ಬನ್ನೇರುಘಟ್ಟ ಉದ್ಯಾನವನ: ಟಿಕೆಟ್‌ ದರ ಏರಿಕೆ, ಆಗಸ್ಟ್ 1ರಿಂದಲೇ ಜಾರಿಗೆ

Published : Jul 12, 2025, 02:14 PM IST
Bannerghatta

ಸಾರಾಂಶ

ಬನ್ನೇರುಘಟ್ಟ ಜೈವಿಕ ಉದ್ಯಾನವನದ ಪ್ರವೇಶ ಶುಲ್ಕ ಆಗಸ್ಟ್ 1 ರಿಂದ ಏರಿಕೆಯಾಗಲಿದೆ. ವಯಸ್ಕರು, ಮಕ್ಕಳು ಮತ್ತು ಹಿರಿಯ ನಾಗರಿಕರಿಗೆ ಪ್ರವೇಶ ಶುಲ್ಕ ಹೆಚ್ಚಳವಾಗಲಿದ್ದು, ಸಫಾರಿ ಪ್ಯಾಕೇಜ್‌ಗಳ ದರಗಳು ಸಹ ಏರಿಕೆಯಾಗಿವೆ. ನಿರ್ವಹಣಾ ವೆಚ್ಚ ಹೆಚ್ಚಳದಿಂದಾಗಿ ಈ ಬದಲಾವಣೆ ಅನಿವಾರ್ಯವಾಗಿದೆ.

ಬೆಂಗಳೂರು: ಹೊರವಲಯದ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ಆಗಸ್ಟ್ 1ರಿಂದ ಟಿಕೆಟ್ ದರ ಏರಿಕೆಯ ಬಿಸಿ ತಟ್ಟಲಿದೆ. ಕಳೆದ ಐದು ವರ್ಷಗಳಿಂದ ದರ ಏರಿಕೆ ಆಗದಿರುವ ಹಿನ್ನೆಲೆಯಲ್ಲಿ, ಸರ್ಕಾರ ಇದೀಗ ಶೇಕಡಾ 20ರಷ್ಟು ಟಿಕೆಟ್ ದರ ಹೆಚ್ಚಳಕ್ಕೆ ಒಪ್ಪಿಗೆ ನೀಡಿದೆ. ಬನ್ನೇರುಘಟ್ಟ ಜೈವಿಕ ಉದ್ಯಾನವನದ ಕಾರ್ಯನಿರ್ವಾಹಕ ನಿರ್ದೇಶಕ ಸೂರ್ಯ ಸೇನ್ ನೀಡಿದ ಮಾಹಿತಿ ಪ್ರಕಾರ, ನೂತನ ದರಗಳು ಹೀಗಿವೆ:

  • ವಯಸ್ಕರಿಗೆ ಟಿಕೆಟ್ ದರ ಈಗಿನ ₹100ರಿಂದ ₹120ಕ್ಕೆ ಏರಿಕೆ
  • ಮಕ್ಕಳಿಗೆ ಟಿಕೆಟ್ ದರ ₹50 ರಿಂದ ₹60ಕ್ಕೆ ಏರಿಕೆ
  • ಹಿರಿಯ ನಾಗರಿಕರಿಗೆ ಟಿಕೆಟ್ ದರ ₹60 ರಿಂದ ₹70ಕ್ಕೆ ಏರಿಕೆ

ಇಷ್ಟೇ ಅಲ್ಲದೇ, ಸಫಾರಿ ಕಾಂಬೋ ಪ್ಯಾಕ್ ದರದಲ್ಲೂ ಹೆಚ್ಚಳ ಮಾಡಲಾಗಿದೆ. ವಾರದ ದಿನಗಳಲ್ಲಿ ಈಗಿನ ₹350ರ ದರವನ್ನು ₹370ಕ್ಕೆ, ಹಾಗೂ ವಾರಾಂತ್ಯದಲ್ಲಿ ₹400ರ ದರವನ್ನು ₹420ಕ್ಕೆ ಏರಿಸಲಾಗಿದೆ.

ಪ್ರಾಣಿ ಆಹಾರ, ನಿರ್ವಹಣೆ, ಮತ್ತು ಸಿಬ್ಬಂದಿಯ ವೇತನದಲ್ಲಿ ಹೆಚ್ಚಳವಾದ ಕಾರಣದಿಂದಾಗಿ ದರ ಏರಿಕೆ ಅಗತ್ಯವಾಯಿತು. ಬನ್ನೇರುಘಟ್ಟ ಜೈವಿಕ ಉದ್ಯಾನವನವು ಸ್ವಾಯತ್ತ ಸಂಸ್ಥೆಯಾಗಿದ್ದು, ಪ್ರವಾಸಿಗರಿಂದ ಬರುವ ಟಿಕೆಟ್ ಹಣವೇ ಇದರ ಪ್ರಮುಖ ಆದಾಯ ಮೂಲವಾಗಿದೆ. ಇದರಂತೆ, ಮೃಗಾಲಯ ಪ್ರಾಧಿಕಾರ ಶೇಕಡಾ 50ರಷ್ಟು ದರ ಏರಿಕೆಗೆ ಸರ್ಕಾರಕ್ಕೆ ಮನವಿ ಮಾಡಿದ್ದರೂ, ಸರ್ಕಾರ ಶೇಕಡಾ 20ರಷ್ಟು ಮಾತ್ರ ಒಪ್ಪಿಗೆ ನೀಡಿದೆ. ಆಗಸ್ಟ್ 1ರಿಂದ ಈ ಹೊಸ ದರಗಳು ಜಾರಿಗೆ ಬರಲಿವೆ ಎಂದು ಮೃಗಾಲಯ ಪ್ರಾಧಿಕಾರ ಪ್ರಕಟಿಸಿದೆ.

PREV
Read more Articles on
click me!

Recommended Stories

ಆನೆ ಕಾರಿಡಾರ್ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಬೇಕು: ಮಾಜಿ ಸಂಸದ ಪ್ರತಾಪ್ ಸಿಂಹ
ಅಡಕೆ ಬೆಳೆಗಾರರ ನೆರವಿಗೆ ಕೇಂದ್ರ ತುರ್ತಾಗಿ ಮಧ್ಯಪ್ರವೇಶಿಸಲಿ: ಸಂಸದ ಬಿ.ವೈ.ರಾಘವೇಂದ್ರ