ಗಂಗಾವತಿ ನಗರದೊಳಗೆ ನುಗ್ಗಿದ ಕರಡಿ: ಮೂವರ ಮೇಲೆ ದಾಳಿ, ಬೆಚ್ಚಿಬಿದ್ದ ಜನತೆ

By Suvarna News  |  First Published May 9, 2021, 10:32 AM IST

* ಮೂವರ ಮೇಲೆ ಕರಡಿ ದಾಳಿ
* ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದಲ್ಲಿ ನಡೆದ ಘಟನೆ 
* ಗಾಯಾಳುಗಳಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ


ಗಂಗಾವತಿ(ಮೇ.09): ಕರಡಿಯೊಂದು ನಗರದೊಳಗೆ ನುಗ್ಗಿ ಮೂವರ ಮೇಲೆ ದಾಳಿ ಮಾಡಿದ ಘಟನೆ  ಇಂದು(ಭಾನುವಾರ) ಬೆಳ್ಳಂ ಬೆಳಿಗ್ಗೆ ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದಲ್ಲಿ ನಡೆದಿದೆ.

ಮೊದಲಿಗೆ ನಗರದ ಎಚ್ಆರ್‌ಎಸ್ ಕಾಲೋನಿಯಲ್ಲಿ ನುಗ್ಗಿದ ಕರಡಿ ಪಾರ್ಕ್‌ನಲ್ಲಿದ್ದ ನಗರಸಭೆ ನೌಕರ ಸೈಯದ್ ಕಾಸಿಂ ಅಲಿ ಎಂಬುವರ ಮೇಲೆ ದಾಳಿ ಮಾಡಿ ತೀವ್ರವಾಗಿ ಗಾಯಗೊಳಿಸಿದೆ. ನಗರದೊಳಗೆ ಕರಡಿ ಬಂದಿದ್ದರಿಂದ ಜನರು ಆತಂಕದಲ್ಲಿದ್ದಾರೆ.

Tap to resize

Latest Videos

undefined

ಅಪಾರ್ಟ್‌ಮೆಂಟ್‌ಗೆ ನುಗ್ಗಿದ ಕರಡಿ: 10 ಜನರ ಮೇಲೆ ದಾಳಿ

ಬಳಿಕ 5 ಗಂಟೆಗೆ ನಗರದ ಬಸ್ ನಿಲ್ದಾಣಕ್ಕೆ ನುಗ್ಗಿದ ಕರಡಿ ಇಬ್ಬರ ಮೇಲೆ ದಾಳಿ ಮಾಡಿದೆ ಎಂದು ತಿಳಿದು ಬಂದಿದೆ. ಗಾಯಗೊಂಡ ಮೂವರನ್ನು ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಕಳೆದ 6 ತಿಂಗಳ ಹಿಂದೆಯೂ ಆನೆಗೊಂದಿ ರಸ್ತೆಯ ಮಾರ್ಗದಲ್ಲಿರುವ ಅಸ್ಪತ್ರೆಯ ಆವರಣಕ್ಕೆ ಕರಡಿಯೊಂದು ನುಗ್ಗಿತ್ತು. 
 

click me!