ಕಿತ್ತೂರು ಉತ್ಸವಕ್ಕೆ ಮುನ್ನವೇ ಕಳಚಿಬಿದ್ದ ಚನ್ನಮ್ಮ ಪ್ರತಿಮೆಯ ಖಡ್ಗ ಹಿಡಿದ ಬಲಗೈ! ರಾತ್ರೋ ರಾತ್ರಿ ನಡೆದಿದ್ದೇನು?

Kannadaprabha News   | Kannada Prabha
Published : Oct 22, 2026, 08:38 AM IST
Rani Chennamma Statues Sword Holding Hand Breaks Off

ಸಾರಾಂಶ

ಕಿತ್ತೂರು ಉತ್ಸವಕ್ಕೆ ದಿನಗಣನೆ ಇರುವಾಗಲೇ ರಾಷ್ಟ್ರೀಯ ಹೆದ್ದಾರಿ ಪಕ್ಕದ ಚನ್ನಮ್ಮಾಜಿಯ ಪುತ್ಥಳಿಯ ಬಲಗೈ ಕಳಚಿದ್ದು, ಅಧಿಕಾರಿಗಳು ರಾತ್ರೋರಾತ್ರಿ ಸರಿಪಡಿಸಿದ್ದಾರೆ. 20 ವರ್ಷ ಹಳೆಯದಾದ ಈ ಭಿನ್ನವಾದ ಮೂರ್ತಿಯನ್ನು ಬದಲಾಯಿಸಿ ಹೊಸ ಮೂರ್ತಿ ಪ್ರತಿಷ್ಠಾಪಿಸಲು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಕಿತ್ತೂರು (ಅ.22): ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಪಕ್ಕದ ಚನ್ನಮ್ಮಾಜಿಯ ಪುತ್ಥಳಿಯ ಕಳಚಿದ್ದ ಖಡ್ಗ ಹಿಡಿದಿದ್ದ ಬಲಗೈಯನ್ನು ತಾಲೂಕಾಡಳಿತದ ಅಧಿಕಾರಿಗಳು ರಾತ್ರೋರಾತ್ರಿ ಸರಿಪಡಿಸಿದ್ದಾರೆ.

ಚನ್ನಮ್ಮ ಪುತ್ಥಳಿಯ ಬಲಗೈ ಕಳಚಿದ್ದು ವೈರಲ್

ಬಲಗೈ ಕಳಚಿದ ವಿಷಯ ಕಾಡ್ಗಿಚ್ಚಿನಂತೆ ಹರಡಿದ ಪರಿಣಾಮ ಎಚ್ಚೆತ್ತ ಜಿಲ್ಲಾಡಳಿತ ಹಾಗೂ ತಾಲೂಕಾಡಳಿತದ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಮಧ್ಯರಾತ್ರಿಯೇ ಸವದತ್ತಿಯ ಉಗರಗೋಳ ಗ್ರಾಮದ ಕೆಲಸಗಾರರನ್ನು ಕರೆಸಿ ಸರಿಪಡಿಸಿದ್ದಾರೆ.

ಅ.23 ರಿಂದ 25ರವರೆಗೆ ನಡೆಯುವ ಕಿತ್ತೂರು ಉತ್ಸವಕ್ಕೆ ಸಚಿವರು ಹಾಗೂ ಜನಪ್ರತಿನಿಧಿಗಳು ಸೇರಿದಂತೆ ಸಾರ್ವಜನಿಕರು ಆಗಮಿಸಲಿದ್ದಾರೆ. ಈ ಪುತ್ಥಳಿಗೆ ಮಾಲಾರ್ಪಣೆ ಮಾಡಿ ನಂತರ ಇಲ್ಲಿಯೇ ವೀರಜ್ಯೋತಿಯನ್ನು ಬರಮಾಡಿಕೊಂಡು ಈ ಸ್ಥಳದಿಂದಲೇ ಮೆರವಣಿಗೆ ಆರಂಭಿಸುವ ವಾಡಿಕೆ. ಆದರೆ, ಉತ್ಸವಕ್ಕೆ ಎರಡು ದಿನ ಬಾಕಿ ಉಳಿದ ಪರಿಣಾಮ ಎಲ್ಲರಲ್ಲಿಯೂ ಈ ಬಲಗೈ ಕಳಚಿದೆ ಪ್ರಕರಣ ತಲ್ಲಣ ಮೂಡಿಸಿತ್ತು. ಪರಿಣಾಮ ಮಧ್ಯರಾತ್ರಿವರೆಗೂ ತಾಲೂಕಾಡಳಿತ ಎಚ್ಚರಿಕೆ ವಹಿಸಿ ಎಲ್ಲವನ್ನು ಸರಿಪಡಿಸಿದೆ.

