Belagavi: ವರದಕ್ಷಿಣೆ ರೂಪದಲ್ಲಿ ನೀರಿನ ಟ್ಯಾಂಕರ್ ಪಡೆದ ವರ‌: ಏಕೆ ಗೊತ್ತಾ?

By Govindaraj S  |  First Published Jul 9, 2022, 4:32 PM IST

• ನೀರಿನ ಸಮಸ್ಯೆಗೆ ಬೇಸತ್ತು ಮಾವನ ಬಳಿ ಟ್ಯಾಂಕರ್‌ಗೆ ಬೇಡಿಕೆ ಇಟ್ಟ ವರ..!
• ನೀರಿನ ಟ್ಯಾಂಕರ್ ಮೇಲೆಯೇ ನವದಂಪತಿ ಬ್ಯಾಂಡ್.. ಬಾಜಾ.. ಬಾರಾತ್..!
• ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ನವದಂಪತಿ ವಿನೂತನ ಪ್ರತಿಭಟನೆ..!


ವರದಿ: ಮಹಾಂತೇಶ ಕುರಬೇಟ್, ಏಷ್ಯಾನೆಟ್ ಸುವರ್ಣನ್ಯೂಸ್,  ಬೆಳಗಾವಿ

ಬೆಳಗಾವಿ (ಜು.09): ಸಾಮಾನ್ಯವಾಗಿ ವರದಕ್ಷಿಣೆ ರೂಪದಲ್ಲಿ ಐಷಾರಾಮಿ ಕಾರು, ಬೈಕ್, ಚಿನ್ನಾಭರಣ, ಹಣ ಪಡೆದ ಸುದ್ದಿ ನೀವು ಕೇಳಿರ್ತೀರಾ? ಆದರೆ ಇಲ್ಲಿ ಒಬ್ಬ ವರ ಮಾವನ ಬಳಿ ನೀರಿನ ಟ್ಯಾಂಕರ್‌ಗೆ ಬೇಡಿಕೆ ಇಟ್ಟಿದ್ದಾನೆ. ಹಾಗಂತ ಈತ ಏನೂ ಟ್ಯಾಂಕರ್ ಚಾಲಕನಲ್ಲ. ಮಹಾರಾಷ್ಟ್ರದ ಕೊಲ್ಲಾಪುರದ ಮಂಗಳವಾರ ಪೇಟೆ ನಿವಾಸಿ ವಿಶಾಲ್ ಕೋಳೆಕರ್ ಹಾಗೂ ಅಪರ್ಣಾ ಸಾಳೋಕೆ ಮದುವೆ ಕಳೆದ ಎರಡು ದಿನಗಳ ಹಿಂದೆ ನಡೆದಿತ್ತು. 

Tap to resize

Latest Videos

ಮಹಾರಾಷ್ಟ್ರದ ಕೊಲ್ಲಾಪುರ ಸೇರಿ ವಿವಿಧೆಡೆ ಕುಂಭದ್ರೋಣ ಮಳೆ ಆಗುತ್ತಿದ್ದರೂ ಸಮರ್ಪಕ ಕುಡಿಯುವ ನೀರು ಸಿಗದೇ ಸಾರ್ವಜನಿಕರು ಪರದಾಡುತ್ತಿದ್ದಾರೆ. ಕಳೆದ ಆರು ತಿಂಗಳಿಂದ ಕೊಲ್ಲಾಪುರ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಳೆದ 6 ತಿಂಗಳಿಂದ ಸಮರ್ಪಕ ನೀರು ಪೂರೈಕೆ ಆಗುತ್ತಿಲ್ಲವಂತೆ. ಇದರಿಂದ ಬೇಸತ್ತು‌ ವರ ವಿಶಾಲ್ ತಾನು ಮದುವೆಯಾಗುವ ಅಪರ್ಣಾ ತಂದೆ ಬಳಿ ನೀರಿನ ಟ್ಯಾಂಕರ್‌ಗೆ ಬೇಡಿಕೆ ಇಟ್ಟಿದ್ದನಂತೆ. 

