ಸೋಮವಾರ ಬುದ್ಧ ಪೂರ್ಣಿಮೆ; ಮಾಂಸ ಮಾರಾಟ ನಿಷೇಧಿಸಿ ಬಿಬಿಎಂಪಿ ಆದೇಶ

Published : May 10, 2025, 08:08 PM IST
ಸೋಮವಾರ ಬುದ್ಧ ಪೂರ್ಣಿಮೆ; ಮಾಂಸ ಮಾರಾಟ ನಿಷೇಧಿಸಿ ಬಿಬಿಎಂಪಿ ಆದೇಶ

ಸಾರಾಂಶ

ಮೇ ೧೨ರ ಸೋಮವಾರ ಬುದ್ಧ ಪೂರ್ಣಿಮೆ ಹಿನ್ನೆಲೆಯಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರಾಣಿವಧೆ ಮತ್ತು ಮಾಂಸ ಮಾರಾಟವನ್ನು ನಿಷೇಧಿಸಲಾಗಿದೆ. ಭಾನುವಾರ ಎಂದಿನಂತೆ ವಹಿವಾಟು ನಡೆಯಲಿದ್ದು, ಮಂಗಳವಾರದಿಂದ ಮತ್ತೆ ಎಂದಿನಂತೆ ಕಸಾಯಿಖಾನೆಗಳು ಕಾರ್ಯಾರಂಭ ಮಾಡಲಿವೆ ಎಂದು ಬಿಬಿಎಂಪಿ ತಿಳಿಸಿದೆ.

ಬೆಂಗಳೂರು (ಮೇ 10): ಸೋಮವಾರ ಬುದ್ಧ ಪೂರ್ಣಿಮ ಪ್ರಯುಕ್ತ ಪ್ರಾಣಿವಧೆ ಹಾಗೂ ಮಾಂಸ ಮಾರಾಟ ನಿಷೇಧ ಮಾಡಿ ಬಿಬಿಎಂಪಿ ವತಿಯಿಂದ ಆದೇಶ ಹೊರಡಿಸಲಾಗಿದೆ.
ನಾಡಿನಾದ್ಯಂತ ಮೇ 12ರ ಸೋಮವಾರದಂದು 'ಬುದ್ಧ ಪೂರ್ಣಿಮ' ಆಚರಣೆ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯ ಕಸಾಯಿಖಾನೆಯಲ್ಲಿ ಪ್ರಾಣಿವಧೆ ಹಾಗೂ ಮಾರಾಟ ಮಳಿಗೆಗಳಲ್ಲಿ ಮಾಂಸ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಬಿಬಿಎಂಪಿ ಪಶುಪಾಲನೆ ವಿಭಾಗದ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.  ನಾಳೆ ಭಾನುವಾರ ಎಂದಿನಂತೆ ಕಾರ್ಯನಿರ್ಹಿಸಲಿದೆ. ಜೊತೆಗೆ ಸೋಮವಾರ ಬುದ್ಧ ಪೂರ್ಣಿಮೆ ದಿನವನ್ನು ಹೊರತುಪಡಿಸಿ ಮಂಗಳವಾರದಿಂದ ಎಂದಿನಂತೆ ಪಾಲಿಕೆ ವ್ಯಾಪ್ತಿಯಲ್ಲಿರುವ ಕಸಾಯಿ ಖಾನೆಗಳು ಕಾರ್ಯ ನಿರ್ವಹಿಸಲಿವೆ ಎಂದು ಪಾಲಿಕೆ ಅಧಿಕಾರಿ ತಿಳಿಸಿದ್ದಾರೆ.

ಬೆಂಗಳೂರು ನಗರದಲ್ಲಿ ನಾಗರಿಕರಿಗೆ ಸುರಕ್ಷತೆ ಮತ್ತು ನಡೆಯಲು ಅನುಕೂಲಕರವಾಗುವಂತೆ ಏಕರೂಪದ ರಸ್ತೆ ಅಗಲವನ್ನು ಕಾಯ್ದುಕೊಳ್ಳುವ ಮೂಲಕ ಪಾದಚಾರಿ ಮಾರ್ಗದ ಅಗಲಕ್ಕೆ ಆದ್ಯತೆ ನೀಡುವಂತೆ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ಬಿಬಿಎಂಪಿ ವ್ಯಾಪ್ತಿಯಲ್ಲಿ ನಾಗರಿಕರಿಗೆ ಸುರಕ್ಷಿತ ಮತ್ತು ನಡೆಯಲು ಯೋಗ್ಯವಾದ ಪಾದಚಾರಿ ಮಾರ್ಗಗಳನ್ನು ನಿರ್ಮಿಸುವ ಸಲುವಾಗಿ, ಇಂದು ದಕ್ಷಿಣ ವಲಯ ವ್ಯಾಪ್ತಿಯಲ್ಲಿ ಲಾಲ್ ಬಾಗ್ ಸುತ್ತಮುತ್ತಲಿನ ಪಾದಚಾರಿ ಮಾರ್ಗಗಳನ್ನು ಪರಿಶೀಲನೆ ನಡೆಸುವ ವೇಳೆ ಮಾತನಾಡಿದರು. 

