ಬಿಸಿಲಿನಲ್ಲಿ ಕೊರೋನಾ ವೈರಸ್ ಹರಡುವ ಸಾಧ್ಯತೆ ತೀರಾ ಕಡಿಮೆ: ಶ್ರೀರಾಮುಲು| . ಬಿಸಿಲಿರುವ ಪ್ರದೇಶದಲ್ಲಿ ವೈರಸ್ ಬರುವುದಿಲ್ಲ ಎಂದು ಎಲ್ಲೂ ವೈಜ್ಞಾನಿಕವಾಗಿ ಸಾಬೀತಾಗಿಲ್ಲ| ಅಧಿಕಾರಿಗಳ ಪೇಚಾಟ ಗಮನಿಸಿದ ಮುಸುಮುಸು ನಕ್ಕ ಪತ್ರಕರ್ತರು|
ಬಳ್ಳಾರಿ(ಮಾ.15): 'ಬಳ್ಳಾರಿಯಲ್ಲಿ ತಾಪಮಾನ ಹೆಚ್ಚು. ಹೀಗಾಗಿ ಕೊರೋನಾ ವೈರಸ್ ಹರಡುವ ಸಾಧ್ಯತೆ ತೀರಾ ಕಡಿಮೆ. ಒಂದು ವೇಳೆ ಬಂದರೂ ವೈರಸ್ ಸತ್ತು ಹೊಗುತ್ತದೆ.’ ಹೀಗಂತ ಆರೋಗ್ಯ ಸಚಿವ ಬಿ. ಶ್ರೀರಾಮುಲು ಹೇಳಿದ್ದರು. ಇದು ನಿಜವೇ?
ಇದು ವೈಜ್ಞಾನಿಕವಾಗಿ ಸಾಬೀತಾಗಿದೆಯೇ? ಎಂದು ಕೇಳಿದ ಪ್ರಶ್ನೆಗೆ ಸ್ಪಷ್ಟ ಉತ್ತರ ಕೊಡುವುದು ಜಿಲ್ಲಾಧಿಕಾರಿಗೆ ಕಷ್ಟವಾಯಿತು. ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಬಸರೆಡ್ಡಿ ಅವರ ಮುಖ ನೋಡಿದ ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಅವರು ಏನು ಹೇಳಬೇಕೋ ಎಂದು ತೋಚದೆ ಪೇಚಿಗೀಡಾದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಇದಕ್ಕೆ ಕಾರಣವೂ ಇತ್ತು. ಬಿಸಿಲಿರುವ ಪ್ರದೇಶದಲ್ಲಿ ವೈರಸ್ ಬರುವುದಿಲ್ಲ ಎಂದು ಎಲ್ಲೂ ವೈಜ್ಞಾನಿಕವಾಗಿ ಸಾಬೀತಾಗಿಲ್ಲ. ಇದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಗೂ ಗೊತ್ತು. ಆದರೆ, ಸಚಿವರ ದಡ್ಡತನಕ್ಕೆ ಏನೆಂದು ಉತ್ತರಿಸುವುದು ಮತ್ತು ಆರೋಗ್ಯ ಸಚಿವರ ಹೇಳಿಕೆಯ ವಿರುದ್ಧ ಮಾತನಾಡಿದಂತಾಗುತ್ತದೆ ಎಂಬ ಕಾರಣಕ್ಕೆ ಸ್ಪಷ್ಟಉತ್ತರ ನೀಡದೆ ಒದ್ದಾಡಿದರು. ಅಧಿಕಾರಿಗಳ ಪೇಚಾಟವನ್ನು ಗಮನಿಸಿದ ಪತ್ರಕರ್ತರು ಮುಸುಮುಸು ನಕ್ಕರು.