ಬೆಂಗಳೂರಿಗರೆ, ಬಾರ್-ಪಬ್‌ಗಳಿಂದ ತೊಂದರೆಯಾಗುತ್ತಿದೆಯೇ?

By Web DeskFirst Published Nov 21, 2019, 11:54 PM IST
Highlights

ಬಾರ್ ಮತ್ತು ಪಬ್ ಗಳಿಂದ ಶಬ್ದ ಮಾಲಿನ್ಯ ಆಗುತ್ಗತಿದೆ/ ಇಂದಿರಾ ನಗರದ ನಿವಾಸಿಗಳು ಸಲ್ಲಿಸಿದ್ದ ಪಿಐಎಲ್ ವಿಚಾರಣೆ/ ಅಧಿಸೂಚನೆ ವಿವರ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ

ಬೆಂಗಳೂರು[ನ. 21]  ಪಬ್ ಮತ್ತು ಬಾರ್ ಗಳಿಂದ ಶಬ್ದ ಮಾಲಿನ್ಯ ಆಗುತ್ತಿದೆ ಎಂದು  ಇಂದಿರಾನಗರ ನಿವಾಸಿಗಳು ಸಲ್ಲಿಸಿದ್ದ  ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಗುರುವಾರ ನಡೆಯಿತು.

ಲೈಸೆನ್ಸ್ ಪಡೆಯದ ಪಬ್, ಬಾರ್ ಗಳ ವಿರುದ್ಧ ಕ್ರಮಕ್ಕೆ ನ್ಯಾಯಾಲಯ ಸೂಚನೆ ನೀಡಿತು.  ಕ್ರಮ ಕೈಗೊಂಡ ಬಗ್ಗೆ 2 ವಾರದಲ್ಲಿ ವರದಿ ನೀಡಬೇಕು ಎಂದು ಸಂಬಂಧಿಸಿದ ಇಲಾಖೆಗೆ ನಿರ್ದೇಶನ ನೀಡಿತು.

ಇಂದಿರಾನಗರ ಪಬ್ ನಲ್ಲಿ ಅಶ್ಲೀಲ ನೃತ್ಯಕ್ಕೆ ಒತ್ತಾಯ

ಶಬ್ದಮಾಲಿನ್ಯ ಮಾಪಕ ಗಳನ್ನು ಖರೀದಿಸದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಾಲಯ  ಅಗತ್ಯ ಮಾಪಕಗಳ ಖರೀದಿಗೆ ಕ್ರಮಕ್ಕೆ ಸೂಚನೆ  ನೀಡಬೇಕು ಎಂದು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತು.

ದಿಢೀರ್ ತಪಾಸಣೆಗಳನ್ನು ಮುಂದುವರಿಸಬೇಕು ಎಂದು ಪೊಲೀಸರಿಗೆ ತಿಳಿಸಿತು.  ನಗರಗಳಲ್ಲಿ ನಿಶ್ಯಬ್ದ ವಲಯ ಗುರುತಿಸಿರುವ ಬಗ್ಗೆ ಮಾಹಿತಿ ನೀಡಬೇಕು ಎಂದು ತಿಳಿಸಿ  ಅಧಿಸೂಚನೆ ವಿವರ ಸಲ್ಲಿಸಲು ನಿರ್ದೇಶಿಸಿ ವಿಚಾರಣೆ ಮುಂದೂಡಿಕೆ ಮಾಡಿತು.

click me!