ಕೋವಿಡ್‌ ಶವ ಉಚಿತ ಸಾಗಾಣಿಕೆಗೆ ಸಹಾಯವಾಣಿ

By Kannadaprabha NewsFirst Published Apr 24, 2021, 8:27 AM IST
Highlights

ಮೃತ ದೇಹಗಳನ್ನು ವಿದ್ಯುತ್‌ ಚಿತಾಗಾರಗಳಿಗೆ ಉಚಿತವಾಗಿ ಸಾಗಾಣಿಕೆ ವ್ಯವಸ್ಥೆ| ಪ್ರತಿ ನಿತ್ಯ ಬೆಳಗ್ಗೆ 7ರಿಂದ ರಾತ್ರಿ 10ರವರೆಗೂ ಸಹಾಯವಾಣಿ ಕಾರ್ಯನಿರ್ವಹಣೆ| ಕರೆ ಮಾಡಿ ಉಚಿತವಾಗಿ ಶವ ಸಾಗಾಣೆ ವಾಹನಗಳ ಸೇವೆಯನ್ನು ಪಡೆಯಬಹುದು| 

ಬೆಂಗಳೂರು(ಏ.24): ಕೋವಿಡ್‌ ಸೋಂಕಿನಿಂತ ಮೃತಪಟ್ಟವರ ಸಾಗಾಣಿಕೆಗೆ ಆ್ಯಂಬುಲೆನ್ಸ್‌ಗಳಲ್ಲಿ ಸಾವಿರಾರು ರುಪಾಯಿಗಳನ್ನು ವಸೂಲಿ ಮಾಡುತ್ತಿರುವ ಆರೋಪದ ಬೆನ್ನಲ್ಲೇ ಶವ ಸಾಗಣಿಕೆಗೆ ಉಚಿತ ಸೇವೆ ಒದಗಿಸಲು ಬಿಬಿಎಂಪಿ ಮುಂದಾಗಿದೆ. ಅದಕ್ಕಾಗಿ ಉಚಿತ ಸಹಾಯವಾಣಿ ಸಂಖ್ಯೆ ಬಿಡುಗಡೆ ಮಾಡಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್‌ ಸೋಂಕಿತರು ಮೃತಪಟ್ಟರೆ ಆಸ್ಪತ್ರೆ ಅಥವಾ ಮನೆಯಿಂದ ಮೃತ ದೇಹಗಳನ್ನು ವಿದ್ಯುತ್‌ ಚಿತಾಗಾರಗಳಿಗೆ ಉಚಿತವಾಗಿ ಸಾಗಾಣಿಕೆ ವ್ಯವಸ್ಥೆ ಲಭ್ಯವಾಗಲಿದೆ. ಪ್ರತಿ ನಿತ್ಯ ಬೆಳಗ್ಗೆ 7ರಿಂದ ರಾತ್ರಿ 10ರವರೆಗೂ ಸಹಾಯವಾಣಿ ಕಾರ್ಯನಿರ್ವಹಿಸಲಿದ್ದು, ಕರೆ ಮಾಡಿ ಉಚಿತವಾಗಿ ಶವ ಸಾಗಾಣೆ ವಾಹನಗಳ ಸೇವೆಯನ್ನು ಪಡೆಯಬಹುದು ಎಂದು ಬಿಬಿಎಂಪಿ ತಿಳಿಸಿದೆ. 

ಸಾಲ ಮಾಡಿ ಅಂತ್ಯ ಸಂಸ್ಕಾರಕ್ಕೆ ಲಂಚ ಕೊಟ್ಟ ಮಹಿಳೆ: ಚಿತಾಗಾರ ಸಿಬ್ಬಂದಿಯ ಕ್ರೌರ್ಯ

ಉಚಿತ ಕೋವಿಡ್‌ ಶವ ಸಾಗಾಣೆಗೆ ಸಹಾಯವಾಣಿ ಸಂಖ್ಯೆ: 080-22493203 ಮತ್ತು ವಾಟ್ಸಾಪ್‌ ಸಂಖ್ಯೆ: 87921 62736 ಸಂಪರ್ಕಿಸುವಂತೆ ಬಿಬಿಎಂಪಿ ಮಾಹಿತಿ ನೀಡಿದೆ.

click me!