ಪಂಚಮಸಾಲಿ 2ಎ ಮೀಸಲಾತಿ ಹೋರಾಟದ ಬಗ್ಗೆ ಮಾತನಾಡಲ್ಲ: ಹೊರಟ್ಟಿ

By Kannadaprabha NewsFirst Published Feb 13, 2021, 8:20 AM IST
Highlights

ಯಾರ್ಯಾರಿಗೆ ಏನೇನು ಸೌಲಭ್ಯ ಕೊಡಬೇಕು ಎಂಬ ಬಗ್ಗೆ ಸರ್ಕಾರ ವಿಚಾರ ಮಾಡುತ್ತದೆ| ದೇಶಕ್ಕೆ ಮಾದರಿಯಾಗುವ ಪರಿಷತ್‌ ಮಾಡಲು ನಾನು ಶ್ರಮಿಸುತ್ತೇನೆ ಎಂದು ಭರವಸೆ ನೀಡಿದ ಬಸವರಾಜ್‌ ಹೊರಟ್ಟಿ| 

ತುಮಕೂರು(ಫೆ.13): 2ಎ ಮೀಸಲಾತಿಗಾಗಿ ಶ್ರೀಗಳು ನಡೆಸುತ್ತಿರುವ ಪಾದಯಾತ್ರೆ ಬಗ್ಗೆ ನಾನು ಮಾತನಾಡುವುದಿಲ್ಲ. ಶ್ರೀಗಳು ನಮ್ಮೆಲ್ಲರಿಗೂ ಮಾರ್ಗದರ್ಶನ ಮಾಡುವಂತಹವರು. ಅವರ ಹೋರಾಟಕ್ಕೆ ದೇವರು ಒಳ್ಳೆಯದು ಮಾಡಲಿ ಎಂದು ವಿಧಾನ ಪರಿಷತ್‌ ಸಭಾಪತಿ ಬಸವರಾಜ್‌ ಹೊರಟ್ಟಿ ತಿಳಿಸಿದ್ದಾರೆ. 

ವಿಧಾನ ಪರಿಷತ್‌ ಸಭಾಪತಿಯಾದ ಬಳಿಕ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರ್ಯಾರಿಗೆ ಏನೇನು ಸೌಲಭ್ಯ ಕೊಡಬೇಕು ಎಂಬ ಬಗ್ಗೆ ಸರ್ಕಾರ ವಿಚಾರ ಮಾಡುತ್ತದೆ ಎಂದರು. 

ನಾವೀಬ್ರು ಮಂತ್ರಿಯಾಗಿದ್ರೆ ಸಮ್ಮಿಶ್ರ ಸರ್ಕಾರ ಪತನವಾಗ್ತಿರಲಿಲ್ಲ ಎಂದ ಬಿಜೆಪಿ ನಾಯಕ

ನಾವು ಜಾತ್ಯತೀತ ರಾಷ್ಟ್ರದಲ್ಲಿದ್ದೇವೆ. ಪ್ರತಿಯೊಬ್ಬರೂ, ರಾಜಕೀಯ ಪಕ್ಷಗಳು, ರಾಜಕಾರಣಿಗಳು ಚುನಾವಣೆಗೆ ನಿಲ್ಲಬೇಕಾದರೆ ಜಾತಿ ಪದ್ಧತಿ ಮುಂದಿಟ್ಟುಕೊಳ್ಳುತ್ತಾರೆ. ಇದು ಒಳ್ಳೆಯ ಪದ್ಧತಿಯಲ್ಲ. ಆದರೆ, ನಿಸರ್ಗ ನಿಯಮಗಳು ಬದಲಾವಣೆಯಾದಂತೆ ನಾವುಗಳು ಸಹ ಬದಲಾವಣೆ ಆಗಬೇಕಾಗಿದೆ ಎಂದು ತಿಳಿಸಿದರು. ಇದೇ ವೇಳೆ ದೇಶಕ್ಕೆ ಮಾದರಿಯಾಗುವ ಪರಿಷತ್‌ ಮಾಡಲು ನಾನು ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.
 

click me!