2020-21ನೇ ಸಾಲಿನ ಬಿಬಿಎಂಪಿ ಬಜೆಟ್‌ 8000 ಕೋಟಿಗಿಳಿಕೆ?

By Kannadaprabha NewsFirst Published Oct 1, 2020, 7:10 AM IST
Highlights

ಆದಾಯಕ್ಕಿಂತ ವೆಚ್ಚ ಹೆಚ್ಚಳದಿಂದ ಬಿಬಿಎಂಪಿ ಆರ್ಥಿಕ ಪರಿಸ್ಥಿತಿ ಮೇಲೆ ಪರಿಣಾಮ ಹಿನ್ನೆಲೆ| ಬಜೆಟ್‌ಗೆ ಆಡಳಿತಾಧಿಕಾರಿ ಕತ್ತರಿ?| ಬಜೆಟ್‌ ಪರಿಷ್ಕರಣೆ ಕುರಿತು ಅ.5ಕ್ಕೆ ಅಧಿಕಾರಿಗಳ ಸಭೆ| 11,969 ಕೋಟಿಯ ಬೃಹತ್‌ ಬಜೆಟ್‌ ಮಂಡಿಸಿದ್ದ ಜನಪ್ರತಿನಿಧಿಗಳು| 254 ಕೋಟಿ ಕಡಿತಗೊಳಿಸಿ 11,715 ಕೋಟಿಗೆ ಅನುಮೋದನೆ ನೀಡಿದ್ದ ಸರ್ಕಾರ| 
 

ಬೆಂಗಳೂರು(ಅ.01): ಕಳೆದ ಫೆಬ್ರವರಿಯಲ್ಲಿ ಮಂಡಿಸಲಾಗಿದ್ದ ಬಿಬಿಎಂಪಿಯ 2020-21ನೇ ಸಾಲಿನ ಬಜೆಟ್‌ ಪರಿಷ್ಕರಣೆ ಮುಂದಾಗಿರುವ ಆಡಳಿತಾಧಿಕಾರಿ ಗೌರವ್‌ ಗುಪ್ತಾ, ಈ ಕುರಿತು ಚರ್ಚೆಗೆ ಅ.5ಕ್ಕೆ ಎಲ್ಲ ವಿಭಾಗಗಳು ಅಧಿಕಾರಿಗಳ ಸಭೆ ಕರೆದಿದ್ದಾರೆ.

ಪಾಲಿಕೆಯ 2020-21ನೇ ಸಾಲಿನ ಬಜೆಟ್‌ ಅವೈಜ್ಞಾನಿಕವಾಗಿದ್ದು, ಪಾಲಿಕೆಯ ಆದಾಯಕ್ಕಿಂತ ವೆಚ್ಚ ಅಧಿಕವಾಗಿದೆ. ಇದು ಪಾಲಿಕೆಯ ಆರ್ಥಿಕ ಪರಿಸ್ಥಿತಿಯ ಮೇಲೆ ಪರಿಣಾಮ ಬೀರಲಿದೆ. ಹೀಗಾಗಿ, ಆದಾಯಕ್ಕೆ ಅನುಗುಣವಾಗಿ ಬಜೆಟ್‌ ಪರಿಷ್ಕರಿಸಲು ಈ ಸಭೆ ಕರೆದಿದ್ದಾರೆ ಎನ್ನಲಾಗಿದೆ.

'ಕೊರೋನಾ ಪರೀಕ್ಷೆ ನಿರಾಕರಿಸಿದರೆ ಕೇಸ್‌ ಹಾಕ್ತೀವಿ'

ಅ.5ಕ್ಕೆ ಎಲ್ಲ ವಿಭಾಗದ ಅಧಿಕಾರಿಗಳ ಸಭೆ ನಡೆಯಲಿದ್ದು, 2020ರ ಏ.1ರಿಂದ ಸೆ.30ರ ವರೆಗಿನ ಸ್ವೀಕೃತ, ವೆಚ್ಚಗಳು ಹಾಗೂ ಅ.1ರಿಂದ 2021ರ ಮಾ.31ರ ವರೆಗಿನ ನಿರೀಕ್ಷಿತ ಸ್ವೀಕೃತಿ ಮತ್ತು ವೆಚ್ಚಗಳನ್ನು ಸಿದ್ಧಪಡಿಸಿಕೊಂಡು ಮಂಡನೆ ಮಾಡುವಂತೆ ಸೂಚಿಸಿದ್ದಾರೆ.

11,969 ಕೋಟಿ ಬಜೆಟ್‌:

ಕಳೆದ ಫೆಬ್ರವರಿಯಲ್ಲಿ ಆಗಿನ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಲ್‌.ಶ್ರೀನಿವಾಸ್‌ ಅವರು ಒಟ್ಟು 2020-21ನೇ ಸಾಲಿಗೆ 11,969.5 ಕೋಟಿ ಬೃಹತ್‌ ಗಾತ್ರದ ಬಜೆಟ್‌ ಮಂಡನೆ ಮಾಡಿ ಸರ್ಕಾರದ ಅನುಮೋದನೆಗೆ ಕಳುಹಿಸಿ ಕೊಡಲಾಗಿತ್ತು. ರಾಜ್ಯ ಸರ್ಕಾರ .254 ಕೋಟಿ ಮಾತ್ರ ಕಡಿತಗೊಳಿಸಿ 11,715.2 ಕೋಟಿಗೆ ಅನುಮೋದನೆ ನೀಡಿತ್ತು. ಈ ಮೊತ್ತವನ್ನು 8 ಸಾವಿರ ಕೋಟಿಗೆ ಕಡಿತಗೊಳಿಸುವ ಚಿಂತನೆ ಆಡಳಿತಾಧಿಕಾರಿ ಹೊಂದಿದ್ದಾರೆ ಎನ್ನಲಾಗಿದೆ.
 

click me!