ಉಳಿತಾಯ ಖಾತೆಗೆ ಅತೀ ಹೆಚ್ಚು ಬಡ್ಡಿ ನೀಡುತ್ತೆ ಈ ಬ್ಯಾಂಕ್‌ಗಳು!
ಇತ್ತೀಚೆಗೆ ಬ್ಯಾಂಕ್ ಉಳಿತಾಯ ಖಾತೆಗಳ ಮೇಲೆ ಅತೀ ಕಡಿಮೆ ಬಡ್ಡಿ ನೀಡುತ್ತಿವೆ. ಬಹುತೇಕ ಜನರು ಬ್ಯಾಂಕ್‌ಗಳಲ್ಲಿ ಉಳಿತಾಯ ಖಾತೆ ತೆರೆದಿರುತ್ತಾರೆ. ಇದು ಪ್ರಾಥಮಿಕ ಖಾತೆಯಾಗಿರುತ್ತದೆ. ಹೀಗಾಗೇ ಬ್ಯಾಂಕ್‌ನಲ್ಲಿ ಬೇರೆ ಯಾವುದೇ ಬಗೆಯ ಹೂಡಿಕೆ ಮಾಡಬೇಕೆಂದರೂ ಉಳಿತಾಯ ಖಾತೆ ಅಗತ್ಯ. ಒಂದೆಡೆ ಸರ್ಕಾರಿ ಬ್ಯಾಂಕ್‌ಗಳು ಕಡಿಮೆ ಬಡ್ಡಿ ನೀಡುತ್ತವೆ. ಆದರೆ ಕೆಲ ಖಾಸಗಿ ಬ್ಯಾಂಕ್‌ಗಳು ಉತ್ತಮ ಬಡ್ಡಿ ದರ ನೀಡುತ್ತವೆ. ಈ ಬ್ಯಾಂಕ್‌ಗಳ ಮಾಹಿತಿ ಹೀಗಿದೆ ನೋಡಿ.
ಈ ಬ್ಯಾಂಕ್‌ಗಳು ನೀಡುತ್ತವೆ ಶೇ. 7 ರಷ್ಟು ಬಡ್ಡಿ: ಪ್ರೈವೆಟ್ ಸೆಕ್ಟರ್‌ನ ಬಂಧನ್ ಬ್ಯಾಂಕ್ ಉಳಿತಾಯ ಖಾತೆ ಮೇಲೆ ಅತೀ ಹೆಚ್ಚು ಶೇ. 7.15ರಷ್ಟು ಬಡ್ಡಿ ನೀಡುತ್ತದೆ. ಇನ್ನು ಆರ್‌ಬಿಎಲ್ ಬ್ಯಾಂಕ್ ಶೇ. 6.50ರಷ್ಟು ಬಡ್ಡಿ ಕೊಟ್ಟರೆ, ಐಡಿಎಫ್‌ಸಿ ಶೇ. 6ರಷ್ಟು ಹಾಗೂ ಯಸ್ ಬ್ಯಾಂಕ್ ಶೇ. 5.50 ರಷ್ಟು ಬಡ್ಡಿ ನೀಡುತ್ತದೆ.
ಸರ್ಕಾರಿ ಬ್ಯಾಂಕ್‌ಗಳಲ್ಲಿ ಸಿಗುವ ಬಡ್ಡಿ ಎಷ್ಟು?: ಸರ್ಕಾರಿ ಸ್ವಾಮ್ಯದ, ಪೋಸ್ಟ್ ಆಫೀಸ್‌ನಲ್ಲಿ ಉಳಿತಾಯ ಖಾತೆ ತೆರೆದರೆ ನಿಮಗೆ ಶೇ. 4ರಷ್ಟು ಬಡ್ಡಿ ಸಿಗುತ್ತದೆ. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲೂ ಶೇ. 4ರಷ್ಟು ಬಡ್ಡಿ ನೀಡುತ್ತಾರೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ಶೇ 3.50ರಷ್ಟು ಬಡ್ಡಿ ಕೊಟ್ಟರೆ, ಬ್ಯಾಂಕ್ ಆಫ್ ಇಂಡಿಯಾ ಶೇ. 2.90ರಷ್ಟು ಬಡ್ಡಿ ನೀಡುತ್ತದೆ. ಅತೀ ಕಡಿಮೆ ಬಡ್ಡಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶೇ. 2.70 ರಷ್ಟು ಬಡ್ಡಿ ನೀಡುತ್ತದೆ.
