ಸೂರಿಗಾಗಿ ಸಮರ ಹೋರಾಟದ ಮೂಲಕ ರಾಜ್ಯಾದ್ಯಂತ ಇರುವ ನಿರಾಶ್ರಿತರಿಗೆ ನಿವೇಶನ ನೀಡುವಂತೆ ಒತ್ತಾಯಿಸಿ ಮಾ. 9ರಂದು ಸಿಪಿಐ ರಾಜ್ಯಮಂಡಳಿ ನೇತೃತ್ವದಲ್ಲಿ ವಿಧಾನಸೌಧ ಮುತ್ತಿಗೆಗೆ ಈಗಾಗಲೇ ಕರೆ ನೀಡಲಾಗಿದೆ ಎಂದು ಸಿಪಿಐ ಜಿಲ್ಲಾ ಸಹ ಕಾರ್ಯದರ್ಶಿ ಜಿ. ರಘು ಹೇಳಿದರು.
ಚಿಕ್ಕಮಗಳೂರು (ಫೆ.27): ಸೂರಿಗಾಗಿ ಸಮರ ಹೋರಾಟದ ಮೂಲಕ ರಾಜ್ಯಾದ್ಯಂತ ಇರುವ ನಿರಾಶ್ರಿತರಿಗೆ ನಿವೇಶನ ನೀಡುವಂತೆ ಒತ್ತಾಯಿಸಿ ಮಾ. 9ರಂದು ಸಿಪಿಐ ರಾಜ್ಯಮಂಡಳಿ ನೇತೃತ್ವದಲ್ಲಿ ವಿಧಾನಸೌಧ ಮುತ್ತಿಗೆಗೆ ಈಗಾಗಲೇ ಕರೆ ನೀಡಲಾಗಿದೆ ಎಂದು ಸಿಪಿಐ(CPI) ಜಿಲ್ಲಾ ಸಹ ಕಾರ್ಯದರ್ಶಿ ಜಿ. ರಘು ಹೇಳಿದರು.
ಸಿಪಿಐ ನೇತೃತ್ವದಲ್ಲಿ ನಿರಾಶ್ರಿತರು ಸೋಮವಾರ ನಗರದ ಹನುಮಂತಪ್ಪ ವೃತ್ತ, ಎಂಜಿ ರಸ್ತೆ ಮೂಲಕ ಪ್ರತಿಭಟನಾ ಮೆರವಣಿಗೆ ನಡೆಸಿ ಆಜಾದ್ ಪಾರ್ಕ್ನಲ್ಲಿ ನಡೆದ ಸಮಾವೇಶದಲ್ಲಿ ಅವರು ಮಾತನಾಡಿದರು.
ಶಿವಮೊಗ್ಗ: ನಿರೀಕ್ಷೆ ಮಿರಿ ವಿಮಾನ ನಿಲ್ದಾಣದತ್ತ ಬಂದ ಜನಸಾಗರ
ಚಿಕ್ಕಮಗಳೂರು(Chikkamagaluru) ಸೇರಿದಂತೆ ರಾಜ್ಯಾದ್ಯಂತ ಇಂದಿನಿಂದ ಅಹೋರಾತ್ರಿ ಚಳವಳಿ ಹಮ್ಮಿಕೊಂಡಿದ್ದು, ಜಿಲ್ಲಾಡಳಿತ ಎಚ್ಚೆತ್ತುಕೊಂಡು ಸ್ಪಂದಿಸದಿದ್ದಲ್ಲಿ ದೊಡ್ಡಮಟ್ಟದ ಪ್ರತಿಭಟನೆ(Protest) ಮೂಲಕ ಸಿಪಿಐ ರಾಜ್ಯ ಕಾರ್ಯದರ್ಶಿ ಸಾಹಿತಿ ಸುಂದರೇಶ್ ನೇತೃತ್ವದಲ್ಲಿ ವಿಧಾನಸೌಧ ಮುತ್ತಿಗೆ ಹಾಕಲಾಗುವುದು ಎಂದು ಹೇಳಿದರು.
