ರಾಜಕಾರಣಿಗಳು ಮುಖವಾಡ ಹಾಕಿರುತ್ತಾರೆ| ಸ್ವಾಮೀಜಿಗಳು ಮುಖವಾಡ ಹಾಕಿರಲ್ಲ, ಸ್ವಾಮೀಜಿಗಳಿಗೂ ತಂದೆ ತಾಯಿ ಇರ್ತಾರೆ| ಸ್ವಾಮೀಜಿಗಳು ಸಮಾಜಕ್ಕಾಗಿ ತ್ಯಾಗ ಮಾಡಿದ ಕಾರಣ ದೊಡ್ಡ ದೊಡ್ಡ ಸ್ವಾಮೀಜಿಗಳು ಇಲ್ಲಿದ್ದಾರೆ|
ಬಳ್ಳಾರಿ[ಡಿ.25]: ನನ್ನ ಮಗನ ಮದುವೆಯನ್ನು ಬೆಂಗಳೂರು ಪ್ಯಾಲೇಸ್ ನಲ್ಲಿ ಮಾಡ್ಬೇಕು ಅಂತಾ ಕನಸು ಕಾಣುತ್ತಾ ಇದ್ದೇನೆ, ನನ್ನ ಮಗ ಇಂಜಿನಿಯರ್ ಅದಾನ, ಯಾರಾದ್ರು ಪಂಚಮಸಾಲಿ ಕನ್ಯಾ ಇದ್ದರೆ ನೋಡ್ರಪ್ಪಾ ಒಂದ್ ಚೂರ್ ನನಗೆ ಒಬ್ಬನೇ ಮಗ ಇದ್ದಾನೆ. ನಾನು ಸಮಾಜಕ್ಕಾಗಿ ನನ್ನ ಮಗನನ್ನ ತ್ಯಾಗ ಮಾಡಲ್ಲ ಅಂತ ತಮ್ಮ ಮಗನ ಮದುವೆಯ ಕನಸಿನ ಬಗ್ಗೆ ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಮಾತನಾಡಿದ್ದಾರೆ.
ಮಂಗಳವಾರ ಜಿಲ್ಲೆಯ ವಟ್ಟಮ್ಮನಹಳ್ಳಿಯಲ್ಲಿ ನಡೆದ ಬಸವೇಶ್ವರ ಸ್ವಾಮಿಯ 25ನೇ ವರ್ಷದ ಕಾರ್ತಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜಕಾರಣಿಗಳು ಮುಖವಾಡ ಹಾಕಿರುತ್ತಾರೆ. ಆದರೆ ಸ್ವಾಮೀಜಿಗಳು ಮುಖವಾಡ ಹಾಕಿರಲ್ಲ, ಸ್ವಾಮೀಜಿಗಳಿಗೂ ತಂದೆ ತಾಯಿ ಇರ್ತಾರೆ. ಆದ್ರೇ ಅವರು ಸಮಾಜಕ್ಕಾಗಿ ತ್ಯಾಗ ಮಾಡಿದ ಕಾರಣ ದೊಡ್ಡ ದೊಡ್ಡ ಸ್ವಾಮೀಜಿಗಳು ಇಲ್ಲಿದ್ದಾರೆ ಎಂದು ಹೇಳಿದ್ದಾರೆ.
ನಾವು ಸಮಾಜಕ್ಕೆ ಮಕ್ಕಳನ್ನ ತ್ಯಾಗ ಮಾಡುವುದಿಲ್ಲ, ನಾನಂತೂ ಮಾಡೋದೆ ಇಲ್ಲ, ಸ್ವಾಮೀಜಿಗಳದ್ದು ತ್ಯಾಗಮಯಿ ಜೀವನವಾಗಿರುತ್ತದೆ. ಸ್ವಾಮೀಜಿಗಳು ಸಮಾಜ ಕಟ್ಟುವ ಕೆಲಸ ಮಾಡುತ್ತಾರೆ ಎಂದು ಹೇಳಿದ್ದಾರೆ.