ಅಪಾರ್ಟ್‌ಮೆಂಟ್‌ಗೆ ನುಗ್ಗಿದ ಕರಡಿ: 10 ಜನರ ಮೇಲೆ ದಾಳಿ

By Kannadaprabha News  |  First Published Mar 31, 2021, 7:08 AM IST

ಬನ್ನೇರುಘಟ್ಟ ಪಾರ್ಕ್‌ನಿಂದ ತಪ್ಪಿಸಿಕೊಂಡಿದ್ದ ಕರಡಿ| ಕಾಚನಾಯಕನಹಳ್ಳಿಯ ನೂತನ ಬಡಾವಣೆಯ ಮೂಲಕ ಕರಡಿ ಚಲಿಸಿರುವುದು ಸಿಸಿ ಕ್ಯಾಮೆರಾದಲ್ಲಿ ಸೆರೆ| ಜನರು ಒಂಟಿಯಾಗಿ ಓಡಾಡಬಾರದು, ವಿರಳ ಪ್ರದೇಶದಲ್ಲಿ ಹೋಗುವಾಗ ಎಚ್ಚರಿಕೆ ವಹಿಸಿ ಎಂದು ಪಂಚಾಯಿತಿ ವತಿಯಿಂದ ಮೈಕ್‌ ಮೂಲಕ ಸೂಚನೆ| 


ಆನೇಕಲ್‌(ಮಾ.31): ಬನ್ನೇರುಘಟ್ಟ ಜೈವಿಕ ಉದ್ಯಾನವನದ ರೆಸ್ಕ್ಯೂ ಸೆಂಟರ್‌ನಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದ ಕರಡಿಯು ಕಾಚನಾಯಕನಹಳ್ಳಿ ಹೊರವಲಯದ ಅಪಾರ್ಟ್‌ಮೆಂಟ್‌ ಹಾಗೂ ನೀಲಗಿರಿ ತೋಪಿನಲ್ಲಿ ಆಶ್ರಯ ಪಡೆದಿದ್ದು, ಒಂಟಿಯಾಗಿ ಸಿಗುವ ಜನರನ್ನು ಕಚ್ಚಿ ಪರಚಿ ಗಾಯಗೊಳಿಸುತ್ತಿದೆ.

ಮಂಗಳವಾರ ಬೆಳಗಿನ ಜಾವ ಕರಡಿಯು ಕಾಚನಾಯಕನಹಳ್ಳಿಯ ನೂತನ ಬಡಾವಣೆಯ ಮೂಲಕ ಚಲಿಸಿರುವುದು ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಯುವಕನೋರ್ವನನ್ನು ಕಚ್ಚಿ ಗಾಯಗೊಳಿಸಿದೆ. ಇನ್ನು ಮಹಿಳೆ ಹಾಗೂ ವೃದ್ಧರೊಬ್ಬರ ಮೇಲೆ ದಾಳಿ ನಡೆಸಲು ಕರಡಿಯು ಮುಂದಾಗಿದೆ. ಈ ವೇಳೆ ಕೋಲೂರಿಕೊಂಡು ಹೋಗುತ್ತಿದ್ದ ವೃದ್ಧ ಕೆಳಗೆ ಬಿದ್ದು ಕಿರುಚಿಕೊಂಡಾಗ ಗಾಬರಿಯಾದ ಕರಡಿ ವಾಪಸ್‌ ತೆರಳಿದೆ. ಒಟ್ಟು 10 ಜನರು ಕರಡಿಯ ದಾಳಿಗೆ ಒಳಗಾಗಿದ್ದು, ಗಾಯಗೊಂಡಿದ್ದಾರೆ.

Latest Videos

undefined

ಬನ್ನೇರುಘಟ್ಟ: ಚಾಲಕನ ಕಿವಿ ಕಚ್ಚಿ ಕರಡಿ ಪರಾರಿ

ಹೆನ್ನಾಗರ ಪಂಚಾಯಿತಿಯ ಕಾಚನಾಯಕನಹಳ್ಳಿ, ರಿಂಗ್‌ ರಸ್ತೆ, ಯಾರಂಡಹಳ್ಳಿ, ಹೊಸಹಳ್ಳಿ ಹಾಗೂ ಹೆನ್ನಾಗರ ಗ್ರಾಮಸ್ಥರು ಎಚ್ಚರದಿಂದ ಇರಬೇಕು ಎಂದು ಒಂಟಿಯಾಗಿ ಓಡಾಡಬಾರದು, ಜನರ ವಿರಳ ಪ್ರದೇಶದಲ್ಲಿ ಹೋಗುವಾಗ ಎಚ್ಚರಿಕೆ ವಹಿಸಿ ಎಂದು ಪಂಚಾಯಿತಿ ವತಿಯಿಂದ ಮೈಕ್‌ ಮೂಲಕ ಸೂಚನೆ ನೀಡಲಾಗಿದೆ ಎಂದು ಹೆನ್ನಾಗರ ಗ್ರಾಪಂ ಉಪಾಧ್ಯಕ್ಷ ಪ್ರಸನ್ನ ಕುಮಾರ್‌, ಆಟೋದಲ್ಲಿ ಧ್ವನಿವರ್ಧಕದ ಮೂಲಕ ಎಚ್ಚರಿಕೆ ನೀಡಿದ್ದಾರೆ.
 

click me!