ಬೆಂಗಳೂರಿನಲ್ಲಿ ಆಸ್ತಿ ತೆರಿಗೆ ತಪ್ಪಾಗಿ ಘೋಷಣೆ ಮಾಡಿಕೊಂಡಿರುವ ಆಸ್ತಿ ಮಾಲೀಕರಿಗೆ ಸರ್ಕಾರದ ಆದೇಶದಂತೆ ಒನ್ ಟೈಮ್ ಸೆಟ್ಲ್‌ಮೆಂಟ್‌ಗೆ ಬಿಬಿಎಂಪಿ ಅವಕಾಶ ನೀಡಿದೆ.
ಬೆಂಗಳೂರು (ಫೆ.23): ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ತಪ್ಪಾಗಿ ಘೋಷಿಸಿಕೊಂಡಿರುವ ಆಸ್ತಿ ಮಾಲೀಕರಿಗೆ ಸರ್ಕಾರದ ಆದೇಶದಂತೆ ‘ಒನ್ ಟೈಮ್ ಸೆಟ್ಲ್ ಮೆಂಟ್’(One Time Settlement-OTS) ಅನ್ನು ಆನ್‌ಲೈನ್ ಮೂಲಕ ಪಾವತಿಸಲು ಬಿಬಿಎಂಪಿ ಅವಕಾಶ ನೀಡಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ತಪ್ಪಾಗಿ ಘೋಷಿಸಿಕೊಂಡಿರುವ ಮಾಲೀಕರಿಗಾಗಿ ‘ಒನ್ ಟೈಮ್ ಸೆಟ್ಲ್ ಮೆಂಟ್’(ಒಟಿಎಸ್) ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದ್ದು, ಒಟಿಎಸ್ ಸೌಲಭ್ಯವನ್ನು ಆನ್‌ಲೈನ್ ಮೂಲಕ ಪಡೆದು ಪಾವತಿಸಲು ಅವಕಾಶ ಕಲ್ಪಿಸಲಾಗಿದೆ. ರಾಜ್ಯ ಸರ್ಕಾರವು ಫೆ.22ರ<ದು ‘ಒನ್ ಟೈಮ್ ಸೆಟ್ಲ್ ಮೆಂಟ್’(ಒಟಿಎಸ್) ಯೋಜನೆಯ ಕುರಿತು ಅಧಿಸೂಚನೆ ಹೊರಡಿಸಲಾಗಿದೆ. ಅದರಂತೆ ಪಾಲಿಕೆಯ ಆಸ್ತಿ ತೆರಿಗೆಯನ್ನು ಆನ್ ಲೈನ್ ಮೂಲಕ ಪಾವತಿಸುವ ಸಾಪ್ಟ್ ವೇರ್ ನಲ್ಲಿ ಒಟಿಎಸ್ ಅನ್ನು ಪಾವತಿಸಲು ಅವಕಾಶ ಕಲ್ಪಿಸಲಾಗಿದ್ದು, ಎಲ್ಲಾ ನಾಗರಿಕರು ಈಗ ಒಟಿಎಸ್ ನ ಸಂಪೂರ್ಣ ಪ್ರಯೋಜನವನ್ನು ಪಡೆದು ಆನ್‌ಲೈನ್‌ನಲ್ಲಿ ಪಾವತಿ ಮಾಡಬಹುದಾಗಿದೆ.
ಬೆಂಗಳೂರು ಜನತೆಗೆ ಗುಡ್‌ನ್ಯೂಸ್ ಕೊಟ್ಟ ಬಿಎಂಆರ್‌ಸಿಎಲ್: ಮೆಜೆಸ್ಟಿಕ್‌ನಿಂದ ಬೆಳಗ್ಗೆ 5ಕ್ಕೆ ಮೆಟ್ರೋ ಸೇವೆ ಆರಂಭ
ಬಿಬಿಎಂಪಿಯ ಆನ್‌ಲೈನ್ ಆಸ್ತಿ ತೆರಿಗೆ ಪಾವತಿ ವ್ಯವಸ್ಥೆಯಲ್ಲಿ OTS ಆದೇಶವನ್ನು ಜಾರಿಗೆ ತಂದಿದ್ದು, ನಾಗರೀಕರು ಸಂಪೂರ್ಣ ಬಡ್ಡಿ ಮನ್ನಾ, ವಂಚನೆ ಪ್ರಕರಣಗಳಲ್ಲಿ ಶೇ.50 ರಷ್ಟು ದಂಡ ಕಡಿತ ಹಾಗೂ ವಸತಿ ಮತ್ತು ಮಿಶ್ರ ಬಳಕೆಗೆ ಪ್ರಕರಣಗಳಲ್ಲಿ ಮಾತ್ರ ಗರಿಷ್ಟ 5-ವರ್ಷಗಳ ಮಿತಿ ಪ್ರಯೋಜನವನ್ನು ತಕ್ಷಣವೇ ಪಡೆಯಬಹುದಾಗಿದೆ. ಪಾಲಿಕೆಯ ಅಧಿಕೃತ ವೆಬ್ ಸೈಟ್ https://bbmptax.karnataka.gov.inಗೆ ಭೇಟಿ ನೀಡಿ, ಒಟಿಎಸ್ ನ ಸಂಪೂರ್ಣ ಪ್ರಯೋಜನವನ್ನು ಆನ್‌ಲೈನ್‌ನಲ್ಲಿ ಪಡೆದು ಪಾವತಿಸಬಹುದಾಗಿದೆ.
