ನದಿಯಲ್ಲಿ ಒಬ್ಬಂಟಿಯಾಗಿ ಈಜಲು ಹೋದ ಯುವಕ ನೀರಿನಲ್ಲಿ ಮುಳುಗಿ ಜಲಸಮಾಧಿ ಆಗಿರುವ ದುರ್ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಸದಲಗಾ ಪಟ್ಟಣದಲ್ಲಿ ನಡೆದಿದೆ.
ಬೆಂಗಳೂರು /ಬೆಳಗಾವಿ (ಮೇ 31): ನದಿಯಲ್ಲಿ ಒಬ್ಬಂಟಿಯಾಗಿ ಈಜಲು ಹೋದ ಯುವಕ ನೀರಿನಲ್ಲಿ ಮುಳುಗಿ ಜಲಸಮಾಧಿ ಆಗಿರುವ ದುರ್ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಸದಲಗಾ ಪಟ್ಟಣದಲ್ಲಿ ನಡೆದಿದೆ.
ಸದಲಗಾ ಪಟ್ಟಣದ ಹೊರವಲಯದ ದೂಧಗಂಗಾ ನದಿಯಲ್ಲಿ ಈಜಲು ತೆರಳಿದ್ದ ಯುವಕ ನೀರುಪಾಲಾಗಿದ್ದಾನೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಸದಲಗಾ ಪಟ್ಟಣದಲ್ಲಿ ಘಟನೆ ನಡೆದಿದೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಗಿರಗಾಂವ್ ಗ್ರಾಮದ ನಿವಾಸಿ ಸಾಗರ ದಿನಕರ್ ವಾಳಕೆ (22) ಮೃತ ದುರ್ದೈವಿ ಯುವಕನಾಗಿದ್ದಾನೆ. ಸ್ಥಳಕ್ಕೆ ಅಗ್ನಿ ಶಾಮಕ ಹಾಗೂ ಸದಲಗಾ ಪೊಲೀಸರ ಭೇಟಿ ಪರಿಶೀಲನೆ ಮಾಡಿದ್ದಾರೆ. ಸದಲಗಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ನಡೆದಿದ್ದು, ಮೃತ ದೇಹಕ್ಕಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಶೋಧನೆ ಮಾಡುತ್ತಿದ್ದಾರೆ.
ಶವಗಳ ಅತ್ಯಾಚಾರ ಮಾಡುವ ಕಾಮುಕರಿಗೆ ಶಿಕ್ಷೆಯ ಚೌಕಟ್ಟು ರೂಪಿಸಿ: ಕೇಂದ್ರಕ್ಕೆ ಕರ್ನಾಟಕ ಹೈಕೋರ್ಟ್ ಶಿಫಾರಸು
ಆನೇಕಲ್ ಕ್ವಾರಿ ನೀಡಿನಲ್ಲಿ ಬಾಲಕರ ಸಾವು: ಬೆಂಗಳೂರು (ಮೇ 31): ಹೊರವಲಯದ ಆನೇಕಲ್ ತಾಲೂಕಿನ ಹುಲಿಮಂಗಲದ ಕ್ವಾರಿಯಲ್ಲಿ ಸಂಗ್ರಹವಾಗಿದ್ದ ನೀರಿನಲ್ಲಿ ಈಜಲು ಹೋಗಿದ್ದ ಇಬ್ಬರು ಬಾಲಕರು ಮುಳುಗಿ ಸಾವನ್ನಪ್ಪಿದ್ದಾರೆ. ಹಾಸನ ಮೂಲತ ತೀರ್ತೇಶ್ (12) ಹಾಗೂ ಫೈಸಲ್ ಖಾನ್ (14) ಮೃತ ಬಾಲಕರಾಗಿದ್ದಾರೆ. ಇವರು ಎಲೆಕ್ಟ್ರಾನಿಕ್ ಸಿಟಿಯ ಮಾರಗೊಂಡನಹಳ್ಳಿಯ ನಿವಾಸಿಗಳಾಗಿದ್ದಾರೆ. ಮಂಗಳವಾರ ಸಂಜೆ ಕ್ವಾರಿಯಲ್ಲಿ ಈಜಲು ಹೋಗಿದ್ದಾರೆ. ಬಾಲಕರು ನೀರಿನಲ್ಲಿ ಮುಳುಗಿದ್ದರಿಂದ ರಾತ್ರಿ ವೇಳೆ ಮನೆಗೆ ಬಂದಿಲ್ಲ. ಹೀಗಾಗಿ, ಆಟವಾಡಲು ಹೋಗುತ್ತಿದ್ದ ಸ್ಥಳಕ್ಕೆ ಹುಡುಕಿಕೊಂಡು ಹೋದಾಗ ಮಕ್ಕಳ ಬಟ್ಟೆ ಮತ್ತು ಚಪ್ಪಲಿಗಳು ಕ್ವಾರಿಯ ಬಳಿ ಪತ್ತೆಯಾಗಿವೆ. ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಮುಳುಗು ತಜ್ಞರು ಸೇರಿ ಬಾಲಕರ ಮೃತದೇಹ ಶೋಧನೆ ಮಾಡುತ್ತಿದ್ದಾರೆ. ಈ ಘಟನೆ ಕುರಿತಂತೆ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅನೈತಿಕ ಸಂಬಂಧ ಬಿಟ್ಟಿರಲಾಗದೇ ಸಾವಿನಲ್ಲಿ ಒಂದಾದ ಜೋಡಿ: ಕೊಪ್ಪಳ(ಮೇ.31): ಅನೈತಿಕ ಸಂಬಂಧಕ್ಕೆ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಇಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಮಾಲಗಿತ್ತಿ ಗ್ರಾಮದಲ್ಲಿ ಇಂದು(ಬುಧವಾರ) ನಡೆದಿದೆ. ಮೃತರನ್ನ ಪೀರಸಾಬ್ ನದಾಫ್ (33), ಶಾರದಾ ಶರಣಪ್ಪ ಬಸಾಪೂರ (30) ಅಂತ ಗುರುತಿಸಲಾಗಿದೆ. ಪೀರಸಾಬ್ ಹಾಗೂ ಶಾರದಾ ಇಬ್ಬರಿಗೂ ಬೇರೆ ಬೇರೆ ಮದುವೆ ಆಗಿತ್ತು. ಆದ್ರೂ ಕೂಡ ಇಬ್ಬರೂ ಅನೈತಿಕ ಸಂಬಂಧ ಹೊಂದಿದ್ದರು. ಅನೈತಿಕ ಸಂಬಂಧ ತಿಳಿದ ಪೀರಸಾಬನ ಪತ್ನಿ ಮೃತ ಶಾರದಾಳ ಜೊತೆ ಜಗಳವಾಡಿದ್ದಳು. ನನ್ನ ಗಂಡನ ಸಹವಾಸ ಬಿಡು ಅಂತ ಶಾರದಾ ಜೊತೆ ಆಗಾಗ ಜಗಳ ಮಾಡ್ತಿದ್ದಳು ಅಂತ ತಿಳಿದು ಬಂದಿದೆ.
ಅಕ್ರಮ ಸಂಬಂಧ ಗೊತ್ತಿದ್ರೂ ಸುಮ್ಮನಿದ್ದ ಗಂಡನನ್ನೇ ಕೊಲ್ಲಿಸಿದ ಪತ್ನಿ
ಸಂಬಂಧದಿಂದ ದೂವಿರಿ ಎಂದಿದ್ದಕ್ಕೆ ಜಗತ್ತಿನಿಂದಲೇ ದೂರವಾದರು: ದೂರ ಆಗುವುದಾದರೇ ಇಬ್ಬರು ಜಗತ್ತಿನಿಂದ ದೂರ ಆಗುತ್ತೇವೆ ಅಂತ ಪೀರಸಾಬ್ ಹಾಗೂ ಶಾರದಾ ಅಂದಿದ್ದರಂತೆ. ಊರ ಹಿರಿಯರು ಇಬ್ಬರಿಗೂ ತಿಳುವಳಿಕೆ ಹೇಳಿದ್ದರು. ಆದರೂ ಕೂಡ ಪೀರಸಾಬ್ ಹಾಗೂ ಶಾರದಾ ಯಾರ ಮಾತು ಕೇಳಿರಲಿಲ್ಲ. ಇಂದು ಜಮೀನಿಗೆ ತೆರಳಿ ಇಬ್ಬರು ಒಟ್ಟಾಗಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ಹನಮಸಾಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಹನಮಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.