ನಾವು ಹೊರಗಿದ್ರು ಗೆಲ್ತೀವಿ. ಒಳಗಿದ್ರು ಗೆಲ್ತೀವಿ ಎಂದು ಬಿಜೆಪಿ ಶಾಸಕರೋರ್ವರು ಹೇಳಿದ್ದು ಇದರಿಂದ ದೂರ ಸರಿಯುವ ಮುನ್ಸೂಚನೆ ನೀಡಿದರಾ ಎನ್ನುವ ಅನುಮಾನ ಮೂಡಿದೆ.
ಚಿತ್ರದುರ್ಗ (ಫೆ.03): ‘ಸಿಎಂ ಊಟ, ನಾಷ್ಟಾ ಮಾಡಿಸುವುದರಿಂದ ನಮ್ಮ ಬೇಡಿಕೆ ಈಡೇರಲ್ಲ. ನಾವು ಶಾಸಕರು, ಸಂಸದರು ಹೇಗೆ ಆಗಬೇಕೆಂದು ನಮಗೆ ಗೊತ್ತಿದೆ.
ನಮ್ಮನ್ನು ಹೊರಗೆ ಹಾಕಿದ್ರೂ ಆಗ್ತೀವಿ, ಪಕ್ಷದೊಳಗಿದ್ದರೂ ಗೆಲ್ತೀವಿ’ ಎಂದು ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಟಾಂಗ್ ನೀಡಿದ್ದಾರೆ.
ವಿಧಾನಸಭೆ ಕಲಾಪದಲ್ಲಿ ಪ್ರತಿಧ್ವನಿಸಿದ ST, 2A ಮೀಸಲಾತಿ ಹೋರಾಟ: ಬಿಎಸ್‌ವೈ ಗಪ್-ಚುಪ್ ...
ನಗರದಲ್ಲಿ ಮಂಗಳವಾರ ಪಂಚಮಸಾಲಿ 2ಎ ಹೋರಾಟದ ಸಮಾವೇಶದಲ್ಲಿ ಮಾತನಾಡಿದ ಅವರು, ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಸಿಗಲಿದೆ. ಪಂಚಮಸಾಲಿ ಶ್ರೀಗಳು ಪಾದಯಾತ್ರೆ ಮಾಡಿದರೂ, ಸಿಎಂ ಮಾತನಾಡಿಲ್ಲ.
ಈ ಬಗ್ಗೆ ನಾವು ಸದನದಲ್ಲಿ ಪ್ರಸ್ತಾಪಿಸಿದ ಬಳಿಕ ಸಭೆ ಕರೆದರು ಎಂದರು.