ಅವಧಿ ಮುಗಿದ ಆಸ್ತಿ ವಾಪಸ್‌ ಪಡೆಯಲು ಬಿಬಿಎಂಪಿ ನಿರ್ಲಕ್ಷ್ಯ

By Suvarna NewsFirst Published Oct 2, 2022, 4:48 PM IST
Highlights

 ಅವಧಿ ಮುಗಿದ ಆಸ್ತಿ ವಾಪಸ್‌ ಪಡೆಯಲು ಪಾಲಿಕೆ ನಿರ್ಲಕ್ಷ್ಯ. 163 ಆಸ್ತಿಗಳ ಗುತ್ತಿಗೆ ಅವಧಿ ಪೂರ್ಣ. 3 ಕೋಟಿ ತೆರಿಗೆ ಬಾಕಿ.

ಬೆಂಗಳೂರು (ಅ.2): ಬಿಬಿಎಂಪಿಯಿಂದ ಗುತ್ತಿಗೆ ಆಧಾರದಲ್ಲಿ ನೀಡಲಾದ ಆಸ್ತಿಗಳ ಪೈಕಿ 163 ಆಸ್ತಿಗಳ ಗುತ್ತಿಗೆ ಅವಧಿ ಪೂರ್ಣಗೊಂಡಿದ್ದರೂ ಈ ಆಸ್ತಿಗಳನ್ನು ಹಿಂಪಡೆದಿಲ್ಲ. ಇದರಿಂದ ಬಿಬಿಎಂಪಿಗೆ ಕೋಟ್ಯಂತ ರುಪಾಯಿ ನಷ್ಟಉಂಟಾಗುತ್ತಿದೆ. ಬಿಬಿಎಂಪಿಯಿಂದ 324 ಆಸ್ತಿಗಳನ್ನು ಗುತ್ತಿಗೆ ಆಧಾರದಲ್ಲಿ ಶಾಲಾ ಕಾಲೇಜು, ಆಸ್ಪತ್ರೆ, ಸಂಘ ಸಂಸ್ಥೆಗಳು ಸೇರಿದಂತೆ ಖಾಸಗಿಯವರಿಗೆ ನೀಡಲಾಗಿದೆ. ಪೂರ್ವ ವಲಯ ವ್ಯಾಪ್ತಿಯಲ್ಲಿ 123, ಪಶ್ಚಿಮ ವಲಯದಲ್ಲಿ 110, ದಕ್ಷಿಣ ವಲಯದಲ್ಲಿ 89 ಆಸ್ತಿಗಳನ್ನು ಖಾಸಗಿ ಸಂಸ್ಥೆ, ವ್ಯಕ್ತಿಗೆ ಗುತ್ತಿಗೆ ಆಧಾರದಲ್ಲಿ ನೀಡಲಾಗಿದೆ. ಈ ಪೈಕಿ 161 ಆಸ್ತಿಗಳ ಗುತ್ತಿಗೆ ಅವಧಿ ಇನ್ನೂ ಪೂರ್ಣವಾಗಿಲ್ಲ. ಉಳಿದ 163 ಆಸ್ತಿಗಳ ಗುತ್ತಿಗೆ ಅವಧಿ ಮುಕ್ತಾಯವಾಗಿದೆ. ಅಲ್ಲದೆ, ಆಸ್ತಿಗಳನ್ನು ಗುತ್ತಿಗೆ ಪಡೆದ ಸಂಸ್ಥೆಗಳಿಂದ 3.04 ಕೋಟಿ ಬಾಕಿ ಬರಬೇಕಿದೆ. ಅದರ ವಸೂಲಿಗೂ ಬಿಬಿಎಂಪಿ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಇನ್ನು ಮಹದೇವಪುರ, ಯಲಹಂಕ ಸುತ್ತಮುತ್ತ ವಲಯದಲ್ಲಿ ತಲಾ 1 ಆಸ್ತಿಯನ್ನು ಗುತ್ತಿಗೆ ಆಧಾರದಲ್ಲಿ ನೀಡಲಾಗಿದೆ. ಉಳಿದಂತೆ ಬೊಮ್ಮನಹಳ್ಳಿ, ರಾಜರಾಜೇಶ್ವರಿ ನಗರ, ದಾಸರಹಳ್ಳಿ ಸುತ್ತಮುತ್ತ ವಲಯಗಳಲ್ಲಿ ಯಾವ ಆಸ್ತಿಯನ್ನೂ ಗುತ್ತಿಗೆಗೆ ನೀಡಿಲ್ಲ.

