ಕಳೆದೆರಡು ದಶಕಗಳಿಂದ ವನ್ಯಜೀವಿ ಛಾಯಾಗ್ರಾಹಕರಾಗಿ ಹೆಸರು ಗಳಿಸಿರುವ ಕದರಮಂಡಲಗಿ ಗ್ರಾಮದ ಶಶಿಧರಸ್ವಾಮಿ ಅವರ ಒಟ್ಟು 25 ಛಾಯಾಚಿತ್ರಗಳು ಬಾಂಗ್ಲಾದೇಶದಲ್ಲಿ ನಡೆದ ಛಾಯಾಚಿತ್ರ ಸ್ಪರ್ಧೆಯಲ್ಲಿ ಪ್ರದರ್ಶನಕ್ಕೆ ಆಯ್ಕೆಯಾಗಿದ್ದವು
ಬ್ಯಾಡಗಿ(ಜು.24): ತಾಲೂಕಿನ ಸುಕ್ಷೇತ್ರ ಕದರಮಂಡಲಗಿ ಗ್ರಾಮದ ಖ್ಯಾತ ಹವ್ಯಾಸಿ ವನ್ಯಜೀವಿ ಛಾಯಾಗ್ರಾಹಕ ಶಶಿಧರಸ್ವಾಮಿ ಹಿರೇಮಠ ಅವರಿಗೆ ಬಾಂಗ್ಲಾದ ಅಗೈಲ್ ಫೋಟೋಗ್ರಾಫಿಕ್ ಸೊಸೈಟಿಯ ಜೀನಿಯಸ್ ಡಿಸ್ಟಿಂಕ್ಷನ್ ಜಿ-ಎಪಿಎಸ್ ಗೌರವ ಪ್ರಶಸ್ತಿ ಲಭಿಸಿದೆ.
ಕಳೆದೆರಡು ದಶಕಗಳಿಂದ ವನ್ಯಜೀವಿ ಛಾಯಾಗ್ರಾಹಕರಾಗಿ ಹೆಸರು ಗಳಿಸಿರುವ ಕದರಮಂಡಲಗಿ ಗ್ರಾಮದ ಶಶಿಧರಸ್ವಾಮಿ ಅವರ ಒಟ್ಟು 25 ಛಾಯಾಚಿತ್ರಗಳು ಬಾಂಗ್ಲಾದೇಶದಲ್ಲಿ ನಡೆದ ಛಾಯಾಚಿತ್ರ ಸ್ಪರ್ಧೆಯಲ್ಲಿ ಪ್ರದರ್ಶನಕ್ಕೆ ಆಯ್ಕೆಯಾಗಿದ್ದವು. ಇಲ್ಲಿ ವರೆಗೆ ವಿಶ್ವದ ವಿವಿಧ ದೇಶದ 139 ಛಾಯಾಗ್ರಾಹಕರಿಗೆ ಮತ್ತು ಭಾರತದ 15 ಛಾಯಾಚಿತ್ರಗ್ರಾಹಕರಿಗೆ ಈ ಜೀನಿಯಸ್ ಜಿ-ಎಪಿಎಸ್ ಡಿಸ್ಟಿಂಕ್ಷನ್ ಪ್ರಶಸ್ತಿ ನೀಡಿ ಗೌರವಿಸಿದ್ದು, ಶಶಿಧರಸ್ವಾಮಿ ಹಿರೇಮಠ ಒಬ್ಬರಾಗಿದ್ದಾರೆ.
ಬ್ಯಾಡಗಿ: ಲಾಕ್‌ಡೌನ್‌ಗೆ ಉತ್ತಮ ಪ್ರತಿಕ್ರಿಯೆ
ಶಶಿಧರಸ್ವಾಮಿ ಸಾಧನೆಗೆ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಮಾಜಿ ಶಾಸಕ ಸುರೇಶಗೌಡ್ರ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ, ಉಪವಿಭಾಗಾಧಿಕಾರಿ, ರಟ್ಟೀಹಳ್ಳಿ ತಹಸೀಲ್ದಾರ್ ಸೇರಿದಂತೆ ಸಾಹಿತಿಗಳಾದ ಜೀವರಾಜ ಛತ್ರದ, ಸಂಕಮ್ಮ ಸಂಕಣ್ಣನವರ, ಪ್ರಕಾಶ ಮನ್ನಂಗಿ, ಲಿಂಗಯ್ಯ ಹಿರೇಮಠ ಇನ್ನಿತರರು ಅಭಿನಂದಿಸಿದ್ದಾರೆ.