ಈ ಚುನಾವಣೆಯಲ್ಲಿ ಜೆಡಿಎಸ್‌ ಗೆಲವಿನ ಭವಿಷ್ಯ

By Kannadaprabha News  |  First Published Oct 26, 2020, 7:07 AM IST

ಈ ಬಾರಿ ನಡೆಯುವ ಚುನಾವಣೆಯಲ್ಲಿ ಜೆಡಿಎಸ್ ಗೆಲುವಿನ ಭವಿಷ್ಯ ನುಡಿಯಲಾಗಿದೆ. 


ಚಿಕ್ಕಬಳ್ಳಾಪುರ (ಅ.26):  ಶಿಕ್ಷಣ ಕ್ಷೇತ್ರಗಳಿಗೆ ರಾಜ್ಯದಲ್ಲಿ ಕಾಂಗ್ರೆಸ್‌, ಬಿಜೆಪಿ ಸರ್ಕಾರಗಳ ಕೊಡುಗೆ ಶೂನ್ಯವಾಗಿದ್ದು ಜನತಾ ಪರಿವಾರ ಅಧಿಕಾರಕ್ಕೆ ಬಂದಗೆಲ್ಲಾ ಜನಪರವಾದ ಶಿಕ್ಷಣ ನೀತಿ, ಶಿಕ್ಷಕರ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂಧಿಸಲಾಗಿದೆಯೆಂದು ಮಾಜಿ ಶಿಕ್ಷಣ ಸಚಿವ, ಜೆಡಿಎಸ್‌ ಹಿರಿಯ ನಾಯಕ ಬಸವರಾಜ ಹೊರಟ್ಟಿತಿಳಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಶುಕ್ರವಾರ ಆಗ್ನೇಯ ಪದವೀಧರ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ತೂಪಲ್ಲಿ ಚೌಡರೆಡ್ಡಿ ಪರ ಮತಯಾಚನೆ ನಡೆಸಲು ಆಗಮಿಸಿದ ವೇಳೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನತಾ ಪರಿವಾರದ ನಾಯಕರು ಸಿಎಂ ಆಗಿದ್ದಾಗ ಶಿಕ್ಷರ ವರ್ಗಾವಣೆಯಿಂದ ಹಿಡಿದು ಸರ್ಕಾರಿ ಶಿಕ್ಷಕರು, ಅನುದಾನಿತ ಶಾಲೆಗಳ ಸಂಕಷ್ಟಗಳಿಗೆ ಸ್ಪಂದಿಸಿದ್ದಾರೆಂದು ರಾಮಕೃಷ್ಣ ಹೆಗಡೆ, ಎಸ್‌.ಆರ್‌.ಬೊಮ್ಮಯಿ, ದೇವೇಗೌಡ ಮತ್ತಿತರನ್ನು ಸ್ಮರಿಸಿದರು.

Tap to resize

Latest Videos

ಜೆಡಿಎಸ್‌ 3 ಸ್ಥಾನ ಗೆಲ್ಲಲಿದೆ:  ಶಿಕ್ಷಕರ ಚುನಾವಣೆಗಳಲ್ಲಿ ಜೆಡಿಎಸ್‌ ಕನಿಷ್ಠ 3 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆಯೆಂದ ಅವರು, ವಿಧಾನ ಪರಿಷತ್ತುನ ಶಿಕ್ಷಕರ ಕ್ಷೇತ್ರಗಳಲ್ಲಿ ಜೆಡಿಎಸ್‌ ಮೊದಲನಿಂದಲೂ ಕಾಂಗ್ರೆಸ್‌, ಬಿಜೆಪಿ ವಿರುದ್ದ ಸಮಬಲದ ಹೋರಾಟ ನಡೆಸಿಕೊಂಡು ಬರುತ್ತಿದೆ ಎಂದರು. ಸರ್ಕಾರ ಶಿಕ್ಷಕರ ವರ್ಗಾವಣೆಗೆ ಅನುಮತಿ ನೀಡಿದೆ. ಆದರೆ ನೀತಿ ಸಂಹಿತೆ ಇರುವಾಗ ಘೋಷಿಸಿರುವುದು ಸರಿಯಲ್ಲ. ನ.17 ರಿಂದ ಪದವಿ ಕಾಲೇಜುಗಳ ಆರಂಭಿಸುವ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದರು.

ಸುದ್ದಿಗೋಷ್ಠಿಯಲ್ಲಿ ಆಗ್ನೇಯ ಪದವೀಧರ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ತೂಪಲ್ಲಿ ಆರ್‌.ಚೌಡರೆಡ್ಡಿ, ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ, ಜೆಡಿಎಸ್‌ ಜಿಲ್ಲಾಧ್ಯಕ್ಷ ಕೆ.ಎಂ.ಮುನೇಗೌಡ, ತಾಲೂಕು ಅಧ್ಯಕ್ಷ ಕೊಳವನಹಳ್ಳಿ ಮುನಿರಾಜು, ಹಿರಿಯ ಮುಖಂಡ ಕುರುಬೂರು ಕೆ.ಸಿ.ಶಂಕರಗೌಡ, ಬಾಲಕುಂಟಹಳ್ಳಿ ಮುನಿಯಪ್ಪ, ನಗರಸಭಾ ಸದಸ್ಯ ಆರ್‌.ಮಟಮಪ್ಪ, ರವಿಕುಮಾರ್‌, ಕೆ.ಆರ್‌.ರೆಡ್ಡಿ ಮತ್ತಿತರರು ಇದ್ದರು.

click me!