ಲಾಲ್ ಬಾಗ್ ಪೂರ್ವ ದ್ವಾರದಿಂದ ಪರಿಶೀಲನೆ ಪ್ರಾರಂಭಿಸಿ, ಹಾಪ್ ಕಾಮ್ಸ್ ಇರುವ ಜಾಗದಲ್ಲಿ ಪಾದಚಾರಿ ಮಾರ್ಗದಲ್ಲಿರುವ ಗೋಡೆ ಹಾಗೂ ಒತ್ತುವರಿಯಾಗಿರುವುದನ್ನು ಗುರತಿಸಿ ಅದನ್ನು ತೆರವುಗೊಳಿಸಿ ಪಾದಚಾರಿ ಮಾರ್ಗ ಸರಿಪಡಿಸಲು ಸೂಚಿಸಿದರು. ಇದೇ ಸ್ಥಳದಲ್ಲಿರುವ ಬಸ್ ತಂಗುದಾಣ ಬಳಿ ಸ್ವಚ್ಛತೆ ಕಾಪಾಡಬೇಕು. ಅಲಂಕಾರಂ ಹಾಗೂ ಹೋಂಡಾ ಕಟ್ಟಡದ ಮುಂಭಾಗ ಪಾದಚಾರಿ ಒತ್ತುವರಿಯಾಗಿದೆಯೇ ಎಂಬುದನ್ನು ಪರಿಶೀಲಿಸಿ ತೆರವು ಕಾರ್ಯ ಮಾಡಬೇಕು ಹಾಗೂ 3 ವಿದ್ಯುತ್ ಕಂಬಗಳು ಪಾದಚಾರಿ ಮಾರ್ಗದಲ್ಲಿಯೇ ಇದ್ದು, ಅದನ್ನು ಬೆಸ್ಕಾಂ ಅಧಿಕಾರಿಗಳಿಂದ ತೆರವುಗೊಳಿಸಲು ಸೂಚಿಸಿದರು.

ಪಾದಚಾರಿ ಮಾರ್ಗದಲ್ಲಿ ಟ್ರಾನ್ಸ್ ಫಾರ್ಮ್ ಅಳವಡಿಸಿದ ಕಾರಣ ನಾಗರಿಕರು ಓಡಾಡದ ರೀತಿಯಲ್ಲಿದ್ದು , ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿ ಸರಿಪಡಿಸಬೇಕು. ಸೈಡ್ ಡ್ರೈನ್ ಗಳಿಗೆ ನೀರು ಹೋಗುವ ಗ್ರೇಟಿಂಗ್ಸ್ ಗಳ ಬಳಿ ಸ್ವಚ್ಛತೆ ಕಾಪಾಡಿ ರಸ್ತೆಯಲ್ಲಿ ಬೀಳುವ ನೀರು ಸರಾಗವಾಗಿ ಚರಂಡಿಗಳಿಗೆ ಹೋಗುವ ವ್ಯವಸ್ಥೆ ಮಾಡಬೇಕು. ಸಿದ್ದಾಪುರ ವೃತ್ತ ಕೊಳಚೆ ಪ್ರದೇಶದಲ್ಲಿ ಶೌಚಾಲಯಗಳಿದ್ದು, ಅವುಗಳನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ.  ಅದನ್ನು ಸರಿಯಾಗಿ ನಿರ್ವಹಣೆ ಮಾಡಲು ತಿಳಿಸಿದರು. ಬಸ್ ತಂಗುದಾಣದ ಬಳಿ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಬಿನ್ಸ್ ಗಳನ್ನು ಅಳವಡಿಸಲು ಕ್ರಮವಹಿಸಬೇಕು. ಪಾದಚಾರಿ ಮಾರ್ಗಗಳಲ್ಲಿ ಹಾಳಾಗಿರುವ ಸ್ಲ್ಯಾಬ್ ಹಾಗೂ ಕರ್ಬ್ಸ್ ಗಳನ್ನು ಕೂಡಲೆ ದುರಸ್ತಿ ಪಡಿಸಬೇಕು. ಪಾದಚಾರಿ ಮಾರ್ಗದಲ್ಲಿ ಸಸಿಗಳನ್ನು ನೆಟ್ಟು ಪೋಷಣೆ ಮಾಡಬೇಕು. ನೆಟ್ಟಿರುವ ಸಸಿಗಳು ಹಾಳಾಗದಂತೆ ಸುತ್ತಲೂ ಗ್ರಿಲ್ ಅಳವಡಿಸಲು ಅರಣ್ಯ ವಿಭಾಗದ ಅಧಿಕಾರಿಗಳಿಗೆ ಜವಾಬ್ದಾರಿ ನೀಡಲು ಸೂಚಿಸಿದರು.

