ಬಾದಾಮಿ: ದೇಗುಲ ಪ್ರವೇಶಿಸಿದ ದಲಿತ ವ್ಯಕ್ತಿಗೆ ಕಂಬಕ್ಕೆ ಕಟ್ಟಿ ಥಳಿತ..!

By Kannadaprabha News  |  First Published Sep 15, 2024, 8:33 AM IST

ಅರ್ಜುನ ಬಸಪ್ಪ ಮಾದರ ಎಂಬ ಯುವಕ ಉಗಲವಾಟ ಗ್ರಾಮದ ದ್ಯಾಮವ್ವ ಗುಡಿಯ ಒಳಗೆ ಹೋಗಿ ದೇವರಿಗೆ ನಮಸ್ಕಾರ ಮಾಡಿದ್ದಾನೆ. ಇದೇ ವೇಳೆ ಅಲ್ಲಿಯೇ ಇದ್ದ ಕೆಲವರು ನೀನು ದಲಿತ ಇದ್ದೀಯಾ ಯಾಕೆ ಗುಡಿಯ ಒಳಗೆ ಹೋಗಿ ನಮಸ್ಕಾರ ಮಾಡಿದಿಯಾ ಎಂದು ಆತನೊಂದಿಗೆ ವಾಗ್ವಾದ ನಡೆಸಿ, ಅವಾಚ್ಯವಾಗಿ ನಿಂದಿಸಿದ್ದಾರೆ. 


ಕೆರೂರ(ಸೆ.15):  ದೇವಾಲಯಕ್ಕೆ ಹೋಗುವ ವಿಚಾರಕ್ಕೆ ಸಂಬಂಧಿಸಿದಂತೆ ದಲಿತ ಯುವಕನ ಜೊತೆ ವಾಗ್ವಾದ ನಡೆದು ಆತನನ್ನು ಕಂಬಕ್ಕೆ ಕಟ್ಟಿ ಥಳಿಸಿ, ದಲಿತರಿಗೆ ಬಹಿಷ್ಕಾರ ಹಾಕಿದ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಉಗಲವಾಟ ಗ್ರಾಮದಲ್ಲಿ ಇತ್ತೀಚೆಗೆ ನಡೆದಿದ್ದು, ಈ ಸಂಬಂಧ 21 ಜನರ ವಿರುದ್ಧ ಎಫ್‌ಐಆ‌ರ್ ದಾಖಲಾ ಗಿದೆ. ಈ ಸಂಬಂಧ ಶನಿವಾರ ಎಸ್.ಪಿ. ಅಮರನಾಥ ರೆಡ್ಡಿ ಗ್ರಾಮಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ. 

ಉಗಲವಾಟ ಗ್ರಾಮದ ಅರ್ಜುನ್ ಮಾದರ(28) ಥಳಿತಕ್ಕೊಳಗಾದ ಯುವಕ. ಈ ಸಂಬಂಧ ಮುದ್ದಿನಗೌಡ ದ್ಯಾಮನಗೌಡ ಸತ್ಯನ್ನವರ, ಮಂಜುನಾಥ ಲೆಂಕೇಶ ಮೂಲಿಮನಿ, ತುಳಸಿಗೇರಪ್ಪ ಕಾಮಪ್ಪ ತಳವಾರ ಸೇರಿದಂತೆ 21 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. 

Tap to resize

Latest Videos

undefined

ಯಾದಗಿರಿ: ದಲಿತರಿಗೆ ಬಹಿಷ್ಕಾರ, 10 ಜನರ ವಿರುದ್ಧ ಕೇಸ್, ಎಲ್ಲರೂ ನಾಪತ್ತೆ..!

ಏನಿದು ಘಟನೆ?:

ಸೆ.10ರಂದು ಅರ್ಜುನ ಬಸಪ್ಪ ಮಾದರ(28) ಎಂಬ ಯುವಕ ಉಗಲವಾಟ ಗ್ರಾಮದ ದ್ಯಾಮವ್ವ ಗುಡಿಯ ಒಳಗೆ ಹೋಗಿ ದೇವರಿಗೆ ನಮಸ್ಕಾರ ಮಾಡಿದ್ದಾನೆ. ಇದೇ ವೇಳೆ ಅಲ್ಲಿಯೇ ಇದ್ದ ಕೆಲವರು ನೀನು ದಲಿತ ಇದ್ದೀಯಾ ಯಾಕೆ ಗುಡಿಯ ಒಳಗೆ ಹೋಗಿ ನಮಸ್ಕಾರ ಮಾಡಿದಿಯಾ ಎಂದು ಆತನೊಂದಿಗೆ ವಾಗ್ವಾದ ನಡೆಸಿ, ಅವಾಚ್ಯವಾಗಿ ನಿಂದಿಸಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ. ಸಂದರ್ಭದಲ್ಲಿ 20ಕ್ಕೂ ಅಧಿಕ ಜನರು ಸೇರಿ ಆತನನ್ನು ಕಂಬಕ್ಕೆ ಕಟ್ಟಿ ಹಲ್ಲೆ ಮಾಡಿ, ಜಾತಿ ನಿಂದನೆ ಮಾಡಿದ್ದಾರೆ ಎಂದು ಹಲ್ಲೆಗೊಳಗಾದ ವ್ಯಕ್ತಿ ಕೆರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಘಟನೆ ಸಂಬಂಧ 21 ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.

ಗ್ರಾಮಕ್ಕೆ ಎಸ್ಪಿ ಭೇಟಿ: 

ಈ ಘಟನೆ ಮಾಹಿತಿ ತಿಳಿದು ಬಾಗಲಕೋಟೆ 2.2. ಅಮರನಾಥ ರೆಡ್ಡಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಹಿರಿಯ ಪೊಲೀಸ್ ಅಧಿಕಾರಿಗಳು ಸಾಥ್ ನೀಡಿದರು. ಇತ್ತ ವಿಷಯ ತಿಳಿದ ದಲಿತ ಮುಖಂಡರು ಉಗಲವಾಟ ಗ್ರಾಮಕ್ಕೆ ಆಗಮಿಸಿ ಗ್ರಾಮದ ದಲಿತ ಮುಖಂಡರ ಜೊತೆ ಚರ್ಚೆ ನಡೆಸಿದರು. ನಂತರ ಈ ಘಟನೆಗೆತೀವ್ರ ಆಕ್ರೋಶವ್ಯಕ್ತಪಡಿಸಿದರು. ಅಲ್ಲದೇ ಘಟನೆ ಖಂಡಿಸಿ ಬಾಗಲಕೋಟೆ ಜಿಲ್ಲಾಡಳಿತ ಭವನಕ್ಕೆ ಪಾದಯಾತ್ರೆ ಹೊರಡಲು ನಿರ್ಧಾರ ಮಾಡಿದರು.

click me!