ಬೆಂಗಳೂರಲ್ಲಿ ಜನೌಷಧಿ ಮಳಿಗೆ ಆರಂಭಿಸಲು ನಿರುದ್ಯೋಗಿಗಳಿಂದ ಬಿಬಿಎಂಪಿ ಅರ್ಜಿ ಆಹ್ವಾನ

Published : Jan 24, 2025, 06:20 PM ISTUpdated : Jan 24, 2025, 06:23 PM IST
ಬೆಂಗಳೂರಲ್ಲಿ ಜನೌಷಧಿ ಮಳಿಗೆ ಆರಂಭಿಸಲು ನಿರುದ್ಯೋಗಿಗಳಿಂದ ಬಿಬಿಎಂಪಿ ಅರ್ಜಿ ಆಹ್ವಾನ

ಸಾರಾಂಶ

ಬಿಬಿಎಂಪಿ ಪಶ್ಚಿಮ ವಲಯದ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದಲ್ಲಿ ಜನೌಷಧಿ ಮಳಿಗೆಗಳನ್ನು ತೆರೆಯಲು ಅರ್ಜಿ ಆಹ್ವಾನಿಸಲಾಗಿದೆ. ಸರ್ಕಾರೇತರ ಸಂಸ್ಥೆಗಳು, ದತ್ತಿ ಸಂಸ್ಥೆಗಳು, ನಿರುದ್ಯೋಗಿ ಯುವಕರು ಮತ್ತು ಫಾರ್ಮಸಿಸ್ಟ್‌ಗಳು ಅರ್ಜಿ ಸಲ್ಲಿಸಬಹುದು.

ಬೆಂಗಳೂರು (ಜ.24): ಬೆಂಗಳೂರಿನ ಬಿಬಿಎಂಪಿ ಪಶ್ಚಿಮ ವಲಯದ ಮಲ್ಲೇಶ್ವರಂ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಜನೌಷಧಿ ಮಳಿಗೆಗಳನ್ನು ಪ್ರಾರಂಭಿಸಲು ಅರ್ಜಿ ಆಹ್ವಾನಿಸಲಾಗಿದೆ. ಆರ್ಹ ಸರ್ಕಾರೇತರ ಸಂಸ್ಥೆಗಳು, ದತ್ತಿ ಸಂಸ್ಥೆಗಳು, ನಿರೂದ್ಯೋಗಿ ಯುವಕರು ಹಾಗೂ ಪದವಿ ಫಾರ್ಮಸಿಸ್ಟ್‌ಗಳು ಅಗತ್ಯ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮಲ್ಲೇಶ್ವರಂ ವಿಧಾನ ಸಭಾ ಕ್ಷೇತ್ರದ ನಾಗಪ್ಪ ಬ್ಲಾಕ್, ಸುಬೇದಾರ್ ಪಾಳ್ಯ ಮತ್ತು ನೇತಾಜಿ ವೃತ್ತದ ಆರೋಗ್ಯ ಕೇಂದ್ರಗಳಲ್ಲಿ ಸಾಮಾನ್ಯ ಬಡ ಜನರಿಗೆ ಉತ್ತಮ ಗುಣಮಟ್ಟದ ಜೆನರಿಕ್ ಔಷಧಿಗಳನ್ನು ಕಡಿಮೆ ಕೈಗೆಟುಕುವ ದರದಲ್ಲಿ ಕೇಂದ್ರ ಸರ್ಕಾರದ ಜನೌಷಧಿ ಕಾರ್ಯಕ್ರಮದಡಿ ಜನೌಷಧಿ ಮಳಿಗೆಗಳ ಮೂಲಕ ಸಾರ್ವಜನಿಕರಿಗೆ ತಲುಪಿಸುವ ಉದ್ದೇಶದಿಂದ ಜನೌಷಧಿ ಮಳಿಗೆಗಳನ್ನು ಪ್ರಾರಂಭಿಸಲು ಆರ್ಹ ಸರ್ಕಾರೇತರ ಸಂಸ್ಥೆಗಳು, ದತ್ತಿ ಸಂಸ್ಥೆಗಳು. ನಿರೂದ್ಯೋಗಿ ಯುವಕರು ಹಾಗೂ ಪದವಿ ಫಾರ್ಮಸಿಸ್ಟ್‌ ರವರು ಈ ಕೆಳಕಂಡ ಅಗತ್ಯ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಲು ಕೋರಿದೆ.