'ಬಿಜೆಪಿ ಸರ್ಕಾರದ ಅರಾಜಕತೆಯ ದಿನಗಳು' ಕಿರುಹೊತ್ತಿಗೆ ಬಿಡುಗಡೆ ಮಾಡಿದ SDPI

ಅಳಿಯನ ಇಚ್ಛೆಯಂತೆ‌ ವಧು ಅಪರ್ಣಾ ತಂದೆ ಅಳಿಯನಿಗೆ ನೀರಿನ ಟ್ಯಾಂಕರ್ ಗಿಫ್ಟ್ ಕೊಟ್ಟಿದ್ದಾನೆ. ಇದೇ ಟ್ಯಾಂಕರ್‌ ಮೇಲೆ ಕುಳಿತು ವಧು ವರ ಇಬ್ಬರೂ ಕೊಲ್ಲಾಪುರದ ವಿವಿಧ ಬಡಾವಣೆಗಳಲ್ಲಿ ಅದ್ಧೂರಿ ಮೆರವಣಿಗೆ ಮಾಡಿ ಮನೆಗೆ ತೆರಳಿ ಕೊಲ್ಲಾಪುರ ಮಹಾನಗರ ಪಾಲಿಕೆ ವಿರುದ್ಧ ವಿನೂತನ ಪ್ರತಿಭಟನೆ ನಡೆಸಿದ್ದಾರೆ. ಸದ್ಯ ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ನೀರಿನ ಸಮಸ್ಯೆ ಇತ್ಯರ್ಥ ಆಗೋವರೆಗೂ ಹನಿಮೂನ್‌ಗೆ ಹೋಗಲ್ವಂತೆ: ಇನ್ನು ಮಾವ ಕೊಟ್ಟ ನೀರಿನ ಟ್ಯಾಂಕರ್ ಮೇಲೆ ಎಲ್ಲಿಯವರೆಗೆ ನಮ್ಮ ಬಡಾವಣೆಯಲ್ಲಿ‌ ನೀರಿನ ಸಮಸ್ಯೆ ಬಗೆ ಹರಿಯುವುದಿಲ್ಲವೋ ಅಲ್ಲಿಯವರೆಗೂ ನಾವು ಹನಿಮೂನ್‌ಗೆ ಹೋಗಲ್ಲ ಎಂದು ಮರಾಠಿ ಭಾಷೆಯಲ್ಲಿ ಬರೆದ ಬ್ಯಾನರ್ ಸಹ ಕಟ್ಟಿದ್ದಾರೆ. ಇದೇ ವೇಳೆ ಮಾತನಾಡಿದ ವರ ವಿಶಾಲ್, ಕಳೆದ ಆರು ತಿಂಗಳಿಂದ‌ ನಮ್ಮ ಮಂಗಳವಾರ ಪೇಟೆ, ಖಾಸಬಾಗದಲ್ಲಿ ನೀರಿನ‌ ಸಮಸ್ಯೆ ಇದ್ದು, ನಾಲ್ಕು ದಿನಗಳಿಗೊಮ್ಮೆ ನೀರು ಬರುತ್ತಿದೆ. ಕೊಲ್ಲಾಪುರ ಮಹಾನಗರ ಪಾಲಿಕೆ ಸಮರ್ಪಕ ಕ್ರಮ ಕೈಗೊಳ್ಳುತ್ತಿಲ್ಲ. 

ವೀರ ಮದಕರಿ ನಾಯಕ ಬಗ್ಗೆ ಆಕ್ಷೇಪಾರ್ಹ ಕಮೆಂಟ್ ಮಾಡಿದ್ದ ಪ್ರೊಫೆಸರ್ ಕ್ಷ‌ಮೆಯಾಚನೆ

ನಿಮ್ಮ ಮಗಳಿಗೆ ನೀರಿನ ಸಮಸ್ಯೆ ಎದುರಾಗಬಾರದು. ನೀರು ತರಲು ದೂರ ಹೋಗಬಾರದು ಹೀಗಾಗಿ ನೀರಿನ ಟ್ಯಾಂಕರ್ ನೀಡಿ ಎಂದು ನನ್ನ ಮಾವನಿಗೆ ಮನವಿ ಮಾಡಿದ್ದೆ. ನನ್ನ ಮನವಿ ಮೇರೆಗೆ ಮಾವ ನೀರಿನ ಟ್ಯಾಂಕರ್ ಗಿಫ್ಟ್ ಕೊಟ್ಟಿದ್ದಾರೆ' ಎಂದಿದ್ದಾರೆ. ಇನ್ನು ವಧು ಅಪರ್ಣಾ ಮಾತನಾಡಿ ನಾನೂ ಸಹ ನನ್ನ ತಂದೆಗೆ ನೀರಿನ ಟ್ಯಾಂಕರ್ ಕೊಡಿಸಿಕೊಡಿ ಎಂದು ಮನವಿ ಮಾಡಿದ್ದೆ. ಆದಷ್ಟು ಬೇಗ ಕೊಲ್ಲಾಪುರ ಮಹಾನಗರ ಪಾಲಿಕೆಯವರು ಸಮರ್ಪಕ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಿ' ಎಂದು ಮನವಿ ಮಾಡಿದ್ದಾಳೆ.

click me!