಪಾಸ್‌ ನಿರ್ಮಾಣಕ್ಕೆ ಸಂಬಂಧಿಸಿದಂತೆ 48 ಆಸ್ತಿ ಮಾಲಿಕರಿಂದ ಭೂಸ್ವಾಧೀನ ಪ್ರಕ್ರಿಯೆ ವಿಳಂಬಗೊಂಡ ಪರಿಣಾಮ ಕಾಮಗಾರಿ ಆರಂಭ ತಡವಾಗಿತ್ತು. ಇದೀಗ ಭೂ ಮಾಲಿಕರಿಗೆ ಸುಮಾರು .140 ಕೋಟಿ ಪರಿಹಾರ ನೀಡಿ ಒಟ್ಟು 10,432.78 ಚದರ ಅಡಿ ಸ್ವಾಧೀನ ಪಡಿಸಿಕೊಳ್ಳಲಾಗಿದೆ.

ಎರಡು ವರ್ಷ ದಟ್ಟಣೆ: ಐದು ವರ್ಷದ ಹಿಂದೆಯೇ ಯೋಜನೆ ಆರಂಭವಾಗಬೇಕಿತ್ತು, ಆದರೆ ನಾನಾ ಕಾರಣಗಳಿಂದ ವಿಳಂಬವಾಗಿದ್ದು, ಈಗ ಕಾಮಗಾರಿ ಆರಂಭಿಸಲಾಗಿದೆ. ಕಾಮಗಾರಿ ಪೂರ್ಣವಾಗಲು ಎರಡು ವರ್ಷ ಬೇಕಾಗಬಹುದು ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿಮಾನ ನಿಲ್ದಾಣಕ್ಕೆ ಪರಾರ‍ಯಯ ಮಾರ್ಗ: ನಗರದಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಚಾರಿಸುವ ಪರ್ಯಾಯ ಮಾರ್ಗ ಕಲ್ಪಿಸಲು ಈ ಅಂಡರ್‌ ಪಾಸ್‌ ನಿರ್ಮಿಸಲಾಗುತ್ತಿದೆ. ನಗರದ ಪಶ್ಚಿಮ ಭಾಗದ ಜನರು ವಿಮಾನ ನಿಲ್ದಾಣಕ್ಕೆ ತೆರಳಲು ಸರ್ಕಾರ ಹಾಗೂ ಬಿಬಿಎಂಪಿ ಜಾಲಹಳ್ಳಿ ಕ್ರಾಸ್‌ ವೃತ್ತದಲ್ಲಿ ಕೆಳಸೇತುವೆ ನಿರ್ಮಾಣ, ಸುಬ್ರತೋ ಮುಖರ್ಜಿ ಮುಖ್ಯ ರಸ್ತೆ ವಿಸ್ತರಣೆಗೆ ಕ್ರಮ ಕೈಗೊಂಡಿದೆ.

ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದ್ದು, ಕಾಮಗಾರಿ ಆರಂಭಿಸಲಾಗಿದೆ. ಹೆದ್ದಾರಿ ಪ್ರಾಧಿಕಾರದಿಂದ ವಾಹನ ಸಂಚಾರಕ್ಕೆ ಬದಲಿ ಮಾರ್ಗ ವ್ಯವಸ್ಥೆ ಮಾಡುವಂತೆ ಸೂಚಿಸಿದೆ. ವ್ಯವಸ್ಥೆ ಮಾಡಿದ ಬಳಿಕ ಜಂಕ್ಷನ್‌ನಲ್ಲಿ ಕಾಮಗಾರಿ ಆರಂಭಿಸಲಾಗುವುದು.
-ನಂದೀಶ್‌, ಅಧೀಕ್ಷಕ ಎಂಜಿನಿಯರ್‌, ರಸ್ತೆ ಮೂಲ ಸೌಕರ್ಯ ವಿಭಾಗ, ಆರ್‌.ಆರ್‌.ನಗರ ವಲಯ

ಯೋಜನೆ ವಿವರ
ಯೋಜನಾ ಮೊತ್ತ: 57.22 ಕೋಟಿ
ಒಟ್ಟು ಪಥ: 4
ಅಂಡರ್‌ ಉದ್ದ: 70 ಮೀ.
ಅಂಡರ್‌ ಪಾಸ್‌ ಎತ್ತರ: 4.5 ಮೀ.
ಅಂಡರ್‌ ಪಾಸ್‌ ರಾರ‍ಯಂಪ್‌ನ ಒಟ್ಟು ಉದ್ದ: 306.16 ಮೀ.
ಭೂಮಿ ಸ್ವಾಧೀನ : 10,432.78 ಚದರ ಅಡಿ
ಇತರೆ: 4 ಬಸ್‌ ನಿಲ್ದಾಣ, 2 ಶೌಚಾಲಯ, ಎರಡು ಭಾಗದಲ್ಲಿ ಸರ್ವಿಸ್‌ ರಸ್ತೆ.

ಯಾರಲ್ಲಿ... ಫ್ರೀ ಟಿಕೆಟ್‌ ಟಿಕೆಟ್‌: ರಾಜ್ಯಾದ್ಯಂತ ಏಕಕಾಲಕ್ಕೆ ಮಹಿಳೆಯರ ಉಚಿತ ಬಸ್‌ ಪ್ರಯಾಣಕ್ಕೆ ಚಾಲನೆ

ವಾಹನ, ಪಾದಚಾರಿಗಳ ಸಮೀಕ್ಷೆ ವಿವರ
*ಬೆಳಗ್ಗೆ 9-10ರವರೆಗೆ ಗಂಟೆಗೆ 15,457 ವಾಹನ, 4,832 ಪಾದಚಾರಿಗಳ ಸಂಚಾರ
*ಸಂಜೆ 6-7ರ ಅವಧಿಯಲ್ಲಿ 15,934 ವಾಹನ, ಸಾವಿರಕ್ಕೂ ಹೆಚ್ಚು ಪಾದಚಾರಿಗಳ ಸಂಚಾರ
*ಬೆಳಗ್ಗೆ 6-ರಾತ್ರಿ 10ರ ಅವಧಿಯಲ್ಲಿ ಗಂಟೆಗೆ 10 ಸಾವಿರಕ್ಕೂ ಹೆಚ್ಚು ವಾಹನ ಸಂಚಾರ
*ಪಿಕ್‌ ಅವಧಿಯಲ್ಲಿ ಜಂಕ್ಷನ್‌ನಲ್ಲಿ ವಾಹನ ವೇಗ ಗಂಟೆಗೆ 15ರಿಂದ 20 ಕಿ.ಮೀ.ಗೆ ಇಳಿಕೆ

PREV
Read more Articles on
click me!

Recommended Stories

ಪ್ರೆಗ್ನೆಂಟ್ ಮಾಡಿ ಗರ್ಭಪಾತ ಮಾಡಿಸಿದ, Sorry ಅಮ್ಮಾ ಸಾಯ್ತಿದ್ದೀನಿ: ಯುವತಿ ಆತ್ಮ*ಹತ್ಯೆ
ಉಡುಪಿ: 2 ಗಂಟೆ ಕಾದರೂ ಬರಲಿಲ್ಲ 108 ಆಂಬುಲೆನ್ಸ್‌, ಗೂಡ್ಸ್ ಟೆಂಪೋದಲ್ಲಿ ಸಾಗಿಸಿ ವೃದ್ಧನ ರಕ್ಷಣೆ!