ಬಡ್ಡಿಯಿಂದ ಎಷ್ಟು ಆದಾಯ ಟ್ಯಾಕ್ಸ್ ಫ್ರೀ?: ಉಳಿತಾಯ ಖಾತೆ ಮೇಲೆ ಸಿಗುವ ಬಡ್ಡಿ ಮೇಲೆ ಆದಾಯ ತೆರಿಗೆ ಕಾಯ್ದೆಯ 80TTAಯಡಿ ಬಡ್ಡಿಯಿಂದ ವರ್ಷಿಕ ಹತ್ತು ಸಾವಿರ ರೂಪಾಯಿ ಆದಾಯಕ್ಕೆ ತೆರಿಗೆಡ ನೀಡಬೇಕೆಂದಿಲ್ಲ. ಗಿರಿಯ ನಾಗರಿಕರಿಗೆ ಐವತ್ತು ಸಾವಿರ ರೂಪಾಯಿ ಬಡ್ಡಿಯಿಂದ ಬರುವ ಆದಾಯ ಆದಾಯ ತೆರಿಗೆ ರಹಿತವಾಗಿದೆ. ಹೀಗಾಗಿ ಹೆಚ್ಚಿನ ಆದಾಯದ ಮೇಲೆ ಟಿಡಿಎಸ್ ಕಡಿತ ಮಾಡಲಾಗುತ್ತದೆ.
ಯಾವಾಗ ಟಿಡಿಎಸ್ ಕಟ್ ಮಾಡುವುದಿಲ್ಲ?: ಒಂದು ವೇಳೆ ಉಳಿತಾಯ ಖಾತೆ, ಫಿಕ್ಸ್‌ಡ್ ಡೆಪಾಸಿಟ್ ಹಾಗೂ ರಿಕರಿಂಗ್ ಡೆಪಾಟಿಸ್‌ನಿಂದ ವಾರ್ಷಿಕ ಬಡ್ಡಿ ಆದಾಯ ಹತ್ತು ಸಾವಿರಕ್ಕಿಂತ ಅಧಿಕವಿದ್ದರೆ ಟಿಡಿಎಸ್ ಕಟ್ ಆಗುತ್ತದೆ ಎಂದಲ್ಲ. ಒಂದು ವೇಳೆ ಬಡ್ಡಿಯೊಂದಿಗಿನ ಆದಾಯದ ಜೊತೆ ಒಟ್ಟು ಆದಾಯದ ಮೇಲೆ ತೆರಿಗೆ ಬೀಳುವಷ್ಟು ಇರದಿದ್ದರೆ ಟಿಡಿಎಸ್ ಕಟ್ ಆಗುವುದಿಲ್ಲ.
ಫಾರಂ 15G ಹಾಗೂ ಫಾರಂ 15H: ಟಿಡಿಎಸ್ ಕಟ್ ಆಗಬಾರದೆಂದರೆ ಸೀನಿಯಲ್ ಸಿಟಿಜನ್ಸ್ ಬ್ಯಾಂಕ್‌ನಲ್ಲಿ 15H ಹಾಗೂ ಇತರರು ಫಾರಂ 15G ಸಲ್ಲಿಸಬೇಕು. ಇದು ಸ್ವಯಂ ಘೋಷಣಾ ಪಾತ್ರವಾಗಿದೆ.
ತೆರಿಗೆಯಿಂದ ಹೊರಕ್ಕೆ: ಯಾರೆಲ್ಲಾ ಈ ಅರ್ಜಿ ಸಲ್ಲಿಸಿ ತಮ್ಮ ಆದಾಯ ತೆರಿಗೆ ಮಿತಿಗಿಂತ ಹೊರಗಿದೆ ಎನ್ನುತ್ತಾರೋ ಅವರ ಆದಾಯವನ್ನು ಬ್ಯಾಂಕ್ ಪರಿಶೀಲಿಸುತ್ತದೆ. ಒಂದು ವೇಳೆ ಇಂತಹವರು ಆದಾಯ ತೆರಿಗೆ ಮಿತಿಗಿಂತ ಹೊರಗಿದ್ದರೆ, ಅವರಿಗೆ ಫಾರಂ ಆಧಾರದಲ್ಲಿ ತೆರಿಗೆಯಿಂದ ರಿಯಾಯಿತಿ ಸಿಗುತ್ತದೆ.