ಲಾಲ್ ಬಾಗ್ ಸುತ್ತಲೂ ಸ್ವಚ್ಛತೆ ಕಾಪಾಡಿ:
ಲಾಲ್ ಬಾಗ್ ಸುತ್ತಲೂ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ತೋಟಗಾರಿಕಾ ಇಲಾಖೆಯಿಂದ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಿದ್ದು, ಶೀಘ್ರವೇ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಂಡು ಸ್ವಚ್ಛತೆ ಮಾಡಬೇಕು. ಅನಂತರ ತಾತ್ಕಾಲಿಕವಾಗಿ ಹೋಮ್ ಗಾರ್ಡ್ ಗಳನ್ನು ನಿಯೋಜಿಸಿ ಎಲ್ಲಿಯೂ ಸ್ವಚ್ಛತೆ ಹಾಳಾಗದಂತೆ ನೋಡಿಕೊಳ್ಳುವಂತೆ ಕ್ರಮವಹಿಸಬೇಕು. ನಗರದಲ್ಲಿ ಮನೆ-ಮನೆಯಿಂದ ಆಟೋ ಟಿಪ್ಪರ್ ಗಳ ಮೂಲಕ ಸಂಗ್ರಹಿಸುವ ತ್ಯಾಜ್ಯವನ್ನು ಕಾಂಪ್ಯಾಕ್ಟರ್‌ಗಳಿಗೆ ರವಾನಿಸುವ ಟ್ರಾನ್ಸಫರ್ ಪಾಯಿಂಟ್ ಗಳು ಬಹುತೇಕ ರಸ್ತೆ ಬದಿಯೇ ಮಾಡಲಾಗುತ್ತಿದೆ. ಇದರಿಂದ ಸ್ವಚ್ಛತೆ ಹಾಳಾಗಲಿದೆ. ಆದ್ದರಿಂದ ತ್ಯಾಜ್ಯ ರವಾನಿಸುವ ಟ್ರಾನ್ಸ್.ಫರ್  ಪಾಯಿಂಟ್‌ಗಳನ್ನು ರಸ್ತೆಗಳ ಬದಿ ಮಾಡದಂತೆ ಬೇರೆ ಸ್ಥಳಗಳನ್ನು ಗುರುತಿಸಲು ಸೂಚನೆ ನೀಡಿದರು.

PREV
Read more Articles on
click me!

Recommended Stories

Captain Abhimanyu: ಇದು ವಿದಾಯವಲ್ಲ, ಒಂದು ಯುಗದ ಅಂತ್ಯಕ್ಕೆ ಸಂದ ಗೌರವ; ಕೂಬಿಂಗ್ ಸ್ಪೆಷಲಿಸ್ಟ್‌ ಕ್ಯಾಪ್ಟನ್‌ ಅಭಿಮನ್ಯುವಿಗೆ ಭಾವುಕ ಬೀಳ್ಕೊಡುಗೆ!
ತೆಂಗಿನ ಮರದಲ್ಲಿ ಬಿಟ್ಟ ಕಂದು ಬಣ್ಣದ ಹೀರೇಕಾಯಿ? ರಾಮನಗರದ ರೈತನ ತೋಟದಲ್ಲಿ ವಿಸ್ಮಯ! ಏನಿದು