ಸ್ವಾಬ್‌ ಸಂಗ್ರಹಿಸಲು ಪದವೀಧರರ ನೇಮಕ

By Kannadaprabha NewsFirst Published Jul 23, 2020, 8:27 AM IST
Highlights

ನಗರದ ಕೊರೋನಾ ಸೋಂಕು ನಿಯಂತ್ರಣ ಸಂಬಂಧ ಸೋಂಕಿನ ಲಕ್ಷಣ ಇರುವ ಗಂಟಲ ದ್ರವ ಸಂಗ್ರಹಿಸುವ ಕಾರ್ಯಕ್ಕೆ ಗೌರವಧನದ ಮೇಲೆ ಬಿಬಿಎಂಪಿ ಜೀವಶಾಸ್ತ್ರ ಪದವೀಧರರನ್ನು ನೇಮಕ ಮಾಡಿಕೊಳ್ಳಲು ಮುಂದಾಗಿದೆ.

ಬೆಂಗಳೂರು(ಜು.23): ನಗರದ ಕೊರೋನಾ ಸೋಂಕು ನಿಯಂತ್ರಣ ಸಂಬಂಧ ಸೋಂಕಿನ ಲಕ್ಷಣ ಇರುವ ಗಂಟಲ ದ್ರವ ಸಂಗ್ರಹಿಸುವ ಕಾರ್ಯಕ್ಕೆ ಗೌರವಧನದ ಮೇಲೆ ಬಿಬಿಎಂಪಿ ಜೀವಶಾಸ್ತ್ರ ಪದವೀಧರರನ್ನು ನೇಮಕ ಮಾಡಿಕೊಳ್ಳಲು ಮುಂದಾಗಿದೆ.

ಜೀವಶಾಸ್ತ್ರ ಪದವೀಧರರಿಂದ ಅರ್ಜಿ ಆಹ್ವಾನಿಸಿ ಮಾಸಿಕ 14 ಸಾವಿರ ಗೌರವ ಧನ ನೀಡುವುದಾಗಿಯೂ ತಿಳಿಸಲಾಗಿತ್ತು. 83 ಪದವೀಧರರು ಇ-ಮೇಲ್‌ಗೆ ಸ್ವವಿವರ ಸಲ್ಲಿಸಿದ್ದು, ಬುಧವಾರ 10 ಮಂದಿ ಹಾಜರಾಗಿದ್ದಾರೆ.

ಅಮೆರಿಕದ ಉದ್ಯಮಿಗಳಿಗೆ ಮೋದಿ ರತ್ನಗಂಬಳಿ!

ಉಳಿದ 73 ಜನರು ಹೊರ ಜಿಲ್ಲೆಯವರಾಗಿದ್ದು, ಮುಂದಿನ ದಿನಗಳಲ್ಲಿ ಆಗಮಿಸುವುದಾಗಿ ತಿಳಿಸಿದ್ದಾರೆ ಎಂದು ಬಿಬಿಎಂಪಿ ಅಧಿಕಾರಿ ಮಾಹಿತಿ ನೀಡಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್‌ ಪರೀಕ್ಷೆಗೆ ಗಂಟಲು ದ್ರವ ಸಂಗ್ರಹಣೆಗೆ (ಸ್ವಾಬ್‌ ಕಲೆಕ್ಟರ್ಸ್‌) 135 ಮಂದಿ ಬೇಕಾಗಿದೆ.

click me!