ಸಿದ್ದರಾಮಯ್ಯನವರು ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುವ ವಿಷಯ ಹೈಕಮಾಂಡ್‌ಗೆ ಬಿಟ್ಟಿದ್ದು, ಸೆಂಟ್ರಲ… ಎಲೆಕ್ಷನ್ ಕಮಿಟಿಯಲ್ಲಿ ತೀರ್ಮಾನವಾಗಲಿದೆ ಎಂದು ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ್ ತಿಳಿಸಿದರು.
ತುಮಕೂರು : ಸಿದ್ದರಾಮಯ್ಯನವರು ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುವ ವಿಷಯ ಹೈಕಮಾಂಡ್‌ಗೆ ಬಿಟ್ಟಿದ್ದು, ಸೆಂಟ್ರಲ… ಎಲೆಕ್ಷನ್ ಕಮಿಟಿಯಲ್ಲಿ ತೀರ್ಮಾನವಾಗಲಿದೆ ಎಂದು ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಟಿಕೆಚ್ ಕೊಡುವುದದರಲ್ಲಿ ಈ ಕಮಿಟಿಯೆ ಫೈನಲ…. ಒಂದು ವೇಳೆ ಸಿದ್ದರಾಮಯ್ಯ ಅವರಿಗೆ ಅನುಮತಿ ಕೊಟ್ಟರೆ, ಎರಡು ಕಡೆ ಸ್ಪರ್ಧೆ ಮಾಡುತ್ತಾರೆ. ಆ ರೀತಿ ಎರಡು ಕಡೆ ಸ್ಪರ್ಧೆ ಮಾಡೋ ಅನಿವಾರ್ಯ ಪರಿಸ್ಥಿತಿ ನಮಗೆ ಯಾರಿಗೂ ಬಂದಿಲ್ಲ. ಎರಡು ಕಡೆ ಸ್ಪರ್ಧೆ ಮಾಡಬೇಕು ಎಂಬ ಸನ್ನಿವೇಶ ನನಾಗಲಿ ಡಿ.ಕೆ. ಶಿವಕುಮಾರ್ ಅವರಿಗಾಗಲೀ ಬಂದಿಲ್ಲ. ಹಾಗಾಗಿ ನಾವು ಎರಡು ಕಡೆ ಟಿಕೆಚ್ ಕೊಡಿ ಅಂತ ಕೇಳಿಕೊಂಡಿಲ್ಲ.
undefined
ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗಿ ಕೆಲಸ ಮಾಡಿದವರು. ರಾಜ್ಯ ನಾಯಕ ಅವರಿಗೆ ಯಾವುದೇ ರೀತಿ ತೊಂದರೆ ಆಗಬಾರದು. ಜನರು ಕೂಡಾ ನೀವು ಬಂದು ಸ್ಪರ್ಧೆ ಮಾಡಿ ಅಂತ ಕೇಳಿ ಕೊಳ್ಳುತ್ತಿದ್ದಾರೆ. ಸಿದ್ದರಾಮಯ್ಯ ಕೂಡಾ ಕೋಲಾರದ ಜನರ ಜೊತೆ ಕಮಿಟ್ಮೆಂಚ್ ಮಾಡಿಕೊಂಡು ಬಂದಿದ್ದಾರೆ. ಹಾಗಾಗಿ ಎರಡು ಕಡæ ಸ್ಪರ್ಧೆ ಮಾಡುವ ಸನ್ನಿವೇಶ ಎದುರಾಗಿದೆ. ಇಲ್ಲದಿದ್ದರೆ ಅವರಿಗೂ ಕೂಡಾ ಎರಡು ಕಡೆ ಸ್ಪರ್ಧೆ ಮಾಡೋ ಅಗತ್ಯತೆ ಇರಲಿಲ್ಲ ಎಂದರು.
