Covid Vaccine ಪಡೆಯದಿದ್ರೆ ಪಾರ್ಕ್‌, ಮಾಲ್‌ಗೆ ನೋ ಎಂಟ್ರಿ..?

By Kannadaprabha NewsFirst Published Dec 2, 2021, 6:25 AM IST
Highlights

*  ಲಸಿಕೆ ಪಡೆಯದವರಿಗೆ ಸಿನಿಮಾ ಹಾಲ್, ಮೆಟ್ರೋ, ಮಾಲ್, ಉದ್ಯಾನಕ್ಕೆ ಪ್ರವೇಶ ನಿಷೇಧಿಸಲು ಚಿಂತನೆ
*  ಸರ್ಕಾರಕ್ಕೆ ಬಿಬಿಎಂಪಿ ಪ್ರಸ್ತಾವನೆ 
*  ಒಮಿಕ್ರಾನ್ ಆಂತಕ ಹೆಚ್ಚಳ ಬೆನ್ನಲ್ಲೇ ಪೂರ್ಣ ಲಸಿಕಾಕರಣಕ್ಕೆ ಬಿಬಿಎಂಪಿ ಪಣ
 

ಬೆಂಗಳೂರು(ಡಿ.02): ನಗರದಲ್ಲಿ ಒಮಿಕ್ರಾನ್(Omicron) ಆಂತಕ ಹೆಚ್ಚುತ್ತಿದ್ದಂತೆಯೇ ಪೂರ್ಣ ಲಸಿಕಾಕರಣಕ್ಕೆ ಪಣ ತೊಟ್ಟಿರುವ ಬಿಬಿಎಂಪಿ(BBMP) ಎರಡೂ ಡೋಸ್‌ ಲಸಿಕೆ ಪಡೆಯದವರಿಗೆ ಸಿನಿಮಾ ಮಂದಿರ, ಮೆಟ್ರೋ, ಮಾಲ್, ಉದ್ಯಾನಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳ ಪ್ರವೇಶಕ್ಕೆ ಅವಕಾಶ ನೀಡದಿರುವ ಬಗ್ಗೆ ಗಂಭೀರ ಚಿಂತನೆ ನಡೆಸಿದೆ.

ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದ್ದು, ಸರ್ಕಾರ ನೀಡುವ ನಿರ್ದೇಶನದಂತೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿಯ ಉನ್ನತ ಮೂಲಗಳು ತಿಳಿಸಿವೆ. ಇನ್ನು ಈ ಬಗ್ಗೆ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿರುವ ಮುಖ್ಯ ಆಯುಕ್ತ ಗೌರವ್‌ ಗುಪ್ತಾ, ಅವರು, ಚಿತ್ರಮಂದಿರಗಳಿಗೆ ಶೇ.50ರಷ್ಟು ಹಾಜರಾತಿ, ಮಾಲ್‌ಗಳಿಗೆ ನಿರ್ಬಂಧ ವಿಧಿಸುವ ಯಾವುದೇ ಚಿಂತನೆ ಇಲ್ಲ ಎನ್ನುತ್ತಾರೆ. ಆದರೆ, ಕೋವಿಡ್ಎ ರಡೂ ಲಸಿಕೆ ಪಡೆದವರಿಗೆ ಮಾತ್ರ ಚಿತ್ರಮಂದಿರ ಹಾಗೂ ಮಾಲ್‌ಗಳಿಗೆ ಪ್ರವೇಶ ನೀಡುವ ಪ್ರಸ್ತಾವನೆ ಸರ್ಕಾರಕ್ಕೆ ರವಾನೆಯಾಗಿದೆಯೇ ಎಂಬ ಪ್ರಶ್ನೆಗೆ ನೇರ ಉತ್ತರ ನೀಡುವುದಿಲ್ಲ. ಮೂಲಗಳು ಮಾತ್ರ ಇಂತಹ ಗಂಭೀರ ಚಿಂತನೆಯನ್ನು ಬಿಬಿಎಂಪಿ ನಡೆಸಿದೆ ಎಂದು ಹೇಳುತ್ತವೆ.

Omicron Variant: ದಕ್ಷಿಣ ಆಫ್ರಿಕಾದಿಂದ ಬಂದ ಇಬ್ಬರಿಗೆ ಕ್ವಾರಂಟೈನ್‌

ಈ ಬಗ್ಗೆ ಪ್ರಶ್ನಿಸಿದಾಗ ಗೌರವ್‌ ಗುಪ್ತಾ(Gaurav Gupta) ಅವರು, ಒಮಿಕ್ರಾನ್ರಾಜ್ಯಕ್ಕೆ ಪ್ರವೇಶಿಸದಂತೆ ಎಚ್ಚರ ವಹಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರು ತಾಂತ್ರಿಕ ಸಲಹಾ ಸಮಿತಿ ತಜ್ಞರೊಂದಿಗೆ ಸಭೆ ನಡೆಸಿದ್ದಾರೆ. ತಜ್ಞರು ಮಹತ್ವಪೂರ್ಣವಾದ ಹಲವು ಸಲಹೆ, ಸೂಚನೆಗಳನ್ನು ಸರ್ಕಾರಕ್ಕೆ ನೀಡಿದ್ದಾರೆ. ರಾಜ್ಯ ಸರ್ಕಾರ ರೂಪಿಸುವ ನಿಯಮಗಳನ್ನು ಬಿಬಿಎಂಪಿ ಪಾಲಿಸಲಿದೆ. ಎಲ್ಲ ವಲಯಗಳು ಮತ್ತು ವಿಭಾಗೀಯ ಅಧಿಕಾರಿಗಳು ಸೂಚನೆ ನೀಡಲಾಗಿದೆ ಎಂದು ಹೇಳಿದರು.