4,554 ಕೋಟಿ ಮೌಲ್ಯ: ಬಿಬಿಎಂಪಿಯ 324 ಆಸ್ತಿಗಳಲ್ಲಿ 235 ಆಸ್ತಿಗಳು ವಾಣಿಜ್ಯ ಬಳಕೆಗೆ ಕೊಡಲಾಗಿದೆ. ಉಳಿದಂತೆ ಶೈಕ್ಷಣಿಕ ಉದ್ದೇಶಕ್ಕಾಗಿ 24, ಸರ್ಕಾರಿ ಕಚೇರಿಗಳಿಗೆ 43, ಧಾರ್ಮಿಕ ಸಂಸ್ಥೆಗಳಿಗೆ 22 ಆಸ್ತಿಗಳನ್ನು ಕೊಡಲಾಗಿದೆ. ಈ ಆಸ್ತಿಗಳ ಮೌಲ್ಯ .4,554 ಕೋಟಿಗಳಾಗಿವೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ.

ಕಾರಂತ ಲೇಔಟ್‌ 44 ಕಟ್ಟಡ ಸಕ್ರಮಗೊಳಿಸಿ ಆದೇಶ
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಉದ್ದೇಶಿತ ಡಾ. ಶಿವರಾಮ ಕಾರಂತ ಬಡಾವಣೆಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಎ.ವಿ. ಚಂದ್ರಶೇಖರ್‌ ಸಮಿತಿ ಸಲ್ಲಿಸಿದ್ದ 22ನೇ ವರದಿಯನ್ನು ಅಂಗೀಕರಿಸಿರುವ ಸುಪ್ರೀಂಕೋರ್ಚ್‌, ಮ​ತ್ತೆ 44 ಕಟ್ಟಡಗಳನ್ನು ಸಕ್ರಮಗೊಳಿಸಿ ಆದೇಶಿಸಿದೆ. ಆ ಮೂಲಕ ಈವರೆಗೆ 4,734 ಕಟ್ಟಡಗಳು ಸಕ್ರಮಗೊಂಡಂತಾಗಿದೆ.

ಸಾಲ ಕಟ್ಟದ ರೈತರ ಆಸ್ತಿಗಳ ಜಪ್ತಿ ತಡೆಗೆ ಕಾಯ್ದೆ: ಸಿಎಂ ಬೊಮ್ಮಾಯಿ

ಡಾ. ಶಿವರಾಮ ಕಾರಂತ ಬಡಾವಣೆ ವ್ಯಾಪ್ತಿಯ ಕಟ್ಟಡಗಳ ಮಾಲೀಕರಿಗೆ ನ್ಯಾ. ಎ.ವಿ. ಚಂದ್ರಶೇಖರ್‌ ಸಮಿತಿಯ ನೇತೃತ್ವದಲ್ಲಿ ಬಿಡಿಎ ಕಟ್ಟಡ ಮಾಲೀಕರಿಗೆ ಸಕ್ರಮ ಪ್ರಮಾಣ ಪತ್ರ ವಿತರಿಸಿ ಕಾನೂನುರೀತ್ಯ ಅ​ಭಿವೃದ್ಧಿ ಶುಲ್ಕ ವಿ​ಧಿ​ಸುವಂತೆಯೂ ಸುಪ್ರೀಂಕೋರ್ಚ್‌ ಸೂ​ಚಿ​ಸಿ​ದೆ. ಸಕ್ರಮಗೊಂಡ ಕಟ್ಟಡಗಳ ಮಾಲೀಕರಿಗೆ ಬಿಡಿಎ ಸಕ್ರಮ ಪ್ರಮಾಣ ಪತ್ರವನ್ನು ಡಾ. ಶಿವರಾಮ ಕಾರಂತ ಬಡಾವಣೆ ವ್ಯಾಪ್ತಿಯಲ್ಲಿಯೇ ನೀಡಲಿದೆ.

 

Indian Law: ಅನಾಥಾಶ್ರಮ ಸೇರ್ಬೇಕಾಗಿಲ್ಲ, ಮಗನ ಆಸ್ತಿಯಲ್ಲಿ ತಾಯಿಗೂ ಇದೆ ಹಕ್ಕು

ಅದಕ್ಕೆ ಸಂಬಂಧಿಸಿದಂತೆ ನಾಲ್ಕು ವಾರಗಳಲ್ಲಿ ಸಕ್ರಮಗೊಂಡ ಕಟ್ಟಡ ಮಾಲೀಕರಿಗೆ ಮಾಹಿತಿ ನೀಡಲಾಗುತ್ತದೆ. ಫಲಾನುಭವಿಗಳು ಸಕ್ರಮ ಪ್ರಮಾಣ ಪತ್ರ ಪಡೆಯಲು ಪಾಸ್‌ಪೋರ್ಚ್‌ ಅಳತೆಯ ಭಾವಚಿತ್ರ, ಆಧಾರ್‌ ಕಾರ್ಡ್‌, ಸಮಿತಿಯಿಂದ ಸ್ವೀಕರಿಸಿರುವ ಎಸ್‌ಎಂಎಸ್‌ನ ಸಾಫ್ಟ್‌ ಕಾಪಿ ಹಾಗೂ ಸಮಿತಿ ನೀಡಿರುವ ರಸೀದಿಯನ್ನು ಸಲ್ಲಿಸಬೇಕು.

click me!