ಚುನಾವಣೆಯ ಹಿನ್ನೆಲೆಯಲ್ಲಿ ತಾಲೂಕು ಪಂಚಾಯ್ತಿಯ ಕಾರ್ಯನಿರ್ವಹಣಾಧಿಕಾರಿ ಸತೀಶ್ ಕುಮಾರ್ ರವರನ್ನು ಚುನಾವಣಾ ಆಯೋಗ ಬೇರೆಡೆಗೆ ವರ್ಗಾವಣೆ ಮಾಡಿದರೂ ಸಹ ಇಓ ರವರು ತಮ್ಮ ಸ್ಥಾನವನ್ನು ತೆರವು ಮಾಡದೇ ಇಲ್ಲೇ ಉಳಿದುಕೊಂಡಿದ್ದಾರೆ ಎಂದು ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ದೂರಿದ್ದಾರೆ.
ತುರುವೇಕೆರೆ : ಚುನಾವಣೆಯ ಹಿನ್ನೆಲೆಯಲ್ಲಿ ತಾಲೂಕು ಪಂಚಾಯ್ತಿಯ ಕಾರ್ಯನಿರ್ವಹಣಾಧಿಕಾರಿ ಸತೀಶ್ ಕುಮಾರ್ ರವರನ್ನು ಚುನಾವಣಾ ಆಯೋಗ ಬೇರೆಡೆಗೆ ವರ್ಗಾವಣೆ ಮಾಡಿದರೂ ಸಹ ಇಓ ರವರು ತಮ್ಮ ಸ್ಥಾನವನ್ನು ತೆರವು ಮಾಡದೇ ಇಲ್ಲೇ ಉಳಿದುಕೊಂಡಿದ್ದಾರೆ ಎಂದು ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ದೂರಿದ್ದಾರೆ.
ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಇಓ ರವರು ಇನ್ನೂ ಕೆಲವು ದಿನಗಳ ಕಾಲ ಅಧಿಕಾರದಲ್ಲಿ ಉಳಿದುಕೊಳ್ಳಲು ಹಾಲಿ ಶಾಸಕ ಮಸಾಲಾ ಜಯರಾಮ್ ರವರ ಕೃಪಾಶೀರ್ವಾದವಿದೆ. ಶಾಸಕರು ತಮ್ಮ ಹಲವಾರು ಅಕ್ರಮ ವ್ಯವಹಾರಗಳಿಗೆ ಸಹಕಾರ ಪಡೆಯುವ ಸಲುವಾಗಿ ಇಓ ರವರನ್ನು ಇಲ್ಲೇ ಉಳಿಸಿಕೊಳ್ಳಲು ಮುಂದಾಗಿದ್ದಾರೆಂದು ದೂರಿದರು.
ಇಓ ಸತೀಶ್ ಕುಮಾರ್ ರ ಪರವಾಗಿ ಬ್ಯಾಂಟಿಂಗ್ ಮಾಡುತ್ತಿದ್ದಾರೆ. ಗ್ರಾಮಪಂಚಾಯ್ತಿ ಮಟ್ಟದಲ್ಲಿ ಕಾರ್ಯದರ್ಶಿ ಮತ್ತು ಅಲ್ಲಿನ ಸಿಬ್ಬಂದಿಗಳಿಗೆ ಸಂದೇಶ ರವಾನಿಸಿರುವ ಇಓ ಸತೀಶ್ ಕುಮಾರ್ ರವರು ಹಾಲಿ ಶಾಸಕ ಮಸಾಲಾ ಜಯರಾಮ್ ರವರ ಪರ ಕೆಲಸ ಮಾಡಲು ಸೂಚಿಸಿದ್ದಾರೆಂದು ಆರೋಪಿಸಿದರು.
ಶಾಸಕರಿಗೆ ಮನೆಗಳನ್ನು ನೀಡಲು ಯಾವುದೇ ಅಧಿಕಾರ ಇಲ್ಲದಿದ್ದರೂ ಸಹ ಶಾಸಕರು ತಾವು 3300 ಕ್ಕೂ ಹೆಚ್ಚು ಮನೆಗಳನ್ನು ಮಂಜೂರು ಮಾಡಿಸಿಕೊಂಡು ಬಂದಿರುವುದಾಗಿಯೂ, ಅವುಗಳನ್ನು ತಾವೇ ನೀಡುತ್ತಿರುವುದು ಎಂದು ಸಾರ್ವಜನಿಕರಿಗೆ ಇಓ ಮತ್ತು ಪಂಚಾಯ್ತಿ ಸಿಬ್ಬಂದಿಗಳ ಮೂಲಕ ತಪ್ಪು ಸಂದೇಶವನ್ನು ನೀಡುತ್ತಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಇಓ ರವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದೂ ಆಗ್ರಹಿಸಿದರು.
