ಪಂಚಮಸಾಲಿ 2 ಎ ಮೀಸಲಾತಿ: ಅಧಿವೇಶನ ವೇಳೆ ವಿಧಾನಸೌಧ ಮುತ್ತಿಗೆಗೆ ನಿರ್ಧಾರ

By Suvarna NewsFirst Published Jan 12, 2021, 1:28 PM IST
Highlights

ಸಿಎಂಗೆ ಎರಡು ದಿನದ ಗಡುವು | ಬೆಂಗಳೂರಿಗೆ ಪಾದಯಾತ್ರೆ

ಬಾಗಲಕೋಟೆ(ಜ.12): ಎರಡು ದಿನದಲ್ಲಿ ಸಿಎಂ ಯಡಿಯೂರಪ್ಪ ತಮ್ಮ ನಿಲುವು ತಿಳಿಸಿ ಸ್ಪಂದಿಸಿದಿದ್ದರೆ ಪಾದಯಾತ್ರೆ ನಡೆಸುವುದಾಗಿ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ. ಪಂಚಮಸಾಲಿ 2 ಎ ಮೀಸಲಾತಿ ಪಾದಯಾತ್ರೆ ಹೋರಾಟ ವಿಚಾರವಾಗಿ ಬಾಗಲಕೋಟೆಯಲ್ಲಿ ಮಾತನಾಡಿದ್ದಾರೆ.

ಸರ್ಕಾರ ಸ್ಪಂದಿಸಿದರೆ ಅಭಿನಂದಿಸಿ ವಿಜಯೋತ್ಸವ ಮಾಡುತ್ತೇವೆ. ಸ್ಪಂದನೆ ಇರದಿದ್ದರೆ ಕೂಡಲಸಂಗಮದಿಂದ ಜ. 14ರಿಂದ ಬೃಹತ್ ಪಾದಯಾತ್ರೆ ಮಾಡುತ್ತೇವೆ. ಕೂಡಲಸಂಗಮದಿಂದ ಇಲಕಲ್, ಕೊಪ್ಪಳ, ಹಗರಿಬೊಮ್ಮನಹಳ್ಳಿ, ದಾವಣಗೆರೆ, ಚಿತ್ರದುರ್ಗ, ತುಮಕೂರು ಮಾರ್ಗವಾಗಿ ಬೆಂಗಳೂರಿಗೆ ಪಾದಯಾತ್ರೆ ನಡೆಯಲಿದೆ.

ಪಂಚಮಸಾಲಿ ಮೀಸಲಾತಿ: 'ಸಿಎಂಗೆ ನೀಡಿರುವ ಗಡುವು ಮುಗಿದಿದೆ, ಏನಾದರೂ ಆದರೆ ಸರ್ಕಾರ ಹೊಣೆ'

ಅಧಿವೇಶನ ನಡೆಯೋ ವೇಳೆ ಬೆಂಗಳೂರು ತಲುಪಿ ವಿಧಾನಸೌಧ ಮುತ್ತಿಗೆಗೆ ನಿರ್ಧಾರ ಮಾಡಲಾಗಿದೆ. ಬಳಿಕ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸಲು ಸಹ ನಿರ್ಧರಿಸಲಾಗಿದೆ ಎಂದಿದ್ದಾರೆ.

click me!