ಬಮೂಲ್ ಸಿಬ್ಬಂದಿ ವೇತನ ಹೆಚ್ಚಳ?

By Suvarna NewsFirst Published Jan 19, 2020, 8:39 AM IST
Highlights

ಬಮೂಲ್ ಸಿಬ್ಬಂದಿ ವೇತನ ಹೆಚ್ಚಳ?| ವೇತನ ಹೆಚ್ಚಳ ಮಾಡಲು ಬಮೂಲ್ ಕಾರ್ಯಕಾರಿ ಮಂಡಳಿ ಚಿಂತೆ

ಸಂಪತ್ ತರೀಕೆರೆ

ಬೆಂಗಳೂರು[ಜ.19]: ಹಾಲು ಉತ್ಪಾದಕರಿಗೆ ಪ್ರತಿ ಲೀಟರ್ ಹಾಲಿಗೆ 2 ರುಪಾಯಿ ಹೆಚ್ಚುವರಿ ಹಣ ನೀಡುವ ಸಿಹಿ ಸುದ್ದಿ ನೀಡಿದ ಬೆನ್ನಲ್ಲೇ ಹಾಲು ಉತ್ಪಾದಕರ ಸಹಕಾರ ಸೊಸೈಟಿ ಸಿಬ್ಬಂ ದಿಯ ವೇತನ ಹೆಚ್ಚಳ ಮಾಡಲು ಬಮೂಲ್ ಕಾರ‌್ಯಕಾರಿ ಮಂಡಳಿ ವೇತನ ಪರಿಷ್ಕರಣೆಗೆ ಚಿಂತನೆ ನಡೆಸಿದೆ.

ಬಮೂಲ್ ವ್ಯಾಪ್ತಿಯ ಸೊಸೈಟಿಗಳ ಕಾರ್ಯ ದರ್ಶಿ ಸೇರಿದಂತೆ ಎಲ್ಲ ಸಿಬ್ಬಂದಿಗೆ ಮಾರ್ಚ್‌ನಿಂದ ವೇತನವನ್ನು ಹೆಚ್ಚಿಸಲು ಬಮೂಲ್ ಕಾರ್ಯಕಾರಿ ಸಮಿತಿ ಚಿಂತಿಸಿದ್ದು, ಈ ಕುರಿತು ಶೀಘ್ರವೇ ಸಭೆ ಕರೆದು ತೀರ್ಮಾನ ಕೈಗೊಳ್ಳುವುದಾಗಿ ಬಮೂಲ್ ಮೂಲಗಳು ಮಾಹಿತಿ ನೀಡಿವೆ

ನಂದಿನಿ ಹಾಲು ದರ 3 ರು. ಏರಿಕೆ : ರೈತರಿಗೆ ಬಂಪರ್

500ಲೀ. ಗಿಂತ ಕಡಿಮೆ ಹಾಲು ಸಂಗ್ರಹಿಸುವಸುಮಾರು ಒಂದು ಸಾವಿರ ಸೊಸೈಟಿಗಳು, 500ರಿಂದ 750 ಲೀ.ಸಂಗ್ರಹಿಸುವ 700ಕ್ಕೂ ಅಧಿಕ ಸೊಸೈಟಿಗಳು ಮತ್ತು ಒಂದು ಸಾವಿರ ಲೀ.ಗಿಂತ ಹೆಚ್ಚು ಹಾಲು ಸಂಗ್ರಹಿಸುವ 350ಕ್ಕೂ ಹೆಚ್ಚು ಸೊಸೈಟಿಗಳು ಬಮೂಲ್ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. 500 ಲೀಟರ್ ಗಿಂತ ಕಡಿಮೆ ಹಾಲು ಸಂಗ್ರಹಿಸುವ ಸೊಸೈಟಿ ಕಾರ‌್ಯದರ್ಶಿ ತಿಂಗಳಿಗೆ ಸುಮಾರು ಐದರಿಂದ ಆರು ಸಾವಿರ ರು. ಸಂಬಳ ಪಡೆಯುತ್ತಿದ್ದರೆ, 2 ಸಾವಿರ ಲೀಟರ್‌ಗೂ ಅಧಿಕ ಲೀಟರ್ ಹಾಲು ಸಂಗ್ರಹಿಸುವ ಸೊಸೈಟಿ ಕಾರ‌್ಯದರ್ಶಿ 25 ಸಾವಿರಕ್ಕೂ ಅಧಿಕ ವೇತನ ಪಡೆಯುತ್ತಿದ್ದಾರೆ.

