ಉಡುಪಿ: ಬೇಲಾಡಿ- ಪರಪ್ಪಾಡಿ ಸಂಪರ್ಕ ರಸ್ತೆ ಅವ್ಯವಸ್ಥೆ

By Kannadaprabha NewsFirst Published Sep 30, 2019, 10:23 AM IST
Highlights

ಕಾಂತಾವರ ಗ್ರಾಮದ ಬೇಲಾಡಿಯಿಂದ ಲೆಕ್ಕೆಸಿರಿಪಲ್ಕೆ ಮೂಲಕ ಹಾದು ಹೋಗುವ, ನಿಟ್ಟೆಗ್ರಾಮದ ಪರಪ್ಪಾಡಿಯನ್ನು ಸಂಪರ್ಕಿಸುವ ರಸ್ತೆ ಸಂಪೂರ್ಣ ದುಸ್ತಿತಿಯಲ್ಲಿದೆ. ಕಾಂತಾವರ ಬೇಲಾಡಿಯಿಂದ ನಿಟ್ಟೆಸಂಪರ್ಕಿಸುವ ಅತಿ ಹತ್ತಿರದ ರಸ್ತೆ ಇದಾಗಿರುವ ಕಾರಣ, ರಸ್ತೆ ಅಭಿವೃದ್ಧಿಗೆ ಗ್ರಾಮಸ್ಥರ ಬೇಡಿಕೆ ಇಟ್ಟಿದ್ದಾರೆ.

ಉಡುಪಿ(ಸೆ.30): ಕಾಂತಾವರ ಗ್ರಾಮದ ಬೇಲಾಡಿಯಿಂದ ಲೆಕ್ಕೆಸಿರಿಪಲ್ಕೆ ಮೂಲಕ ಹಾದು ಹೋಗುವ, ನಿಟ್ಟೆಗ್ರಾಮದ ಪರಪ್ಪಾಡಿಯನ್ನು ಸಂಪರ್ಕಿಸುವ ರಸ್ತೆ ಸಂಪೂರ್ಣ ನಾದುರಸ್ತಿಯಲ್ಲಿದೆ. ಕಾಂತಾವರ ಬೇಲಾಡಿಯಿಂದ ನಿಟ್ಟೆಸಂಪರ್ಕಿಸುವ ಅತಿ ಹತ್ತಿರದ ರಸ್ತೆ ಇದಾಗಿರುವ ಕಾರಣ, ರಸ್ತೆ ಅಭಿವೃದ್ಧಿಗೆ ಗ್ರಾಮಸ್ಥರ ಬೇಡಿಕೆ ಇಟ್ಟಿದ್ದಾರೆ.

ಪ್ರಸ್ತುತ ಈ ರಸ್ತೆ ಹದಗೆಟ್ಟಿರುವ ಪರಿಣಾಮ, ಬೇಲಾಡಿಯಿಂದ ನಿಟ್ಟೆಪರಪ್ಪಾಡಿಗೆ ಸಂಪರ್ಕಿಸಲು ಬೋಳ- ಕೆಮ್ಮಣ್ಣು ರಸ್ತೆಯನ್ನು ಅವಲಂಬಿಸಬೇಕಾಗಿದೆ. ಇದು 15 ಕಿ.ಮೀ. ದೂರವಿದೆ. ಬೇಲಾಡಿ ಪರಪ್ಪಾಡಿ ರಸ್ತೆಯು ಸಂಚಾರ ಯೋಗ್ಯವಾಗಿಲ್ಲ, ನಿರ್ಮಾಣಗೊಂಡಂದಿನಿಂದ ಈವರೆಗೆ ಡಾಂಬರೀಕರಣ ಕಂಡಿಲ್ಲ. ಇದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗುತ್ತಿದೆ.

