ಕೊರೋನಾ ಲಾಕ್‌ಡೌನ್‌ನಿಂದ ಬೇಸತ್ತ ಬೆಂಗಳೂರಿಗರಿಗೆ ಕಾದಿದೆ ಶಾಕ್

By Suvarna NewsFirst Published Sep 18, 2020, 3:13 PM IST
Highlights

ಕೊರೋನಾ ಹಾಗೂ ಲಾಕ್‌ಡೌನ್‌ನಿಂದ ಬೇಸತ್ತ ಬೆಂಗಳೂರಿಗರಿಗೆ ಇನ್ನೊಂದು ಶಾಕ್ ಇಲ್ಲಿದೆ. ಬಿಬಿಎಂಪಿಯಲ್ಲಿ ಬಿಗ್ ಚರ್ಚೆಯೊಂದು ನಡೆದಿದೆ.

ಬೆಂಗಳೂರು (ಸೆ.18): ಲಾಕ್‌ ಡೌನ್ ಕೊರೋನಾದಿಂದ ಬೇಸತ್ತ ಬೆಂಗಳೂರಿಗರಿಗೆ ಇದೀಗ ಮತ್ತೊಂದು ಶಾಕ್ ಕಾದಿದೆ. ಬೆಂಗಳೂರಿಗರ ಆಸ್ತಿ ತೆರಿಗೆ ಹೆಚ್ಚಿಸಲು ಬಿಬಿಎಂಪಿಯಲ್ಲಿ ಚರ್ಚೆ ನಡೆದಿದ್ದು, ಇಲ್ಲಿ ಆದಾಯಕ್ಕಿಂತ ಖರ್ಚು ಜಾಸ್ತಿಯಾದ ಹಿನ್ನೆಲೆಯಲ್ಲಿ ಈ ಬಗ್ಗೆ ಚರ್ಚೆ ನಡೆದಿದೆ. 

ಬೆಂಗಳೂರಿಗರ ಆಸ್ತಿ ಮೇಲೆ 15 ರಿಂದ 25ರಷ್ಟು ತೆರಿಗೆ ಹೆಚ್ಚಳ ಮಾಡುವ ಸಾಧ್ಯತೆ ಇದೆ. 

ಬೆಂಗಳೂರು: ಇನ್ನೂ 78 ವಾರ್ಡ್‌ಗಳಲ್ಲಿ ಪ್ರತ್ಯೇಕ ಕಸ ಸಂಗ್ರಹ, ಮಂಜುನಾಥ ಪ್ರಸಾದ್‌

ನಕ್ಷೆ ಮಂಜೂರಾತಿ ಶುಲ್ಕ ಈಗಾಗಲೇ ಏರಿಕೆ ಮಾಡಲಾಗಿದ್ದು, ಖಾತಾ ಚಾರ್ಜ್ ಶೇ.2ರಿಂದ 5ರಷ್ಟು ಏರಿಕೆ ಸಾಧ್ಯತೆ ಇದೆ.

ಒಸಿ ನೀಡುವಾಗ ತೆರಿಗೆ ಪ್ರಮಾಣ ಹೆಚ್ಚಳಕ್ಕೆ ಪ್ಲ್ಯಾನ್ ಮಾಡಿದ್ದು, 2016ರಿಂದ ಆಸ್ತಿ ತೆರಿಗೆ ಹೆಚ್ಚಳವಾಗಿಲ್ಲ. ಸಂಪನ್ಮೂಲ ಕ್ರೂಡೀಕರಣಕ್ಕೆ ತೆರಿಗೆ ಹೊರೆ ಏರಿಸಲು ಬಿಬಿಎಂಪಿ ಪ್ಲ್ಯಾನ್ ಮಾಡಿದೆ.

ಬಿಬಿಎಂಪಿ ಕಮೀಷನರ್ ಹಾಗೂ ಆಡಳಿತಾಗಾರ ಜೊತೆ ನಡೆದ ಒಂದು ಸುತ್ತಿನ ಸಭೆಯಲ್ಲಿ ತೆರಿಗೆ ಏರಿಕೆ ಬಗ್ಗೆ ಚರ್ಚೆ ನಡೆದಿದೆ.

ತೆರಿಗೆ ಪಾವತಿಸದವರ ವಿರುದ್ಧ ಕ್ರಮ:

"

click me!