
ಹೊಸದುರ್ಗ (ನ.6) : ಶ್ರೇಣೀಕೃತ ಜಾತಿ ವ್ಯವಸ್ಥೆಗೆ ಬಸವಣ್ಣ ಸಮಾನತೆಯ ಚಿಕಿತ್ಸೆ ನೀಡಿದರು ಎಂದು ಕೇಂದ್ರ ಸಚಿವೆ ಶೋಭ ಕರಂದ್ಲಾಜೆ ಹೇಳಿದರು. ಸಾಣೇಹಳ್ಳಿಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ನಾಟಕೋತ್ಸವದ 4 ನೇ ದಿನದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಬಸವಣ್ಣ ಕೇವಲ ಜಾತಿಗಳನ್ನು ಒಂದು ಮಾಡಲಿಲ್ಲ .ವೈದಿಕ ಸಂಪ್ರದಾಯಗಳನ್ನು ತಳ್ಳಿ ಮಹಿಳಾ ಸಮಾನತೆಯನ್ನು ಕೊಟ್ಟರು. ಕನ್ನಡ ನಾಡಿನ ಬಸವಣ್ಣ , ನಾರಾಯಣ ಗುರುಗಳು ಕೇವಲ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿಲ್ಲ ಇಡೀ ವಿಶ್ವಕ್ಕೆ ಸಮಾನತೆಯನ್ನು ನೀಡಿದ್ದಾರೆ. ನಾಟಕ, ಕಲೆ, ಸಾಹಿತ್ಯದ ಮೂಲಕ ಬಸವಣ್ಣನ ತತ್ವವನ್ನು ಸಮಾಜಕ್ಕೆ ನೀಡುವ ಕೆಲಸವನ್ನು ಸಾಣೇಹಳ್ಳೀಯ ಮಠ ಮಾಡುತ್ತಿದೆ ಎಂದರು.
ಜಾತಿ ವ್ಯವಸ್ಥೆ ಹೋಗಲಾಡಿಸಲು ಭಾರತ ಜೋಡೋ ಯಾತ್ರೆ
ವಸತಿ ಸಚಿವ ವಿ ಸೋಮಣ್ಣ ಮಾತನಾಡಿ ರಾಜಕಾರಣ ನಿಂತ ನೀರಲ್ಲ. ಸದಾ ಚಲನಶೀಲವಾಗಿರುತ್ತದೆ. ಯಾರು ಬೇಕಾದರೂ ರಾಜಕಾರಣಿಯಾಗಬಹುದು. ಸಂಸ್ಕಾರ ಮತ್ತು ಪರಿಶುದ್ದತೆಯಿದ್ದರೆ ಬದುಕು ಸಾರ್ಥಕತೆ ಪಡೆಯುತ್ತದೆ ಎಂದರು.
ಜಲಸಂಪನ್ಮೂಲ ಸಚಿವ ಗೋವಿಂದಕಾರಜೋಳ ಮಾತನಾಡಿ ಮಹಿಳೆಯರಿಗಾಗಿ, ಸ್ತ್ರೀ ಸಮಾನತೆ ಉದ್ದೇಶದಿಂದ ಬಸವಣ್ಣ ಮನೆ ತೊರೆಯಬೇಕಾಯಿತು. ವರ್ಗ ರಹಿತ ಸಮಾಜ ನಿರ್ಮಾಣಕ್ಕೆ ಆದ್ಯತೆ ನೀಡಿದ್ದರು. ಶೋಷಣೆಯ ನಿವಾರಣೆಗಾಗಿ ಲಿಂಗಾಯಿತ ಧರ್ಮ ಕಟ್ಟಿದರು. 900 ವರ್ಷ ಕಳೆದರೂ ವರ್ಗ ರಹಿತ ಸಮಾಜ ನಿರ್ಮಾಣ ಸಾಧ್ಯವಾಗದಿರುವುದು ವಿಷಾದನೀಯ ಎಂದರು.
ಸುಪ್ರಿಂ ಕೋರ್ಚ್‌ನ ನಿವೃತ್ತ ನ್ಯಾಯಮೂರ್ತಿ ವಿ. ಗೋಪಾಲಗೌಡ ಮಾತನಾಡಿ, ಹೆಣ್ಣು ಮಕ್ಕಳಿಗೆ ಸಮಾನತೆ ನೀಡಬೇಕು ಎಂದು ಸಂವಿಧಾನದಲ್ಲಿ ಹೇಳಿದ್ದರೂ ಕಳೆದ 75 ವರ್ಷಗಳಿಂದ ಆಡಳಿತ ನಡೆಸಿದ ಸರ್ಕಾರಗಳಾಗಲೀ, ನ್ಯಾಯಾಂಗ ವ್ಯವಸ್ಥೆಯಾಗಲೀ ಸಮಾನತೆ ಕೊಡಿಸುವಲ್ಲಿ ವಿಫಲವಾಗಿದೆ. ಸಂವಿಧಾನ ಪಾಲನೆ ಮಾಡುವಲ್ಲಿ ರಾಜಕೀಯ ನಾಯಕರು ಮಾತ್ರವಲ್ಲ ನ್ಯಾಯಾಂಗವೂ ವಿಫಲವಾಗಿದೆ ಎಂದರು.
