ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಯುವತಿ| ವಿಜಯಪುರ, ಕಲಬುರಗಿ ಜಿಲ್ಲೆಯ ಅಫಜಲಪುರ ಮಧ್ಯದ ಭೀಮಾನದಿಗೆ ಕಟ್ಟಿದ ಸೇತುವೆ ಮೇಲೆ ನಡೆದ ಘಟನೆ| ಕಲಬುರಗಿ ಜಿಲ್ಲೆಯ ಗಾಣಗಾಪುರ ದತ್ತಾತ್ರೆಯ ದೇವಸ್ಥಾನಕ್ಕೆ ಹೊರಟಿದ್ದ ಐಶ್ವರ್ಯ ಕುಟುಂಬಸ್ಥರು| ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ|
ವಿಜಯಪುರ(ಅ.25): ಸೇತುವೆ ಮೇಲಿಂದ ಭೀಮಾ ನದಿಗೆ ಹಾರಿ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಜಯಪುರ, ಕಲಬುರಗಿ ಜಿಲ್ಲೆಯ ಅಫಜಲಪುರ ಮಧ್ಯದ ಭೀಮಾನದಿಗೆ ಕಟ್ಟಲಾದ ಸೇತುವೆಯಲ್ಲಿ ಇಂದು(ಭಾನುವಾರ) ನಡೆದಿದೆ.
ಐಶ್ವರ್ಯ ಶ್ರೀಪಾಲ್ ಕಬ್ಬಿನ(20) ಎಂಬ ಯುವತಿಯೇ ನದಿಗೆ ಹಾರಿದ ಪ್ರಾಣಬಿಟ್ಟಿದ್ದಾಳೆ. ಮೂಲತಃ ಧಾರವಾಡ ಜಿಲ್ಲೆ ನವಲಗುಂದ ಪಟ್ಟಣದ ನಿವಾಸಿಯಾದ ಐಶ್ವರ್ಯ ಕುಟುಂಬಸ್ಥರೊಂದಿಗೆ ಕಲಬುರಗಿ ಜಿಲ್ಲೆಯ ಗಾಣಗಾಪುರ ದತ್ತಾತ್ರೆಯ ದೇವಸ್ಥಾನಕ್ಕೆ ಹೊರಟಿದ್ದರು. ಹೀಗಾಗಿ ವಿಜಯಪುರ ಜಿಲ್ಲೆ ಇಂಡಿ ಪಟ್ಟಣದಲ್ಲಿದ್ದ ಅಕ್ಕನ ಮನೆಗೆ ತಾಯಿಯ ಜೊತೆಗೆ ಐಶ್ವರ್ಯ ಬಂದಿದ್ದಳು.
undefined
ವಿಜಯಪುರ: ಹಬ್ಬದ ದಿನವೇ ಭೀಮಾತೀರದಲ್ಲಿ ಡೆಡ್ಲಿ ಮರ್ಡರ್..!
ಇಂದು ಕುಟುಂಬಸ್ಥರೆಲ್ಲ ದತ್ತಾತ್ರೆಯ ದೇವಸ್ಥಾನಕ್ಕೆ ಹೊರಟಿದ್ದ ವೇಳೆ ಸೇತುವೆ ಮೇಲಿಂದ ನಾಣ್ಯ ಎಸೆಯಲು ವಾಹನ ನಿಲ್ಲಿದ್ದರು. ಈ ವೇಳೆ ಐಶ್ವರ್ಯ ಸೇತುವೆ ಮೇಲಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ವೇಳೆ ಸ್ಥಳದಲ್ಲಿದ್ದ ಯುವತಿಯ ಸಂಬಂಧಿಕರ ಆಕ್ರಂದಣ ಮುಗಿಲುಮುಟ್ಟಿತ್ತು. ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ.
ಇದನ್ನೂ ನೋಡಿ: ಚಿತ್ರದುರ್ಗ ಕಂಪ್ಯೂಟರ್ ಕ್ಲಾಸು..ಮದುವೆಯಾಗಿ 2 ವರ್ಷದ ನಂತ್ರ ಗಂಡನ ಬಿಟ್ಟು ಹೊರಟಳು!..