ಬಿಬಿಎಂಪಿಯಲ್ಲಿ ಜಾರಿಯಲ್ಲಿರುವ ಸ್ವಯಂಘೋಷಿತ ಆಸ್ತಿ ತೆರಿಗೆ ಪದ್ಧತಿಯಡಿ (ಎಸ್‌ಎಎಸ್) ಕೆಲವು ಆಸ್ತಿ ಮಾಲೀಕರು ತಮ್ಮ ಆಸ್ತಿ ಇರುವ ವಲಯ ವರ್ಗೀಕರಣವನ್ನು ತಪ್ಪಾಗಿ ನಮೂದಿಸಿ ಕಡಿಮೆ ತೆರಿಗೆ ಪಾವತಿಸಿ ಬಿಬಿಎಂಪಿಗೆ ವಂಚಿಸಿದ್ದರು. ಇವರಿಂದ ವ್ಯತ್ಯಾಸದ ಮೊತ್ತ ಮತ್ತು ಬಡ್ಡಿಯನ್ನು ವಸೂಲಿ ಮಾಡಲು ಬಿಬಿಎಂಪಿ ಮುಂದಾಗಿತ್ತು. ಆದರೆ, ಇದಕ್ಕೆ ತೀವ್ರ ವೊರೋಧ ವ್ಯಕ್ತಪಡಿಸಿದ್ದ ಆಸ್ತಿ ಮಾಲೀಕರು, ನಾವು ಬೇಕಂತಲೇ ತಪ್ಪು ಮಾಡಿಲ್ಲ. ಕಣ್ತಪ್ಪಿನಿಂದ ಹಾಗೂ ಕಂಪ್ಯೂಟರ್‌ನಲ್ಲಿ ಹಣ ಪಾವತಿ ಮಾಡುವ ವೇಳೆ ಬ್ಯಾಂಕ್‌ನವರು ಅಥವಾ ಸೈಬರ್ ಅಂಗಡಿಯವರು ತಪ್ಪು ಮಾಡಿರಬಹುದು. ಜೊತೆಗೆ, ಆಸ್ತಿಯ ವಲಯ ತಪ್ಪಾದ ತಕ್ಷಣ ಹೇಳುವುದು ಬಿಟ್ಟು ಅದನ್ನು ದೀರ್ಘಾವಧಿವರಿಗೆ ನಿರ್ಲಕ್ಷ್ಯ ಮಾಡಿ ಈಗ ತೆರಿಗೆ ವಸೂಲಿಗೆ ಮುಂದಾಗಿರುವ ಕಂದಾಯ ಅಧಿಕಾರಿಗಳದ್ದೇ ತಪ್ಪಾಗಿದೆ. ಹೀಗಾಗಿ, ನಾವು ವ್ಯತ್ಯಸ್ಥ ಹಾಗೂ ಹೆಚ್ಚುವರಿ ಬಡ್ಡಿ ಕಟ್ಟುವುದಿಲ್ಲ ಎಂದು ಪಟ್ಟು ಹಿಡಿದಿದ್ದರು.
ಮಲ್ಲೇಶ್ವರ, ಕೆಂಗೇರಿ, ಮಂಡ್ಯ ಸೇರಿ 15 ರೈಲ್ವೆ ನಿಲ್ದಾಣಗಳಿಗೆ ಸ್ಮಾರ್ಟ್ ಟಚ್; 372.13 ಕೋಟಿ ವೆಚ್ಚ ಮೀಸಲು
ಇನ್ನು ಆಸ್ತಿ ತೆರಿಗೆ ಪಾವತಿ ಸಂದರ್ಭದಲ್ಲಿ 78,254 ಮಾಲೀಕರು ವಲಯ ವರ್ಗೀಕರಣವನ್ನು ತಪ್ಪಾಗಿ ನಮೂದಿಸಿರುವುದನ್ನು ಬಿಬಿಎಂಪಿ ಗುರುತಿಸಿತ್ತು. ತಪ್ಪಾಗಿ ಆಸ್ತಿ ವಲಯ ನಮೂಸಿದ್ದ ಸ್ವತ್ತುಗಳ ಮಾಲೀಕರಿಗೆ ವ್ಯತ್ಯಾಸದ ಮೊತ್ತ, ದುಪ್ಪಟ್ಟು ದಂಡ ಮತ್ತು ಬಡ್ಡಿ ಪಾವತಿಸುವಂತೆ ನೋಟಿಸ್ ನೀಡಿತ್ತು. ಈ ಪೈಕಿ 2023ರ ಸೆಪ್ಟಂಬರ್ ಅಂತ್ಯಕ್ಕೆ 7,891 ಮಂದಿ 13,33,12,978 ರೂ. ಪಾವತಿ ಮಾಡಿದ್ದರು. ಉಳಿದ 70,633 ಆಸ್ತಿ ಮಾಲೀಕರಿಂದ 440,37,91,005 ರೂ. ವಸೂಲಿ ಮಾಡಲು ತಯಾರಿ ನಡೆಸಿತ್ತು. ಆದರೆ, ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಇನ್ನು ಕಾಂಗ್ರೆಸ್ ಪಕ್ಷವೂ ಕೂಡ ಚುನಾವಣಾ ಪ್ರಚಾರದ ವೇಳೆ ಸಮಸ್ಯೆ ಬಗೆಹರಿಸುವ ಭರವಸೆ ನೀಡಿತ್ತು. ಈ ಹಿನ್ನೆಲೆಯಲ್ಲಿ ತಪ್ಪಾಗಿ ಆಸ್ತಿಗಳ ವಲಯ ಘೋಷಣೆ ಮಾಡಿಕೊಂಡವರಿಗೆ ಈಗ ಒನ್ ಟೈಮ್ ಸೆಟಲ್‌ಮೆಂಟ್‌ಗೆ ಅವಕಾಶ ನೀಡಿದೆ.