ತುಮಕೂರಿನ ಶಿರಾದಿಂದ ಈಗಾಗಲೇ ಜಾಥಾ ಆರಂಭವಾಗಿದ್ದು, ವಿವಿಧ ಜಿಲ್ಲೆಗಳಲ್ಲಿ ಸೂರಿಗಾಗಿ ಹೋರಾಟ ನಡೆಯುತ್ತಿದೆ ಎಂದರು.
ಜಿಲ್ಲೆಯಲ್ಲಿ ಸಾವಿರಾರು ನಿವೇಶನ ರಹಿತರಿದ್ದು, ಬಡವರು ತಾಲೂಕು ಕಚೇರಿ, ಗ್ರಾಪಂಗಳಲ್ಲಿ ಅರ್ಜಿ ಸಲ್ಲಿಸಿ ನಿವೇಶನಕ್ಕಾಗಿ ಕಾಯುತ್ತಿದ್ದಾರೆ. ಆದರೂ ಇದುವರೆಗೂ ಜಿಲ್ಲಾಡಳಿತವಾಗಲಿ, ಸ್ಥಳೀಯ ಆಡಳಿತ, ಚುನಾಯಿತ ಪ್ರತಿನಿಧಿಗಳಾಗಲಿ ಸ್ಪಂದಿಸಿಲ್ಲ. ಅರ್ಜಿಗಳನ್ನು ವಿಲೇವಾರಿ ಮಾಡುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ನಿವೇಶನ ರಹಿತರು ಸಾಕಷ್ಟುಪಂಚಾಯಿತಿಗಳಲ್ಲಿ ಅರ್ಜಿ ಸಲ್ಲಿಸಿದ್ದಾರೆ, ಆದರೆ ಅದನ್ನು ಕಡೆಗಣಿಸುತ್ತಿದ್ದಾರೆ. ಕಾಫಿ ತೋಟ ಒತ್ತುವರಿ ಮಾಡಿರುವುದನ್ನು ಗುತ್ತಿಗೆ ನೀಡುತ್ತೇವೆಂದು ಸರ್ಕಾರವೆ ಮುಂದೆ ಬಂದಿದೆ, ಅದರ ಜೊತೆಯಲ್ಲಿ ಜೀವನಕ್ಕೆ ಆಶ್ರಯವೆ ಇಲ್ಲದಿರುವ ನಿವೇಶನ ರಹಿತರಿಗೆ ಒಂದಿಷ್ಟುಜಾಗ ನೀಡಿ ಉಳಿಕೆ ಜಾಗವನ್ನು ಗುತ್ತಿಗೆ ನೀಡಬೇಕೆನ್ನುವುದರಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು.
ಪಂಚಾಯಿತಿ ವ್ಯಾಪ್ತಿವಾರು ನಗರದಲ್ಲಿ ಸತತವಾಗಿ ಐದು ದಿನಗಳಿಂದ ಧರಣ ಕುಳಿತು ಅದಕ್ಕೆ ಪೂರಕವಾಗಿ ಇಂದು ದೊಡ್ಡ ಮಟ್ಟದ ಚಳವಳಿ ಮಾಡಿದ್ದೇವೆ, ಇದೂವರೆಗೂ ಸರ್ಕಾರ ಅಥವಾ ಜಿಲ್ಲಾಡಳಿತವಾಗಲಿ ನಮ್ಮನ್ನು ಕರೆದು ಮಾತನಾಡುವ ಸೌಜನ್ಯವನ್ನು ತೋರಿಸಿಲ್ಲ. ಹಾಗಾಗಿ ಇಂದಿನಿಂದ ನಗರದಲ್ಲಿ ಅಹೋರಾತ್ರಿ ಧರಣಿ ನಡೆಸಲು ಪಕ್ಷ ತೀರ್ಮಾನಿಸಿದೆ ಎಂದರು.