ಈ ಸಂದರ್ಭದಲ್ಲಿ ಪಪಂ ಅಧ್ಯಕ್ಷ ಜೈಸಿದ್ದರಾಮ ಮಾರಿಹಾಳ, ಪಪಂ ಸದಸ್ಯರು ಸೇರಿದಂತೆ ತಹಸೀಲ್ದಾರ್‌ ಕಲ್ಲಗೌಡ ಪಾಟೀಲ, ಸಿಪಿಐ ಸಿವಾನಂದ ಗುಡಗನಟ್ಟಿ, ಪಿಎಸ್ಐ ಭರತ.ಎಸ್, ಪಪಂ ಮುಖ್ಯಾಧಿಕಾರಿ ಮಲ್ಲಯ್ಯಾ ಹಿರೇಮಠ ಸೇರಿದಂತೆ ಪ್ರಮುಖರು ಹಾಗೂ ಶಾಸಕರ ಆಪ್ತರು ಸ್ಥಳದಲ್ಲಿದ್ದರು.

ಮೂರ್ತಿ ಬದಲಾವಣೆಗೆ ಆಗ್ರಹ

ಪುತ್ಥಳಿ ಪ್ರತಿಷ್ಠಾಪಿಸಿ 20 ವರ್ಷ ಕಳೆದರೂ ಜಿಲ್ಲಾಡಳಿತ ಹಾಗೂ ತಾಲೂಕಾಡಳಿತ ಇತ್ತ ಗಮನ ಹರಿಸಿಲ್ಲ. ಈಗ ಬಲಗೈ ಕಳಚಿ ಭಿನ್ನವಾಗಿದೆ. ಕೂಡಲೇ ಈ ಮೂರ್ತಿಯನ್ನು ಬದಲಾಯಿಸಿ ನೂತನ ಮೂರ್ತಿಯನ್ನು ಪ್ರತಿಷ್ಠಾಪಿಸುವಂತೆ ಚನ್ನಮ್ಮಾಜಿಯ ಅಭಿಮಾನಿಗಳು ಹಾಗೂ ಪಟ್ಟಣದ ನಾಗರಿಕರು ಮತ್ತು ಸಂಘ ಸಂಸ್ಥೆಗಳ ಮುಖಂಡರು ಆಗ್ರಹಿಸಿದ್ದಾರೆ.

PREV
Read more Articles on
click me!

Recommended Stories

ಸರ್ಕಾರಿ ಶಾಲೆ ಅಲ್ಲ, ಆದ್ರೂ ಈ ಶಾಲೇಲಿ 8000 ಮಕ್ಕಳಿಗೆ ಉಚಿತ ಶಿಕ್ಷಣ! ಬಡ ಮಕ್ಕಳ ಕನಸುಗಳಿಗೆ ರೆಕ್ಕೆ ಕಟ್ಟಿದ ಇಸ್ರೋದ ಮಾಜಿ ವಿಜ್ಞಾನಿ!
ದಕ್ಷಿಣ ಕನ್ನಡ, ಉಡುಪಿಯಲ್ಲಿ ಗುಡುಗು ಸಹಿತ ಭರ್ಜರಿ ಮಳೆ! ಇಂದಿನ ಹವಾಮಾನ ಹೇಗಿದೆ?