ಸಿದ್ದರಾಮಯ್ಯನವರು ವರುಣಾದಲ್ಲಿ ನಿಂತರೂ ಗೆಲ್ಲುತ್ತಾರೆ. ಎಲ್ಲೇ ನಿಂತರೂ ಗೆಲ್ಲುತ್ತಾರೆ. ಅವರಿಗೆ ಸೋಲುವ ಭೀತಿ ಕಂಡರೆ ನಾವೆಲ್ಲಾ ಹೆದರಿಕೊಳ್ಳಬೇಕಾಗುತ್ತದೆ. ಸೋಲೋ ಭೀತಿಯಿಂದ ಅವರು ಎರಡು ಕಡೆ ನಿಲ್ಲುತ್ತಿಲ್ಲ. ಜನರ ಅಪೇಕ್ಷೆ ಮೇರೆಗೆ ನಿಲ್ಲುತ್ತಿದ್ದಾರೆ. ಕೋಲಾರದಲ್ಲಿ ಸ್ಪರ್ಧೆ ಮಾಡಿದರೆ ಸುತ್ತಮುತ್ತಲಿನ ಕ್ಷೇತ್ರಗಳಿಗೂ ಅನುಕೂಲ ಆಗುತ್ತದೆ ಎಂದರು.
ಮೊದಲು ಪಕ್ಷ ಅಧಿಕಾರಕ್ಕೆ ಬರಬೇಕು:
ಸಿಎಂ ರೇಸ್ ನಲ್ಲಿರುವವರಿಗೆ ಸ್ವಪಕ್ಷೀಯರಿಂದಲೇ ಒಳ ಏಟು ಬೀಳುತ್ತಿದೆಯಲ್ಲವೇ ಎಂಬ ಪಶ್ನೆಗೆ, ಆ ರೀತಿಯಾಗಿ ನನಗೆಲ್ಲು ಕಾಣುತ್ತಿಲ್ಲ. ಇದೆಲ್ಲಾ ಕೇವಲ ಸೃಷ್ಟಿ. ಒದೊಂದು ಸಲ ನಾವೆಲ್ಲಾ ಸೇರಿ ಕ್ರಿಯೇಟ್ ಮಾಡಿಕೊಂಡು ಬಿಡುತ್ತೇವೆ. ಬಹುಮತ ಬಂದ ಮೇಲೆ ಸಿಎಂ ವಿಷಯ ಇದೆಲ್ಲಾ ತಿರ್ಮಾನ ಆಗುತ್ತದೆ. ಮೊದಲನೇ ಹಂತದಲ್ಲಿ ನಾವು ಪಕ್ಷವನ್ನ ಅಧಿಕಾರಕ್ಕೆ ತರುವ ಕೆಲಸ ಮಾಡ್ಬೇಕು. ಮಿಕ್ಕಿದೆಲ್ಲಾ ಹೈಕಮಾಂಡ್ ತಿರ್ಮಾನಕ್ಕೆ ಬಿಟ್ಟಿದ್ದು ಎಂದರು.
ಹಣ ನೀಡದೇ ಮೋದಿ ದ್ರೋಹ
ಬೆಂಗಳೂರು (ಏ.03): ‘ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಹಣ ಬಿಡುಗಡೆ ಮಾಡದೆ ರಾಜ್ಯದ ಜನತೆಗೆ ದ್ರೋಹ ಮಾಡಿದ್ದಾರೆ. 2022-23ರ ಬಜೆಟ್ ಅನುಷ್ಠಾನಕ್ಕೆ ಇದ್ದ ಅವಧಿ ಮಾ.31ಕ್ಕೆ ಅಂತ್ಯವಾಗಿದೆ. ಕೇಂದ್ರದಿಂದ ಬರಬೇಕಿದ್ದ 47,557 ಕೋಟಿ ರು.ಗಳಲ್ಲಿ ಬಂದಿರುವುದು 23,735 ಕೋಟಿ ರು. ಮಾತ್ರ. ರಾಜ್ಯಕ್ಕೆ ಮಾಡಿರುವ ದ್ರೋಹಕ್ಕೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ನರೇಂದ್ರ ಮೋದಿ ಹಾಗೂ ಅಮಿತ್ ಶಾ ಚುನಾವಣೆ ಹಿನ್ನೆಲೆಯಲ್ಲಿ ವಾರಕ್ಕೆ ಎರಡು ಬಾರಿ ರಾಜ್ಯಕ್ಕೆ ಬರುತ್ತಿದ್ದಾರೆ.
