ಹಿಂದೂ ಧರ್ಮದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದವರಿಗೆ ಕಾಂಗ್ರೆಸ್ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡುತ್ತಿದೆ. ಪ್ರಶಸ್ತಿಯ ಸಲುವಾಗಿ ಕೆಲವು ಮಠಾಧೀಶರು ಇಂಥ ಹಿಂದೂ ವಿರೋಧಿ ಹೇಳಿಕೆ ನೀಡುತ್ತಿದ್ದಾರೆ. ಇದರಿಂದ ಅವರ ಮಠಕ್ಕೆ ಕೋಟ್ಯಂತರ ರು. ಅನುದಾನ ಸಿಗುತ್ತದೆ ಎಂದರಲ್ಲದೇ ಅವರಿಗೆ ಮುಂದಿನ ಸಲ ರಾಜ್ಯೋತ್ಸವ ಪ್ರಶಸ್ತಿ ನೀಡಲಿ: ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್
ಚಾಮರಾಜನಗರ(ನ.07): ರಾಜ್ಯೋತ್ಸವ ಪ್ರಶಸ್ತಿ ಸಲುವಾಗಿ ಕೆಲವು ಮಠಾಧೀಶರು ಹಿಂದೂ ವಿರೋಧಿ ಹೇಳಿಕೆ ನೀಡುತ್ತಿದ್ದಾರೆ ಎಂದು ಕೇಂದ್ರ ಮಾಜಿ ಸಚಿವ ಹಾಗೂ ಹಾಲಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದರು.
ಗಣಪತಿ ನಮ್ಮ ಸಂಸ್ಕೃತಿಯಲ್ಲ ಎಂಬ ಸಾಣೇಹಳ್ಳಿ ಶ್ರೀ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಪಾಪ ಆ ಸ್ವಾಮೀಜಿ ನಕ್ಸಲೈಟ್ ಆಗಬೇಕಿತ್ತು, ಕಮ್ಯೂನಿಷ್ಟ್ ಆಗಿದ್ದಾರೆ. ದುರ್ದೈವ ಎಂದರೆ ಅವರು ಕಾವಿ ಹಾಕಿದ್ದಾರೆ ಎಂದು ಕಿಡಿಕಾರಿದರು.
undefined
ಯತ್ನಾಳ ನಾನು ಜಗಳವಾಡಿಲ್ಲ, ಚೆನ್ನಾಗಿದ್ದೇವೆ: ಸಂಸದ ರಮೇಶ ಜಿಗಜಿಣಗಿ
ಹಿಂದೂ ಧರ್ಮದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದವರಿಗೆ ಕಾಂಗ್ರೆಸ್ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡುತ್ತಿದೆ. ಪ್ರಶಸ್ತಿಯ ಸಲುವಾಗಿ ಕೆಲವು ಮಠಾಧೀಶರು ಇಂಥ ಹಿಂದೂ ವಿರೋಧಿ ಹೇಳಿಕೆ ನೀಡುತ್ತಿದ್ದಾರೆ. ಇದರಿಂದ ಅವರ ಮಠಕ್ಕೆ ಕೋಟ್ಯಂತರ ರು. ಅನುದಾನ ಸಿಗುತ್ತದೆ ಎಂದರಲ್ಲದೇ ಅವರಿಗೆ ಮುಂದಿನ ಸಲ ರಾಜ್ಯೋತ್ಸವ ಪ್ರಶಸ್ತಿ ನೀಡಲಿ ಎಂದು ವ್ಯಂಗ್ಯವಾಡಿದರು.