ಇಓ ಸತೀಶ್ ಕುಮಾರ್‌ರವರನ್ನು ಚುನಾವಣಾ ಆಯೋಗ ಬೇರೆಡೆಗೆ ವರ್ಗಾಯಿಸಿದ್ದರೂ ಸಹ ಸತೀಶ್ ಕುಮಾರ್ ರವರು ಗ್ರಾಮ ಪಂಚಾಯ್ತಿ ಅಧಿಕಾರಿಗಳ ಕಡೆಯಿಂದ ಬರಬೇಕಿರುವ ಹಣ ವಸೂಲು ಮಾಡಿಕೊಳ್ಳಲು ಇನ್ನೂ ಅಧಿಕಾರದಲ್ಲಿ ಮುಂದುವರೆದಿದ್ದಾರೆ. ಚುನಾವಣಾ ಆಯೋಗದ ಆದೇಶವನ್ನು ಧಿಕ್ಕರಿಸಿ ಅಧಿಕಾರದಲ್ಲೇ ಮುಂದುವರೆದಿರುವ ಇಓ ಸತೀಶ್ ಕುಮಾರ್ ರವರ ವಿರುದ್ಧ ಜಿಲ್ಲಾಧಿಕಾರಿಗಳು ಹಾಗೂ ಚುನಾವಣಾ ಆಯೋಗಕ್ಕೂ ದೂರು ಸಲ್ಲಿಸಿರುವುದಾಗಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ವಕ್ತಾರ ವೆಂಕಟಾಪುರ ಯೋಗೀಶ್, ಮುಖಂಡರಾದ ಹೆಡಿಗೇಹಳ್ಳಿ ವಿಶ್ವನಾಥ್, ರಾಮಡಿಹಳ್ಳಿ ದೇವರಾಜು, ಎಪಿಎಂಸಿ ಮಾಜಿ ನಿರ್ದೇಶಕ ರೇಣುಕಯ್ಯ, ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಬಿ.ಎಸ್.ದೇವರಾಜ್, ಮಾದಿಹಳ್ಳಿ ಕಾಂತರಾಜು ಸೇರಿದಂತೆ ಹಲವರು ಇದ್ದರು.
ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದ ಕೃಷ್ಣಪ್ಪ
ಪಿರಿಯಾಪಟ್ಟಣ : ತಾಪಂ ಮಾಜಿ ಅಧ್ಯಕ್ಷ ಶಾನುಭೋಗನಹಳ್ಳಿ ಗ್ರಾಮದ ಕೃಷ್ಣಪ್ಪ ಅವರು ಕಾಂಗ್ರೆಸ್ ತೊರೆದು ಶಾಸಕ ಕೆ. ಮಹದೇವ್ ಅವರ ಸಮ್ಮುಖದಲ್ಲಿ ಜೆಡಿಎಸ್ ಸೇರ್ಪಡೆಯಾದರು. ಶಾನುಭೋಗನಹಳ್ಳಿ ಗ್ರಾಮದ ತಮ್ಮ ನಿವಾಸದಲ್ಲಿ ಪಕ್ಷ ಸೇರ್ಪಡೆಗೊಂಡ ಬಳಿಕ ಕೃಷ್ಣಪ್ಪ ಅವರು ಮಾತನಾಡಿ, ಜನಪ್ರತಿನಿಧಿಗಳಾದವರಿಗೆ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸುವ ಮನಸ್ಸು ಇರಬೇಕು, ಈ ನಿಟ್ಟಿನಲ್ಲಿ ಮೊದಲ ಬಾರಿಗೆ ಶಾಸಕರಾದ ಕೆ. ಮಹದೇವ್ ಅವರು ತಾಲೂಕಿನ ಯಾವುದೇ ಪ್ರದೇಶದ ಜನರು ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಅವರನ್ನು ಭೇಟಿ ಮಾಡಿದ ಸಂದರ್ಭ ಅವರ ಸಮಸ್ಯೆ ಆಲಿಸಿ ಪರಿಹಾರ ಒದಗಿಸಿಕೊಡುವ ಅವರ ಪ್ರಾಮಾಣಿಕ ಕರ್ತವ್ಯವನ್ನು ಮೆಚ್ಚಿ ಪಕ್ಷ ಸೇರ್ಪಡೆಯಾಗುತ್ತಿದ್ದೇನೆ ಎಂದರು.
ಕೆ. ಮಹದೇವ್ ಮಾತನಾಡಿ, ಅಭಿವೃದ್ಧಿ ಕಾರ್ಯಗಳು ಹಾಗೂ ಪಕ್ಷದ ತತ್ವ ಸಿದ್ಧಾಂತ ಮೆಚ್ಚಿ ಯಾರೇ ಜೆಡಿಎಸ್ ಸೇರಿದರು ಅವರನ್ನು ನಮ್ಮ ಕಾರ್ಯಕರ್ತರಂತೆ ಸಮನಾಗಿ ಕಂಡು ಪಕ್ಷ ಸಂಘಟನೆ ಹಾಗೂ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲಾಗುವುದು ಎಂದು ತಿಳಿಸಿದರು.
ಜೆಡಿಎಸ್ ತಾಲೂಕು ಅಧ್ಯಕ್ಷ ಅಣ್ಣಯ್ಯಶೆಟ್ಟಿ, ದೊಡ್ಡಕಮ್ಮರಹಳ್ಳಿ ಗ್ರಾಪಂ ಅಧ್ಯಕ್ಷ ಚಂದ್ರೇಗೌಡ, ಉಪಾಧ್ಯಕ್ಷೆ ನೇತ್ರಾವತಿ, ಸದಸ್ಯರಾದ ಪುಟ್ಟಸ್ವಾಮಿಗೌಡ, ಹರೀಶ್, ಪಾರ್ವತಿ, ಜ್ಯೋತಿ, ಪುಟ್ಟಮ್ಮ, ಯಜಮಾನರಾದ ಮಲ್ಲಿಕಾರ್ಜುನ್ ಇದ್ದರು