ವಿದೇಶದಲ್ಲಿ ಹೊಸ ತಳಿ ಪತ್ತೆ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ವಿಮಾನಗಳಿಂದ(International Flights) ರಾಜ್ಯಕ್ಕೆ(Karnataka) ಆಗಮಿಸುವವರ ಮಾಹಿತಿಯನ್ನು ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳಿಂದ ಪಡೆದು ಅಂತವರ ಮೇಲೆ ಹದ್ದಿನ ಕಣ್ಣಿಡುವ ಹೊಣೆಯನ್ನು ನಗರ 27 ವೈದ್ಯಕೀಯ ಆರೋಗ್ಯ ಅಧಿಕಾರಿಗಳಿಗೆ (ಎಂಓಎಚ್) ನೀಡಲಾಗಿದೆ. ಜೊತೆಗೆ ಕೊರೋನಾ ಸೋಂಕು ತಪಾಸಣೆ ಕಾರ್ಯವನ್ನು ತೀವ್ರಗೊಳಿಸಿದ್ದೇವೆ. ವಿಮಾನ, ರೈಲು ಮತ್ತು ಬಸ್ಗಳಿಂದ ನಗರಕ್ಕೆ ಬರುವ ಎಲ್ಲಾ ಹೊರ ದೇಶ ಮತ್ತು ಹೊರ ರಾಜ್ಯಗಳ ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ ಎಂದರು.

22 ಲಕ್ಷ ಮಂದಿ ಲಸಿಕೆ ಪಡೆದಿಲ್ಲ: ಬಾಲಸುಂದರ್

ಪಾಲಿಕೆ ಮುಖ್ಯ ಆರೋಗ್ಯಾಧಿಕಾರಿ ಬಾಲಸುಂದರ್ಮಾತನಾಡಿ, ಸುಮಾರು 22 ಲಕ್ಷ ಮಂದಿ ಮೊದಲ ಡೋಸ್ಮತ್ತು 10 ಲಕ್ಷ ಜನರು ಎರಡನೇ ಡೋಸ್‌ ಲಸಿಕೆ(Vaccine) ಪಡೆದಿಲ್ಲ. ಅವರ ಪತ್ತೆಗೆ ಕ್ರಮಕೈಗೊಳ್ಳಲಾಗಿದೆ. ಲಸಿಕೆ ಪಡೆಯುವುದರಿಂದ ಕೊರೋನಾ ಸೋಂಕು ಮಾರಣಾಂತಿಕವಾಗದಂತೆ ತಡೆಯಲು ಸಹಕಾರಿಯಾಗಲಿದೆ. ಹಾಗಾಗಿ ಪ್ರತಿಯೊಬ್ಬರು ಕಡ್ಡಾಯವಾಗಿ ಲಸಿಕೆ ಪಡೆಯುವಂತೆ ಎರಡು ಡೋಸ್‌ ಲಸಿಕೆ ಪಡೆದವರಿಗೆ ಮಾತ್ರ ಸಾರ್ವಜನಿಕ ಸ್ಥಳಗಳಿಗೆ ಪ್ರವೇಶ ನೀಡುವ ಕುರಿತು ಚರ್ಚೆ ನಡೆಯುತ್ತಿದೆ ಎಂದು ಹೇಳಿದರು.

ಬಿಬಿಎಂಪಿ ಅಧಿಕಾರಿಗಳು 198 ವಾರ್ಡ್‌ಗಳ ಮನೆ ಮನೆಗೂ ತೆರಳಿ ಲಸಿಕೆ ಹಾಕಿಸಿಕೊಳ್ಳದವರ ಪತ್ತೆ ಹಚ್ಚಿ ಲಸಿಕೆ ಪಡೆಯುವಂತೆ ತಿಳಿಸಲಿದ್ದಾರೆ. ಜೊತೆಗೆ ಮತದಾರರ ಗುರುತಿನ ಚೀಟಿ ವಿವರ ಪಡೆದು ಮ್ಯಾಪ್ಆಧಾರದಲ್ಲಿ ಎಲ್ಲರ ಮನೆಗಳಿಗೂ ಭೇಟಿ ನೀಡಲಿದ್ದಾರೆ. ಹಾಗೆಯೇ ಇದುವರೆಗೆ ಮೊದಲ ಮತ್ತು ಎರಡನೇ ಡೋಸ್ಲಸಿಕೆ ಪಡೆಯದವರ ವಿವರ ನಮ್ಮ ಬಳಿಯಲ್ಲಿದ್ದು, ಎಲ್ಲರಿಗೂ ಮೊಬೈಲ್‌ಗೆ ಕರೆ ಮಾಡಿ ಲಸಿಕೆ ಹಾಕಿಸಿಕೊಳ್ಳುವಂತೆ ಮನವಿ ಮಾಡಲಾಗುವುದು. ಈ ಮೂಲಕ ಎಲ್ಲರೂ ಲಸಿಕೆ ಪಡೆಯುವಂತೆ ಬಿಬಿಎಂಪಿ ಸತತ ಪ್ರಯತ್ನ ಮಾಡುತ್ತಿದೆ ಎಂದು ಹೇಳಿದರು.
 

click me!