1. ಸರ್ಕಾರೇತರ ಸಂಸ್ಥೆಗಳು, ದತ್ತಿ ಸಂಸ್ಥೆಗಳು:
a. ಸದರಿ ಸಂಸ್ಥೆಯ ನೊಂದಣಿ ಪತ್ರ ಮತ್ತು ಸದರಿ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ರ.
b. ಫಾರ್ಮಸಿಸ್ಟ್‌ಗಳ ಪ್ರಮಾಣ ಪತ್ರ
c. ಆಧಾರ್ ಮತ್ತು ಪಾನ್ ಕಾರ್ಡ್
d. ಅರ್ಜಿ ಸಲ್ಲಿಸುತ್ತಿರುವ ಜನೌಷಧಿ ಕೇಂದ್ರಗಳ ವಿಳಾಸ

ಇದನ್ನೂ ಓದಿ: ರಾಜ್ಯಮಟ್ಟದ ಗಣರಾಜ್ಯೋತ್ಸಕ್ಕೆ ಬೆಂಗಳೂರು ಸಿದ್ಧ; ನಾವು ಭಾರತೀಯರು, ಅರಿವೇ ಅಂಬೇಡ್ಕರ್ ನೃತ್ಯ ಪ್ರದರ್ಶನ!

2. ಫಾರ್ಮಸಿಸ್ಟ್ ಪದವೀಧರರು ಮತ್ತು ನಿರುದ್ಯೋಗಿ ಯುವಕರು:
a. ಫಾರ್ಮಸಿಸ್ಟ್‌ಗಳ ಪ್ರಮಾಣ ಪತ್ರ
b. ಆಧಾರ್ ಮತ್ತು ಪಾನ್ ಕಾರ್ಡ್
c. ಅರ್ಜಿ ಸಲ್ಲಿಸುತ್ತಿರುವ ಜನೌಷಧಿ ಕೇಂದ್ರಗಳ ವಿಳಾಸ

ಅರ್ಜಿ ಸಲ್ಲಿಸುವ ಸ್ಥಳ : ಆರೋಗ್ಯಾಧಿಕಾರಿ (ಪಶ್ಚಿಮ) ರವರ ಕಛೇರಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಭಾಷ್ಯಂ ಪಾರ್ಕ್, ಶೇಷಾದ್ರಿಪುರಂ, ಬೆಂಗಳೂರು-20 ಇಲ್ಲಿ ಅರ್ಜಿಯನ್ನು ದಿನಾಂಕ ಮತ್ತು ಸಮಯ ದಿನಾಂಕ: 27-01-2025 ರಿಂದ 28-01-2025ರವರೆಗೆ ಬೆಳಗ್ಗೆ 10.30 ರಿಂದ ಸಂಜೆ 4.00 ರವರೆಗೆ ಸಲ್ಲಿಸಬಹುದಾಗಿದೆ.

PREV
Read more Articles on
click me!

Recommended Stories

ಪುಟಿನ್‌ಗೆ ಇಲ್ಲೇ ಎಲೆಕ್ಷನ್‌ ನಿಲ್ಲೋಕೆ ಟಿಕೆಟ್‌ ಕೊಡ್ತಾರೆ ಅಂದ್ಕೊಂಡಿದ್ದೆ.. ಸಂತೋಷ್‌ ಲಾಡ್‌ ಲೇವಡಿ
ಗಡುವು ಮೀರಿಸಿದರೆ ಮುಂದೆ ಕೆಲಸವಿಲ್ಲ: ಮೆಟ್ರೋ ಗುತ್ತಿಗೆದಾರರಿಗೆ ಡಿ.ಕೆ.ಶಿವಕುಮಾರ್‌ ಎಚ್ಚರಿಕೆ