ಮಂಗಳೂರು ದಸರಾಕ್ಕೆ ವೈಭವದ ಚಾಲನೆ

ಬೇಲಾಡಿಯಿಂದ ತಾಲೂಕು ಕೇಂದ್ರ ಕಾರ್ಕಳಕ್ಕೆ ಬರಲು ಇದು ಅತ್ಯಂತ ಸಮೀಪದ ರಸ್ತೆಯಾಗಿದೆ. ನಿಟ್ಟೆವಿದ್ಯಾಸಂಸ್ಥೆಗೆ ಆಗಮಿಸುವ ವಿದ್ಯಾರ್ಥಿಗಳಿಗೂ ಇದು ಅತ್ಯಂತ ಹತ್ತಿರದ ದಾರಿಯಾಗಲಿದೆ. ಇದು ನಿಟ್ಟೆ- ಪರಪ್ಪಾಡಿ ಮತ್ತು ಬೇಲಾಡಿಯನ್ನು ಬೆಸೆಯುವ ಪ್ರಮುಖ ರಸ್ತೆಯೂ ಹೌದು. ಭೌಗೋಳಿಕವಾಗಿ ನಿಟ್ಟೆಗ್ರಾಮದ ಪರಪ್ಪಾಡಿಯ ಹತ್ತಿರದ ಮೊರಂಪುಗುಡ್ಡೆ ಹಾಗೂ ಆಸುಪಾಸಿನ 50ಕ್ಕೂ ಅಧಿಕ ಮನೆಗಳು ಕಾಂತಾವರ ಗ್ರಾಮಕ್ಕೊಳಪಟ್ಟಿವೆ. ಕಾಂತಾವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೇಲಾಡಿ ವಾರ್ಡ್‌ಗೆ ಸೇರಿರುವ ಈ ಪ್ರದೇಶದ ಜನರು, ಗ್ರಾ.ಪಂ.ನ ಕೆಲಸ ಕಾರ್ಯಗಳಿಗೆ ಹೋಗಬೇಕಾದರೆ, ದೂರದ ಬಾರಾಡಿ, ಚಿಲಿಂಬಿ, ಬೆಳುವಾಯಿಯಾಗಿ ಕಾಂತಾವರಕ್ಕೆ ತೆರಳಬೇಕು. ಅಲ್ಲಿ ಸುತ್ತು ಬಳಸಿ ತೆರಳಬೇಕಾದ ಅನಿವಾರ್ಯತೆ ಜನತೆಯದ್ದಾಗಿದೆ.

ಪಡಿತರಕ್ಕಾಗಿ ಪರದಾಟ...!:

ಇಲ್ಲಿನ ಜನತೆಯ ಮುಖ್ಯ ಸಮಸ್ಯೆ ಏನೆಂದರೆ ಪಡಿತರ (ರೇಷನ್‌) ಖರೀದಿಸಲು ಕಾಂತಾವರಕ್ಕೆ ಹೋಗಬೇಕು. ಆಟೋ ರಿಕ್ಷಾ ಮೂಲಕ ಅದೇ ಚಿಲಿಂಬಿಯಾಗಿ 10-12 ಕಿ.ಮೀ. ದೂರ ಸಾಗಬೇಕು. ಅಷ್ಟೊಂದು ಸಮಸ್ಯೆಯಿದ್ದರೂ, ಈವರೆಗೆ ಸ್ಥಳೀಯ ಜನಪ್ರತಿನಿಧಿಗಳು ಈ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಇದಕ್ಕೆ ಪರಿಹಾರವೇ ಸಂಪರ್ಕ ರಸ್ತೆಯ ದುರಸ್ತಿ ಎನ್ನುತ್ತಾರೆ ಸ್ಥಳೀಯರು.

ಚರ್ಚ್‌ಗೆ ತೆರಳುವ ಸಮಸ್ಯೆ:

ನಿಟ್ಟೆಪರಪ್ಪಾಡಿಯಲ್ಲಿ ನಿರ್ಮಲ ಪದವು ಚಚ್‌ರ್‍ (ಕ್ರೆತ್ರೖಸ್ತ ಧಾರ್ಮಿಕ ಕೇಂದ್ರ) ಇದೆ. ಚಚ್‌ರ್‍ ವ್ಯಾಪ್ತಿಗೆ ಒಳಪಡುವ ಕ್ರೈಸ್ತ ಧರ್ಮೀಯರ ಮನೆಗಳು ಬೇಲಾಡಿ ಹಾಗೂ ಬೋಳ ವಂಜಾರಕಟ್ಟೆಭಾಗದಲ್ಲಿಯೂ ಇದೆ. ಪ್ರತಿ ಭಾನುವಾರ ಅವರೆಲ್ಲರೂ ಪ್ರಾರ್ಥನೆ ಸಲ್ಲಿಸಲು ಇದೇ ಬೇಲಾಡಿ ಲೆಕ್ಕೆಸಿರಿ ಪಲ್ಕೆ ಮಾರ್ಗವಾಗಿ ತೆರಳುತ್ತಾರೆ. ಮಳೆಗಾಲ ಬಂದಾಕ್ಷಣ ಇಲ್ಲಿ ಕಾರು ಹಾಗೂ ದ್ವಿಚಕ್ರ ವಾಹನಗಳು ಸಂಚರಿಸುವುದು ದುಸ್ತರವಾಗುದರಿಂದ, ಅವರೂ 15 ಕಿ.ಮೀ. ಸುತ್ತು ಬಳಸಿ ಸಂಚರಿಸುವ ಅನಿವಾರ್ಯತೆಯಿದೆ.

ದೇವಸ್ಥಾನದ ಕೆರೆಗಳಿಗೆ ಅಲಂಕಾರಿಕ ಮೀನು: ಸಚಿವ ಕೋಟ

click me!