ಗೋಕರ್ಣದ ಬೀದಿಗಳಲ್ಲಿ ಕಳೆದ ಎರಡು ದಿನಗಳಿಂದ ವಿದೇಶಿ ಪ್ರವಾಸಿ ಮಹಿಳೆ ಚಿಕ್ಕ ಪೀಟಿಲಿನಂತಹ ಸಂಗೀತ ಉಪಕರಣ ನುಡಿಸುತ್ತಾ ಅಲ್ಲಲ್ಲಿ ನಿಂತು ಭಿಕ್ಷಾಟನೆಯಲ್ಲಿ ತೊಡಗಿದ್ದು, ಪ್ರವಾಸಿಗರಿಗೆ ಕುತೂಹಲಕ್ಕೆ ಕಾರಣವಾಗಿದೆ. ಇದು ಉಪೇಂದ್ರರ ಸಿನಿಮಾವೊಂದರ ಹಾಡಿನಲ್ಲಿ ತೋರಿಸಿದಂತೆ ಇದೆ ಎಂದು ಪ್ರವಾಸಿಗರು ಆಡಿಕೊಳ್ತಿದ್ದಾರೆ.
ಗೋಕರ್ಣ (ಜ.18) : ಉಪೇಂದ್ರ ಅಭಿನಯದ ಸಿನಿಮಾವೊಂದರ ಹಾಡಿನಲ್ಲಿ ಭಾರತ 2030ರ ವೇಳೆಗೆ ಹೇಗೆ ಇರಲಿದೆ ಎಂಬುದನ್ನೂ ಸೂಚ್ಯವಾಗಿ ತೋರಿಸಲಾಗಿದೆ. ಹಾಡಿನಲ್ಲಿ ಅಮೆರಿಕನ್ನರು ಮುಂದುವರಿದ ರಾಷ್ಟ್ರಗಳು ಭಾರತದಲ್ಲಿ ಟ್ಯಾಕ್ಸಿ ಡ್ರೈವರ್, ಸೆಕ್ಯುರಿಟಿ ಗಾಡ್, ಸಣ್ಣಪುಟ್ಟ ಕೆಲಸ ಮಾಡುವವರು ಮದುವೆ ಮಂಟಪದ ಮುಂದೆ ಭಿಕ್ಷೆಗೆ ಕಾದು ಕುಳಿತ ವಿದೇಶಿಯರನ್ನು ತೋರಿಸಲಾಗಿದೆ. ಭವಿಷ್ಯದ ಭಾರತ ಆ ಮಟ್ಟಿಗೆ ಮುಂದುವರಿಯಲಿದೆ ಎಂದು ಸೂಚ್ಯವಾಗಿ ಹೇಳಲಾಗಿತ್ತು. ಇದೀಗ ಉಪೇಂದ್ರರ ಕಲ್ಪನೆಯಂತೆ ಭಾರತದಲ್ಲಿ ಅಂಥ ಘಟನೆ ನಡೆದಿದೆ. ಗೋಕರ್ಣಕ್ಕೆ ಪ್ರವಾಸ ಬಂದ ವಿದೇಶಿ ಮಹಿಳೆಯೊಬ್ಬಳು ಪಿಟೀಲು ನುಡಿಸುತ್ತ ಭಿಕ್ಷೆ ಬೇಡುತ್ತಿರುವ ದೃಶ್ಯ ಎಲ್ಲೆಡೆ ವೈರಲ್ ಆಗಿದೆ. ಉಪೇಂದ್ರರದು ಕಲ್ಪನೆಯಲ್ಲ, ಮುಂದಾಲೋಚನೆ, ದೂರದೃಷ್ಟಿ ಎಷ್ಟೊಂದು ನಿಖರವಾಗಿದೆ ಎಂದು ಬೆರಗು ಮೂಡಿಸುತ್ತಿದೆ ಎಂದು ಮಾತಾಡಿಕೊಳ್ಳುತ್ತಿದ್ದಾರೆ.
