ಇಡೀ ವಿಶ್ವಕ್ಕೆ ಸಮಾನತೆ ಸಾರಿದ ವಿಶ್ವಗುರು ಬಸವಣ್ಣ ಅವರನ್ನು ಸಾಂಸ್ಕೃತಿಕ ನಾಯಕ ಎಂದು ನಮ್ಮ ಸರ್ಕಾರ ಘೋಷಣೆ ಮಾಡಿ ಗೌರವ ಹೆಚ್ಚಿಸಿದೆ ಎಂದು ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ, ಶಾಸಕ ಬಸವರಾಜ ರಾಯರಡ್ಡಿ ಹೇಳಿದರು.
ಯಲಬುರ್ಗಾ (ಫೆ.18): ಇಡೀ ವಿಶ್ವಕ್ಕೆ ಸಮಾನತೆ ಸಾರಿದ ವಿಶ್ವಗುರು ಬಸವಣ್ಣ ಅವರನ್ನು ಸಾಂಸ್ಕೃತಿಕ ನಾಯಕ ಎಂದು ನಮ್ಮ ಸರ್ಕಾರ ಘೋಷಣೆ ಮಾಡಿ ಗೌರವ ಹೆಚ್ಚಿಸಿದೆ ಎಂದು ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ, ಶಾಸಕ ಬಸವರಾಜ ರಾಯರಡ್ಡಿ ಹೇಳಿದರು. ಪಟ್ಟಣದ ಕಂದಾಯ ಭವನದಲ್ಲಿ ತಾಲೂಕಾಡಳಿತದಿಂದ ನಡೆದ ವಿಶ್ವಗುರು ಬಸವಣ್ಣನವರ ಭಾವಚಿತ್ರ ಅನಾವರಣಗೊಳಿಸಿ ಮಾತನಾಡಿದ ಅವರು, ಬಸವೇಶ್ವರರ ಸಂದೇಶಗಳು ಸರ್ವಕಾಲಿಕ ಅವರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂದರು.
ಬಸವಾದಿ ಶರಣರಲ್ಲಿ ಬಸವಣ್ಣನವರು ಇಂದಿನ ಸಮಾಜದಲ್ಲಿ ಜಾತಿ, ಧರ್ಮ ಮೇಲು-ಕೀಳು ಎಂಬ ಭೇದ-ಭಾವ ಜನರಲ್ಲಿ ಮೂಡಿರುವುದು ದುರಂತವೇ ಸರಿ. ಪ್ರತಿಯೊಬ್ಬರ ಮೈಯಲ್ಲಿ ಹರಿಯುತ್ತಿರುವುದು ಕೆಂಪು ರಕ್ತವೇ ವಿನಃ ಬೇರೆ ಅಲ್ಲ. ಗ್ರಾಮಗಳಲ್ಲಿ ದೇವಸ್ಥಾನ ನಿರ್ಮಿಸುತ್ತಾರೆ. ಅದರಲ್ಲಿ ನಾಯಿ, ಬೆಕ್ಕುಗಳು ಹೋಗಲು ಅವಕಾಶವಿದೆ. ಆದರೆ ಕೆಳಜಾತಿ ಎನಿಸಿಕೊಂಡವರು ಹೋಗುವುದಕ್ಕೆ ಜನರು ಅವಕಾಶ ಕೊಡುವುದಿಲ್ಲ. ಇದು ನಮ್ಮ ಸಮಾಜದಲ್ಲಿರುವ ಕೆಟ್ಟ ಪಿಡುಗು. ಇದನ್ನು ಹೋಗಲಾಡಿಸಲು ಬಸವಣ್ಣನವರು ೧೨ನೇ ಶತಮಾನದಲ್ಲಿಯೇ ಜಾತಿ ಪದ್ಧತಿ ವಿರುದ್ಧ ದ್ವನಿ ಎತ್ತಿದ ಮಹಾನ್ ಶರಣರಲ್ಲಿ ಮೊದಲನೆಯವರು ಎಂದು ಗುಣಗಾನ ಮಾಡಿದರು.
undefined
ಮೌಢ್ಯಗಳನ್ನು ಬಿತ್ತುವುದನ್ನು ಬಿಡಬೇಕು. ಜೀವನದಲ್ಲಿ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ವಿಶ್ವಗುರು ಬಸವಣ್ಣನವರ ಬಹು ದೊಡ್ಡದಾದ ಬಸವ ಮಂದಿರವನ್ನು ಸುಮಾರು ₹೫೦೦ ಕೋಟಿ ವೆಚ್ಚದಲ್ಲಿ ನಿರ್ಮಿಸುವ ಗುರಿ ಹೊಂದಲಾಗಿದೆ. ಆದರೆ ಅಲ್ಲಿ ಯಾವುದೇ ಮಂತ್ರ ಹಾಗೂ ಪೂಜೆ ಹೋಮ ಹವನಗಳಿಗೆ ಅವಕಾಶವಿಲ್ಲ. ಅಲ್ಲಿ ಮನಶಾಂತಿ, ನೆಮ್ಮದಿ ಹಾಗೂ ಮನಪರಿವರ್ತನೆಯ ತಾಣವಾಗಿ ನಿರ್ಮಿಸಲಾಗುವ ಯೋಚನೆಯನ್ನು ಸಿಎಂ ಸಿದ್ದರಾಮಯ್ಯ ಹೊಂದಿದ್ದಾರೆ ಎಂದು ಹೇಳಿದರು.
7 ಕೋಟಿ ಜನರ ಕಿವಿಗೆ ಹೂ ಇಟ್ಟ ಸಿದ್ದರಾಮಯ್ಯ ಬಜೆಟ್: ಎಚ್.ಡಿ.ಕುಮಾರಸ್ವಾಮಿ
ಈ ಸಂದರ್ಭದಲ್ಲಿ ತಹಸೀಲ್ದಾರ ಬಸವರಾಜ ತೆನ್ನಳ್ಳಿ, ತಾಪಂ ಇಒ ಸಂತೋಷ ಪಾಟೀಲ ಬಿರಾದಾರ, ವಿ.ಕೆ. ಬಡಿಗೇರ, ಸಿಪಿಐ ಮೌನೇಶ ಪಾಟೀಲ, ಪ್ರಾಣೇಶ ಹಾದಿಮನಿ, ಲಿಂಗನಗೌಡ ಪಾಟೀಲ, ಬೆಟದಪ್ಪ ಮಾಳೆಕೊಪ್ಪ, ಪಪಂ ಮುಖ್ಯಾಧಿಕಾರಿ ನಾಗೇಶ ಹಾಗೂ ಬ್ಲಾಕ್ ಕಾಂಗ್ರೆಸ್ ತಾಲೂಕಾಧ್ಯಕ್ಷ ಬಸವರಾಜ ಉಳ್ಳಾಗಡ್ಡಿ, ಡಾ.ಶಿವನಗೌಡ ದಾನರಡ್ಡಿ, ಕೆರಿಬಸಪ್ಪ ನಿಡಗುಂದಿ, ಶರಣಪ್ಪ ಗಾಂಜಿ ಮತ್ತಿತರರು ಇದ್ದರು.