500 ಲೀ.ಗಿಂತ ಕಡಿಮೆ ಹಾಲು ಸಂಗ್ರಹಿಸುವ ಸೊಸೈಟಿ ಕಾರ್ಯದರ್ಶಿಗೆ ಶೇ.25ರಷ್ಟು, ೫೦೦ರಿಂದ 750 ಲೀ.ಹಾಲು ಸಂಗ್ರಹಿಸುವ ಸೊಸೈಟಿ ಕಾರ್ಯ ದರ್ಶಿಗೆ ಶೇ.20, ಒಂದು ಸಾವಿರ ಲೀ.ಗೂ ಅಧಿಕ ಹಾಲು ಸಂಗ್ರಹಿಸುವ ಸೊಸೈಟಿ ಕಾರ್ಯದರ್ಶಿಗೆ ಶೇ.15 ಹಾಗೂ ಎರಡು ಸಾವಿರ ಲೀ.ಗಿಂತ ಅಧಿಕ ಹಾಲು ಸಂಗ್ರಹ ಮಾಡುವ ಸೊಸೈಟಿ ಸಿಬ್ಬಂದಿಗೆ ಶೇ.10ರಷ್ಟು ಸಂಬಳ ಹೆಚ್ಚಳ ಮಾಡುವ ಚಿಂತನೆ ಬಮೂಲ್‌ನದ್ದು. ಬಮೂಲ್ ವ್ಯಾಪ್ತಿಗೆ ಬೆಂಗಳೂರು ನಗರ, ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆಗಳ 12 ತಾಲೂಕುಗಳ ೪೨೫೦ ಹಳ್ಳಿಗಳು ಒಳಪಡಲಿವೆ. ಇಲ್ಲಿ 2084 ಸೊಸೈಟಿಗಳು ಕಾರ್ಯನಿರ್ವಹಿಸುತ್ತಿದ್ದು, ಸುಮಾರು 3.50 ಲಕ್ಷ ಮಂದಿ ಹಾಲು ಉತ್ಪಾದಕರ ಪೈಕಿ, 1.20 ಲಕ್ಷ ಮಂದಿ ಸಕ್ರಿಯ ಸದಸ್ಯರಿದ್ದಾರೆ. ಈ ಸೊಸೈಟಿಗಳಲ್ಲಿ ದಿನಕ್ಕೆ 15.65 ಲಕ್ಷ ಲೀಟರ್ ಹಾಲು ಸಂಗ್ರಹಣೆ ಮಾಡಲಾಗುತ್ತಿದೆ.

ಪ್ರೋತ್ಸಾಹ ಧನ ಹೆಚ್ಚಳ:

ಸೊಸೈಟಿಗಳು ಸಂಗ್ರಹಿಸುವ ಪ್ರತಿ ಲೀಟರ್ ಹಾಲಿಗೆ ಬಮೂಲ್ 25 ಪೈಸೆ ಪ್ರೋತ್ಸಾಹ ಧನ ನೀಡುತ್ತದೆ. ಈ ಪ್ರೋತ್ಸಾಹ ಧನವನ್ನು ಸೊಸೈಟಿ ಸದಸ್ಯರು ಹಂಚಿಕೆ ಮಾಡಿಕೊಳ್ಳುತ್ತಾರೆ. ಬಮೂಲ್ ಸೊಸೈಟಿ ಸದಸ್ಯರು ಇನ್ನಷ್ಟು ಉತ್ಸಾಹದಿಂ ದ ಕಾರ್ಯನಿರ್ವಹಿಸುವ ಜತೆಗೆ ಹಾಲು ಸಂಗ್ರಹಣೆ ಮತ್ತಷ್ಟು ಹೆಚ್ಚಿಸಲಿ ಎಂಬ ಕಾರಣಕ್ಕೆ ಪ್ರೋತ್ಸಾಹ ಧನವನ್ನು ಏರಿಕೆ ಮಾಡಲು ಮುಂದಾಗಿದೆ.

ನಂದಿನಿ ಹಾಲು ದರ ಬಹುತೇಕ ಹೆಚ್ಚಳ: ಬಾಲಚಂದ್ರ ಜಾರಕಿಹೊಳಿ

click me!