ವಿದೇಶಕ್ಕೆ ಉದ್ಯೋಗ ಅರಸಿ ಹೊಗುವವರು ಉದ್ಯೋಗದಲ್ಲಿ ನಿರತರಾಗುತ್ತಾರೆ. ಪ್ರವಾಸಕ್ಕಾಗಿ ಹೋದವರು ಪ್ರವಾಸ ಸ್ಥಳಗಳಿಗೆ ಭೇಟಿ ನೀಡಿ ಬರುತ್ತಾರೆ. ಆದರೆ, ಇಲ್ಲಿಗೆ ಬರುವ ವಿದೇಶಿ ಪ್ರವಾಸಿಗರು ವ್ಯಾಪಾರ ಸೇರಿದಂತೆ ಒಂದಿಲ್ಲೊಂದು ಕಾರ್ಯದಲ್ಲಿ ತೊಡಗಿಗೊಳ್ಳುತ್ತಿರುವ ದೃಶ್ಯಗಳು ಕಾಣಸಿಗುತ್ತವೆ. ಆದರೆ, ಕಳೆದ ಎರಡು ದಿನಗಳಿಂದ ವಿದೇಶಿ ಪ್ರವಾಸಿ ಮಹಿಳೆ ಚಿಕ್ಕ ಪೀಟಿಲಿನಂತಹ ಸಂಗೀತ ಉಪಕರಣ ನುಡಿಸುತ್ತಾ ಅಲ್ಲಲ್ಲಿ ನಿಂತು ಭಿಕ್ಷಾಟನೆಯಲ್ಲಿ ತೊಡಗಿದ್ದು, ಪ್ರವಾಸಿಗರಿಗೆ ಕುತೂಹಲವಾದರೆ, ವಿದೇಶಿಗರು ಇಲ್ಲಿಗೆ ಭಿಕ್ಷಾಟನೆಗೆ ಬಂದಿದ್ದಾರೆಯೇ ಎಂದು ಸ್ಥಳೀಯರು ಆಡಿಕೊಳ್ಳುತ್ತಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ನಿಂತು ತಾನೇ ಮೊದಲು ಹಣ ಹಾಕಿ ಜನರು ಹಣ ನೀಡುವಂತೆ ಸೂಚಿಸುತ್ತಾಳೆ.
undefined
ದೆಹಲಿ: ವಿದೇಶಿ ಮಹಿಳೆ ಮುಂದೆ ಹಸ್ತಮೈಥುನ: ಕ್ಯಾಬ್ ಚಾಲಕ ಅರೆಸ್ಟ್
ಬೇರೆ ದೇಶಕ್ಕೆ ಯಾವ ಉದ್ದೇಶದಿಂದ ನಾವು ತೆರಳುತ್ತೇವೆಯೂ ಅದನ್ನೇ ಮಾಡಬೇಕು. ಆದರೆ, ನಮ್ಮ ದೇಶಕ್ಕೆ ಪ್ರವಾಸಿ ವೀಸಾದಲ್ಲಿ ಬರುವ ವಿದೇಶಿಗರು ಬಿಂದಾಸ್ ಆಗಿ ಯಾವುದೇ ಚಟುವಟಿಕೆಯಲ್ಲಿ ತೊಡಗಿದರು ಯಾರೂ ಕೇಳುವವರೇ ಇಲ್ಲವಾಗಿದೆ. ಈ ಬಗ್ಗೆ ಸಂಬಂಧಿಸಿದ ಇಲಾಖೆ ನಿಗಾವಹಿಸಿ ಕ್ರಮ ತೆಗೆದುಕೊಳ್ಳಬೇಕು ಎಂಬ ಆಗ್ರಹ ಸಾರ್ವಜನಿಕರಿಂದ ಕೇಳಿಬರುತ್ತಿದೆ