ಆದರೆ, ರಾಜ್ಯಕ್ಕೆ ಕೊಡಬೇಕಿರುವ ಅನುದಾನ ಕೊಟ್ಟಿರುವುದು ಶೇ.49.9ರಷ್ಟು ಮಾತ್ರ. 4.75 ಲಕ್ಷ ಕೋಟಿ ರು.ಗೂ ಹೆಚ್ಚು ತೆರಿಗೆ ಹಾಗೂ ಸುಂಕ ಕಟ್ಟುವ ರಾಜ್ಯದ ಜನತೆ ನಿಮ್ಮ ಅವಮಾನ, ದ್ರೋಹಗಳನ್ನು ಯಾಕೆ ಸಹಿಸಿಕೊಳ್ಳಬೇಕು ಎಂದು ಪ್ರಶ್ನಿಸಿದ್ದಾರೆ. ಮನಮೋಹನ್ ಸಿಂಗ್ ಅವರಿದ್ದಾಗ ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಶೇ.75ರಷ್ಟು ಅನುದಾನ ನೀಡುತ್ತಿದ್ದರು. ರಾಜ್ಯ ಸರ್ಕಾರ ಶೇ.25ರಷ್ಟು ನೀಡುತ್ತಿತ್ತು. ಇದೀಗ ರಾಜ್ಯ ಸರ್ಕಾರ ಶೇ.55 ಹಾಗೂ ಕೇಂದ್ರ ಶೇ.45ರಷ್ಟು ಕೊಡುವಂತಾಗಿದೆ. ರಾಜ್ಯದ ಜನರ ದುಡ್ಡಿನಲ್ಲಿ ಮೋದಿ ಪ್ರಚಾರ ಪಡೆಯುವಂತಾಗಿದೆ. ಇದಕ್ಕಿಂತ ಮೋಸ ಇದೆಯೇ? ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಹೆಚ್ಚಿನ ಲೀಡ್ ನೀಡಿ ಗೆಲ್ಲಿಸುವ ಹೊಣೆ ನಿಮ್ಮದು: ಬಾಲಚಂದ್ರ ಜಾರಕಿಹೊಳಿ
ಪರಿಶಿಷ್ಟ ಜಾತಿ, ಪಂಗಡದ ಜನರ ಕಲ್ಯಾಣದ ಬಗ್ಗೆ ಪುಟಗಟ್ಟಲೆ ಸುಳ್ಳು ಜಾಹಿರಾತು ನೀಡಿ ವಂಚಿಸುತ್ತಿದ್ದಾರೆ. ಹಿಂದುಳಿದ ವರ್ಗಗಳ ಇಲಾಖೆ ವತಿಯಿಂದ 19.25 ಕೋಟಿ ರು. ಬಿಡುಗಡೆ ಮಾಡುವುದಾಗಿ ಮೋದಿ ಸರ್ಕಾರ ಹೇಳಿತ್ತು. ಆದರೆ ಬಿಡುಗಡೆ ಮಾಡಿದ್ದು ಮಾತ್ರ 9.38 ಕೋಟಿ ರುಪಾಯಿ. ಆರೋಗ್ಯ ಇಲಾಖೆಗೆ 2169 ಕೋಟಿ ರು. ಬದಲಿಗೆ 699 ಕೋಟಿ ರು., ಅಲ್ಪಸಂಖ್ಯಾತ ಇಲಾಖೆಗೆ 300 ಕೋಟಿ ರು. ಬದಲಿಗೆ 75 ಕೋಟಿ ರು., ಗ್ರಾಮೀಣಾಭಿವೃದ್ಧಿ ಇಲಾಖೆಗೆ 9,217 ಕೋಟಿ ರು. ಬದಲಿಗೆ 4,709 ಕೋಟಿ ರು. ಮಾತ್ರ ಅನುದಾನ ನೀಡಲಾಗಿದೆ. ಈ ಮೂಲಕ ಎಲ್ಲಾ ಇಲಾಖೆಗಳಿಗೂ ದ್ರೋಹ ಮಾಡಿದ್ದಾರೆ ಎಂದು ದೂರಿದ್ದಾರೆ.
ಬೆಳಗಾವಿ ಜಿಲ್ಲೆಯ 10 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ನಿಶ್ಚಿತ: ಸತೀಶ್ ಜಾರಕಿಹೊಳಿ