ವಿದ್ಯಾರ್ಥಿ ಚಿಕಿತ್ಸೆಗೆ 6 ತಿಂಗಳ ವೇತನ ಕೊಡ್ತಿದ್ದಾರೆ BBMP ಅಧಿಕಾರಿ

By Kannadaprabha News  |  First Published Feb 15, 2020, 8:29 AM IST

ಕೈಗಳಲ್ಲಿ ಬಿಳಿ ಮಚ್ಚೆಯ ಸಮಸ್ಯೆ ಅನುಭವಿಸುತ್ತಿರುವ ವಿದ್ಯಾರ್ಥಿಯೊಬ್ಬನ ಚಿಕಿತ್ಸೆಗೆ ತಮ್ಮ ಆರು ತಿಂಗಳ ವೇತನ ನೀಡುವ ಭರವಸೆಯನ್ನು ಬಿಬಿಎಂಪಿ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಮಂಜುಳಾ ನಾರಾಯಣಸ್ವಾಮಿ ನೀಡಿದ್ದಾರೆ.


ಬೆಂಗಳೂರು(ಫೆ.15): ಕೈಗಳಲ್ಲಿ ಬಿಳಿ ಮಚ್ಚೆಯ ಸಮಸ್ಯೆ ಅನುಭವಿಸುತ್ತಿರುವ ವಿದ್ಯಾರ್ಥಿಯೊಬ್ಬನ ಚಿಕಿತ್ಸೆಗೆ ತಮ್ಮ ಆರು ತಿಂಗಳ ವೇತನ ನೀಡುವ ಭರವಸೆಯನ್ನು ಬಿಬಿಎಂಪಿ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಮಂಜುಳಾ ನಾರಾಯಣಸ್ವಾಮಿ ನೀಡಿದ್ದಾರೆ.

ಇತ್ತೀಚೆಗಷ್ಟೆಶಿಕ್ಷಣ ಸ್ಥಾಯಿ ಸಮಿತಿಯ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿರುವ ಮಂಜುಳಾ ನಾರಾಯಣಸ್ವಾಮಿ ಅವರು ತಮ್ಮ ನೇತೃತ್ವದಲ್ಲಿ ಸಮಿತಿಯ ವಿವಿಧ ಸದಸ್ಯರು ಹಾಗೂ ಅಧಿಕಾರಿಗಳನ್ನೊಳಗೊಂಡ ತಂಡದೊಂದಿಗೆ ವಿವಿಧ ಪಾಲಿಕೆ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Tap to resize

Latest Videos

ಪುಲ್ವಾಮಾ ಹುತಾತ್ಮರಿಗೆ ನಮಿಸಿ ವೆಲೆಂಟೈನ್‌ ಡೇ ಹೂವಿನ ವ್ಯಾಪಾರ

ಬನ್ನಪ್ಪ ಪಾರ್ಕ್ನ ಬಿಬಿಎಂಪಿ ಪ್ರೌಢಶಾಲೆ ಮತ್ತು ಪಿಯು ಕಾಲೇಜು, ಕಸ್ತೂರಬಾ ನಗರದ ಪಾಲಿಕೆ ಪ್ರೌಢಶಾಲೆ, ಪಿಯು ಕಾಲೇಜು ಮತ್ತು ಪದವಿ ಕಾಲೇಜುಗಳಿಗೆ ಭೇಟಿ ನೀಡಿದ ತಂಡ, ಶಿಕ್ಷಕರು, ಉಪನ್ಯಾಸಕರ ಹಾಜರಾತಿ, ಕುಡಿಯುವ ನೀರು, ಶೌಚಾಲಯ ಸೇರಿದಂತೆ ಮತ್ತಿತರ ಸೌಲಭ್ಯಗಳನ್ನು ಪರಿಶೀಲಿಸಿದರು.

click me!