ಕೊಡಗು: ಬಾಂಗ್ಲಾ ಕಾರ್ಮಿಕರಿಂದ ಕೊಡಗಿನ ಅಸ್ತಿತ್ವಕ್ಕೆ ಧಕ್ಕೆ: ರಘು ಹೆಬ್ಬಾಲೆ

By Kannadaprabha NewsFirst Published Mar 24, 2023, 3:46 PM IST
Highlights

ಕೊಡಗಿನಿಂದ ಅಕ್ರಮ ಬಾಂಗ್ಲಾ ಕಾರ್ಮಿಕರನ್ನು ಹೊರ ಹಾಕದಿದ್ದಲ್ಲಿ ಮುಂದೆ ಕೊಡಗಿನಲ್ಲಿ ಅಕ್ರಮ ಚಟುವಟಿಕೆಗಳು ಹೆಚ್ಚಾಗಿ ಕೊಡಗಿನ ಅಸ್ತಿತ್ವಕ್ಕೆ ಧಕ್ಕೆಯಾಗಲಿದೆ ಎಂದು ವಿಶ್ವ ಹಿಂದೂ ಪರಿಷದ್‌ ದಕ್ಷಿಣ ಪ್ರಾಂತ ಕಾರ್ಯಕಾರಿಣಿ ಸದಸ್ಯ ರಘು ಹೆಬ್ಬಾಲೆ ಹೇಳಿದರು.

ಸಿದ್ದಾಪುರ (ಮಾ.24) : ಕೊಡಗಿನಿಂದ ಅಕ್ರಮ ಬಾಂಗ್ಲಾ ಕಾರ್ಮಿಕರನ್ನು ಹೊರ ಹಾಕದಿದ್ದಲ್ಲಿ ಮುಂದೆ ಕೊಡಗಿನಲ್ಲಿ ಅಕ್ರಮ ಚಟುವಟಿಕೆಗಳು ಹೆಚ್ಚಾಗಿ ಕೊಡಗಿನ ಅಸ್ತಿತ್ವಕ್ಕೆ ಧಕ್ಕೆಯಾಗಲಿದೆ ಎಂದು ವಿಶ್ವ ಹಿಂದೂ ಪರಿಷದ್‌ ದಕ್ಷಿಣ ಪ್ರಾಂತ ಕಾರ್ಯಕಾರಿಣಿ ಸದಸ್ಯ ರಘು ಹೆಬ್ಬಾಲೆ(Raghu Hebbale) ಹೇಳಿದರು.

ವಿಶ್ವ ಹಿಂದೂ ಪರಿಷದ್‌(VHP) ಬಜರಂಗದಳ(Bajrangdala) ಮಾತೃಶಕ್ತಿ ದುರ್ಗಾವಾಹಿನಿ(Durgavahini) ವಿರಾಜಪೇಟೆ ಪ್ರಖಂಡದ ವತಿಯಿಂದ ಅಮ್ಮತ್ತಿ ಘಟಕದ 25ನೇ ವರ್ಷದ ಸತ್ಯ ನಾರಾಯಣ ಪೂಜೆ ಪ್ರಯುಕ್ತ ಕೊಡವ ಸಮಾಜದಲ್ಲಿ ನಡೆದ ಹಿಂದೂ ಸಮಾವೇಶದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.

ಅಕ್ರಮವಾಗಿ ವಾಸ: ಬಾಂಗ್ಲಾ ಪ್ರಜೆಗೆ ಜಾಮೀನು ನೀಡಲು ಒಪ್ಪದ ಹೈಕೋರ್ಟ್‌

ಕೊಡಗಿನಲ್ಲಿ ಅಸ್ಸಾಂ ಕಾರ್ಮಿಕರ(Assam labour) ಹೆಸರಿನಲ್ಲಿ ಸೇರಿಕೊಂಡಿರುವ ಅಕ್ರಮ ಬಾಂಗ್ಲಾ ನುಸುಳುಕೋರರು(Bangla infiltrators) ನಮ್ಮಲ್ಲಿ ಕಳ್ಳತನ ಅತ್ಯಾಚಾರ ಸುಲಿಗೆ ಮಾಡುತ್ತಿದ್ದಾರೆ. ಇತ್ತೀಚೆಗೆ ದಕ್ಷಿಣ ಕೊಡಗಿನ ನಮ್ಮ ಹೆಣ್ಣು ಮಗಳ ಮೇಲೆ ಅತ್ಯಾಚಾರಕ್ಕೆ ವಿಫಲ ಯತ್ನ ನಡೆಸಿ ನಂತರ ಆಕೆಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವುದು ಉದಾಹರಣೆಯಾಗಿದೆ. ಹೀಗೆ ಮುಂದುವರೆದರೆ ಇವರೆಲ್ಲಾ ಮುಂದೊಂದು ದಿನ ಇಲ್ಲಿನ ತೋಟ ಮಾಲೀಕರಿಗೆ ಕಂಟಕವಾಗಲಿದ್ದಾರೆ ಎಂದು ಎಚ್ಚರಿಕೆ ನೀಡಿದರು. ಹಾಗಾಗಿ ಬಾಂಗ್ಲಾ ಕಾರ್ಮಿಕನ ಬಗ್ಗೆ ನಾವು ಪ್ರಶ್ನೆ ಮಾಡಬೇಕಾಗಿದ್ದು ಅವರನ್ನು ಹೊರಗಡೆ ಹಾಕಿದರೆ ಮಾತ್ರ ಕೊಡಗಿಗೆ ಉಳಿಗಾಲವಿದೆ ಎಂದರು.

