ಬೆಂಗಳೂರು-ಕಾರವಾರ ರಾತ್ರಿ ರೈಲು ರದ್ದು, ಬುಕ್‌ ಮಾಡಿದ ಟಿಕೆಟ್‌ ಕಥೆ ಏನು..?

By Kannadaprabha NewsFirst Published Mar 7, 2020, 8:17 AM IST
Highlights

ಯಶವಂತಪುರದಿಂದ ವಾಸ್ಕೋಗೆ ಹೊಸ ರೈಲು ಆರಂಭಿಸಲು ಕೇಂದ್ರ ರೈಲ್ವೆ ಸಚಿವಾಲಯ ಒಪ್ಪಿಗೆ ನೀಡಿದೆ. ಈ ಮಧ್ಯೆ ಬೆಂಗಳೂರು- ಕಾರವಾರ ನಡುವೆ ಸಂಚರಿಸುತ್ತಿದ್ದ ಹಳೆ ರಾತ್ರಿ ರೈಲನ್ನು (ನಂ.16513/14 ಮತ್ತು 16523/24) ರದ್ದುಪಡಿಸಿ ಶುಕ್ರವಾರ ಆದೇಶ ಹೊರಡಿಸಿದೆ.

ಮಂಗಳೂರು(ಮಾ.07): ಯಶವಂತಪುರದಿಂದ ವಾಸ್ಕೋಗೆ ಹೊಸ ರೈಲು ಆರಂಭಿಸಲು ಕೇಂದ್ರ ರೈಲ್ವೆ ಸಚಿವಾಲಯ ಒಪ್ಪಿಗೆ ನೀಡಿದೆ. ಈ ಮಧ್ಯೆ ಬೆಂಗಳೂರು- ಕಾರವಾರ ನಡುವೆ ಸಂಚರಿಸುತ್ತಿದ್ದ ಹಳೆ ರಾತ್ರಿ ರೈಲನ್ನು (ನಂ.16513/14 ಮತ್ತು 16523/24) ರದ್ದುಪಡಿಸಿ ಶುಕ್ರವಾರ ಆದೇಶ ಹೊರಡಿಸಿದೆ.

ಯಶವಂತಪುರ- ವಾಸ್ಕೊ ಹೊಸ ರೈಲಿಗೆ ಮಾ.7ರಂದು ಬೆಳಗ್ಗೆ 9 ಗಂಟೆಗೆ ಯಶವಂತಪುರದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಕೇಂದ್ರ ರೈಲ್ವೆ ರಾಜ್ಯ ಸಹಾಯಕ ಸಚಿವ ಸುರೇಶ್‌ ಅಂಗಡಿ ಹಸಿರು ನಿಶಾನೆ ತೋರಲಿದ್ದಾರೆ.

ಗೋವಾಗೆ ಹೋಗೋರಿಗೆ ಗುಡ್ ನ್ಯೂಸ್ : ಬೆಂಗಳೂರಿನಿಂದ ಡೈರೆಕ್ಟ್ ಟ್ರೈನ್

ಹಳೆ ರೈಲು ಬೆಂಗಳೂರು- ಕಣ್ಣೂರು- ಬೆಂಗಳೂರು ಎಕ್ಸ್‌ಪ್ರೆಸ್‌ (ನಂ.16511/12 ಮತ್ತು 16517/18) ಎಂದಿನಂತೆ ಮಂಗಳೂರು ಸೆಂಟ್ರಲ್‌ ಮೂಲಕ ಪ್ರಯಾಣಿಸಲಿದೆ. ಯಶವಂತಪುರದಿಂದ ಬರುವ ರೈಲು ಮಂಗಳೂರು ಸೆಂಟ್ರಲ್‌ಗೆ ಬಂದು ಅಲ್ಲಿಂದ ಕಣ್ಣೂರಿನಿಂದ ಕೆಲವು ಪ್ರಯಾಣಿಕರ ಬೋಗಿಗಳು ಕಣ್ಣೂರಿಗೆ, ಮತ್ತೆ ಕೆಲವು ಬೋಗಿಗಳು ಕಾರವಾರಕ್ಕೆ ಸಂಚರಿಸುತ್ತಿದ್ದವು. ಭವಿಷ್ಯದಲ್ಲಿ ಈ ರೈಲಿನ ಕಾರವಾರ ಭಾಗದ ಪ್ರಯಾಣ ರದ್ದುಗೊಳ್ಳಲಿದೆ. ಆದರೆ ಕೇರಳ ಪ್ರಯಾಣಕ್ಕೆ ತೊಂದರೆಯಾಗದು.

ಗೋವಾ ಹೋಗೋದಿನ್ನು ಸುಲಭ, ಯಶವಂತಪುರರಿಂದ ಡೈರೆಕ್ಟ್ ಟ್ರೈನ್

ಕಣ್ಣೂರಿಗೆ ತೆರಳುವ ಬೆಂಗಳೂರು ರಾತ್ರಿ ರೈಲು 18 ಬೋಗಿಗಳೊಂದಿಗೆ ಎಂದಿನಂತೆ (ವಾರದಲ್ಲಿ ನಾಲ್ಕು ದಿನ ಕುಣಿಗಲ್‌ ಮತ್ತು ಮೂರು ದಿನ ಮೈಸೂರು ಮಾರ್ಗ) ಸಂಚರಿಸಲಿದೆ. ಬದಲಾವಣೆ ಶನಿವಾರದಿಂದಲೇ ಅನುಷ್ಠಾನಗೊಳ್ಳುತ್ತಿದೆ. ಹಳೆ ರೈಲಿನಲ್ಲಿ ಕಾರವಾರ ಕಡೆಯ ಪ್ರಯಾಣಕ್ಕೆ ಕಾದಿರಿಸಿದ ಟಿಕೆಟ್‌ ಹೊಸ ರೈಲಿಗೆ ವರ್ಗಾವಣೆಗೊಳ್ಳಲಿದೆ ಎಂದು ನೈಋುತ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

click me!