ಸಂವಿಧಾನದಲ್ಲಿ ಶಾಸನಗಳಿಗೆ ಕಮ್ಮಿಯಿಲ್ಲ. ಇನ್ನೂ ಶಾಸನಗಳನ್ನು ಮಾಡಲಾಗುತ್ತಿದೆ. ಆದರೆ ಮೂಲಭೂತ ತತ್ವಗಳನ್ನು ತಿದ್ದುಪಡಿ ಮಾಡಲಾಗಿಲ್ಲ. ಇಂದಿನ ಸಮಾಜದ ವ್ಯವಸ್ಥೆಯಲ್ಲಿ ಸಾಂಸ್ಕೃತಿಕ ಪ್ರಜಾಪ್ರಭುತ್ವವನ್ನು ತರಲು ಸಾಧ್ಯವಿಲ್ಲ ಎಂದರು.
ಪಂಡಿತಾರಾಧ್ಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಭಾಲ್ಕಿ ಹಿರೇಮಠ ಸಂಸ್ಥಾನದ ಡಾ ಬಸವಲಿಂಗಪಟ್ಟದೇವರು, ಕುಂಚಿಟಿಗ ಮಠದ ಡಾ ಶಾಂತವೀರ ಸ್ವಾಮೀಜಿ, ಭಗೀರಥ ಫೀಠದ ಪುರುಷೋತ್ತಮಾನಂದ ಪುರಿ ಸ್ವಾಮೀಜಿ ಇದ್ದರು. ಮಾಜಿ ಉಪಸಭಾಪತಿ ಡಾ. ಬಿ.ಎಲ್. ಶಂಕರ್ , ಶಾಸಕ ಸುರೇಶ್, ಶಿವಮೊಗ್ಗ ಕೃಷಿ ವಿವಿಯ ಕುಲಪತಿ ಆರ್.ಸಿ. ಜಗದೀಶ್ ಮತ್ತಿತರರು ಭಾಗವಹಿಸಿದ್ದರು. ಐಪಿಎಸ್ ಅಧಿಕಾರಿ ಡಾ. ಬೆನಕಪ್ರಸಾದ್, ಐಎಎಎಸ್ ಅಧಿಕಾರಿ ಮಹಮದ್ ಸಿದ್ದಿಕಿ ಶರೀಫ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮಕ್ಕೂ ಮುನ್ನ ಅಣ್ಣಿಗೆರೆಯ ಯಶಸ್ವಿನಿ ಯೋಗ ಸಂಸ್ಥೆಯ ಮಕ್ಕಳು ಯೋಗ ನೃತ್ಯ ಮಾಡಿದರು. ಹೊಸದುರ್ಗದ ಭರತನಾಟ್ಯ ಕಲಾವಿದೆ ನಿಸರ್ಗ ಡಾ ಸಂಜಯ್ ವಚನ ನೃತ್ಯ ಪ್ರದರ್ಶಿಸಿದರು. ಶಶಿರಾಜ್ ಕಾವೋರ ರಚನೆಯ ಹೆಚ್ ಎನ್ ಭೀಮೇಶ್ ನಿರ್ದೇಶನದ ನೆಮ್ಮದಿ ಅಪಾರ್ಚ್‌ಮೆಂಟ್ ನಾಟಕವನ್ನು ಶಿವಸಂಚಾರದ ಕಲಾವಿದರು ಅಭಿನಯಿಸುವರು.
ಜಾತಿ ವ್ಯವಸ್ಥೆ ವಿರುದ್ಧ ಹೋರಾಡಿದ್ದ ದೇವಸಹಾಯಂಗೆ ಸಂತ ಪದವಿ!
2022ನ್ನು ಸಿರಿಧಾನ್ಯಗಳÜ ವರ್ಷ ಎಂದು ಘೋಷಣೆ ಮಾಡಲಾಗಿದ್ದು . ರಾಜ್ಯದಲ್ಲಿ ಬೆಳೆಯುತ್ತಿರುವ ಸಿರಿಧಾನ್ಯಗಳನ್ನು ಹೊರದೇಶಗಳಿಗೆ ರಫ್ತು ಮಾಡುವ ವ್ಯವಸ್ಥೆಯನ್ನು ಶೀಘ್ರದಲ್ಲಿಯೇ ಜಾರಿಗೆ ತರಲಾಗುವುದು
- ಶೋಭಾಕರಂದ್ಲಾಜೆ, ಕೇಂದ್ರ ಕೃಷಿ ಸಚಿವೆ