ಪ್ರಾಸ್ತಾವಿಕ ಮಾತನಾಡಿದ ವಿಶ್ವ ಹಿಂದೂ ಪರಿಷತ್‌ ಜಿಲ್ಲಾಧ್ಯಕ್ಷರಾದ ಕೃಷ್ಣಮೂರ್ತಿ, ಕಳೆದ 25 ವರ್ಷಗಳಿಂದ ಪ್ರತಿ ವರ್ಷ ಯುಗಾದಿ ಪ್ರಯುಕ್ತ ಸತ್ಯನಾರಾಯಣ ಪೂಜೆ ನಡೆಸುತ್ತಾ ಬರುತ್ತಿರುವುದು ಶ್ಲಾಘನೀಯ ಕಾರ್ಯ. ಜಾತಿಗಳನ್ನು ಬದಿಗಿಟ್ಟು ಹಿಂದೂಗಳು ಒಗ್ಗೂಡಿ ಹಿಂದೂ ಧರ್ಮದ ರಕ್ಷಣೆ ಮಾಡಬೇಕಿದೆ. ಕೇಸರಿ ಶಲ್ಯ ಹಾಕಿರುವ ಕಾರ್ಯಕರ್ತರು ಹಿಂದೂ ಸಮಾಜದ ಉಳಿವಿಗಾಗಿ ಸೇವೆಗೂ ಸಿದ್ಧ ಸಮರಕ್ಕೂ ಬದ್ಧ ಎಂಬುದರ ಸಂಕೇತವಾಗಿದೆ ಎಂದರು.

ಅಮ್ಮತ್ತಿ ಘಟಕದ ವಿಶ್ವ ಹಿಂದೂ ಪರಿಷತ್‌ನ ಅಧ್ಯಕ್ಷರಾದ ಪ್ರಥಮ್‌ ಕರುಂಬಯ್ಯ ಅಧ್ಯಕ್ಷತೆ ವಹಿಸಿದ್ದರು. ವಿಶ್ವ ಹಿಂದೂ ಪರಿಷತ್‌ ಪ್ರಮುಖ್‌ ಬಿ. ಎಂ. ಕುಮಾರ್‌, ಬಜರಂಗದಳದ ಜಿಲ್ಲಾ ಸಂಯೋಜಕ ಅನಿಶ್‌ ಕುಮಾರ್‌, ದುರ್ಗಾವಾಹಿನಿ ಜಿಲ್ಲಾ ಸಂಯೋಜಕಿ ಅಂಬಿಕಾ ಉತ್ತಪ್ಪ ಸೇರಿದಂತೆ ಕಾರ್ಯಕ್ರಮದಲ್ಲಿ ವಿರಾಜಪೇಟೆ ಶಾಸಕರಾದ ಕೆ ಜಿ ಬೋಪಯ್ಯ, ವಿಧಾನ ಪರಿಷತ್‌ ಸದಸ್ಯರಾದ ಮಂಡ್ಯಪಂಡ ಸುಜಾ ಕುಶಾಲಪ್ಪ, ಸಂಘ ಪರಿವಾರದ ರೀನಾ ಪ್ರಕಾಶ್‌, ವಿವಿಧ ಹಿಂದೂ ಸಂಘನೆಗಳ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು.

ಕನ್ನಡಿಗರ ಬದುಕು ಕಸಿಯುತ್ತಿರುವ ಅನ್ಯರು; ಭೂಮಿ ಖರೀದಿಗೆ ಕಡಿವಾಣ ಹಾಕಿ

ಈ ಸಂದರ್ಭ ರಘು ಸಕಲೇಶಪುರ ಅವರನ್ನು ಹಿಂದೂ ಸಂಘಟನೆಯ ಪ್ರಮುಖರು ಮತ್ತು ಕಾರ್ಯಕರ್ತರು ಸನ್ಮಾನಿಸಿ ಗೌರವಿಸಿದರು. ಕಾರ್ಯಕ್ರಮಕ್ಕೂ ಮೊದಲು ಹಿಂದೂ ಕಾರ್ಯಕರ್ತರು ಅಮ್ಮತ್ತಿ ಕಾರ್ಮಾಡು ಮಾರುಕಟ್ಟೆಸಮೀಪದಿಂದ ಶೋಭಾ ಯಾತ್ರೆ ಮೂಲಕ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ಸಾಗಿ ಕೊಡವ ಸಮಾಜದ ಸಭಾಂಗಣಕ್ಕೆ ಆಗಮಿಸಲಾಯಿತು.

click me!