ಪೌರಕಾರ್ಮಿಕರ ನೇಮಕಾತಿಯಲ್ಲಿ ಅಕ್ರಮ: ಪಪಂ ಕಚೇರಿ ಮುತ್ತಿಗೆ
ತಾಲೂಕು ಕಾರ್ಯದರ್ಶಿ ಕೆರೆಮಕ್ಕಿ ರಮೇಶ್ ಮಾತನಾಡಿ, ನಗರ ಸೇರಿದಂತೆ ತಾಲೂಕಿನಾದ್ಯಂತ 25 ಸಾವಿರಕ್ಕೂ ಹೆಚ್ಚು ಕುಟುಂಬಗಳು ಸ್ವಂತ ನಿವೇಶನವಿಲ್ಲದೆ ಬಾಡಿಗೆ ಮನೆ, ಗುಡಿಸಲು, ಸರ್ಕಾರಿ ಜಾಗಗಳಲ್ಲಿ ಕಷ್ಟಕರ ಜೀವನ ನಡೆಸುತ್ತಿದ್ದು, ಈ ಕುರಿತು ನಗರಸಭೆ, ಗ್ರಾಪಂ ಗಳಲ್ಲಿ ನಿವೇಶನ ರಹಿತರ ಸಮೀಕ್ಷೆ ನಡೆಸಿ ಅರ್ಹ ಫಲಾನುಭವಿಗಳಿಗೆ ನಿವೇಶನ ಒದಗಿಸಬೇಕೆಂದು ಸಿಪಿಐ ಹಲವು ವರ್ಷಗಳಿಂದ ಒತ್ತಾಯಿಸಲಾಗುತ್ತಿದೆ. ಆದರೂ ಸಮೀಕ್ಷೆ ನಡೆಸಲಾಗಿರುವ ಮತ್ತು ಬಾಕಿ ಉಳಿದಿರುವ ನಿವೇಶನ ರಹಿತರಿಗೆ ನಿವೇಶನ ಹಂಚುವ ಕಾರ್ಯವಾಗಿಲ್ಲ. ಈಗಾಗಲೇ ಆಶ್ರಯ ನಿವೇಶನವೆಂದು ಪಹಣಿಯಲ್ಲಿ ನಮೂದಿಸಲಾಗಿರುವ ಜಾಗವನ್ನು ಕಡ್ಡಾಯವಾಗಿ ನಿವೇಶನವನ್ನಾಗಿ ಮಾರ್ಪಡಿಸಿ ಬಡವರಿಗೆ ಹಂಚಬೇಕು. ನಗರ ಪ್ರದೇಶದಲ್ಲಿ ಬಡವರಿಗೆ ಅಪಾರ್ಚ್‌ಮೆಂಟ್ ಮನೆ ನೀಡುವ ಬದಲು ಪ್ರತ್ಯೇಕ ನಿವೇಶನ ನೀಡಿ ಮನೆ ನಿರ್ಮಿಸಿಕೊಳ್ಳಲು ಸಹಾಯಧನ ನೀಡಬೇಕು. ಗ್ರಾಪಂ ಮತ್ತು ನಗರಸಭೆ ವ್ಯಾಪ್ತಿಯ ನಿವೇಶನ ರಹಿತರ ಹೊಸ ಪಟ್ಟಿತಯಾರಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಿಪಿಐ ಜಿಲ್ಲಾ ಕಾರ್ಯದರ್ಶಿ ರಾಧಾ ಸುಂದರೇಶ್, ಖಜಾಂಚಿ ಎಚ್.ಎಂ. ರೇಣುಕಾರಾಧ್ಯ, ಸಿಪಿಐ ರಾಜ್ಯ ಸಹ ಕಾರ್ಯದರ್ಶಿ ಬಿ. ಅಮ್ಜದ್, ಎಸ್. ವಿಜಯ್‌ಕುಮಾರ್, ಹೆಡದಾಳ್ ಕುಮಾರ್, ವಸಂತಕುಮಾರ್, ಶಿವಾನಂದ, ನಾರಾಯಣ, ದಯಾನಂದ್, ಸಂಜೀವ ಹಾಗೂ ನಿವೇಶನ ರಹಿತರು ಇದ್ದರು.