ಮಂಗಳೂರು ಕಮಿಷನರ್ ಭೇಟಿ ಮಾಡಿದ ಆಫ್ಘನ್‌ ವಿದ್ಯಾರ್ಥಿಗಳು

Kannadaprabha News   | Asianet News
Published : Aug 21, 2021, 02:18 PM IST
ಮಂಗಳೂರು ಕಮಿಷನರ್ ಭೇಟಿ ಮಾಡಿದ ಆಫ್ಘನ್‌ ವಿದ್ಯಾರ್ಥಿಗಳು

ಸಾರಾಂಶ

ಮಂಗಳೂರಿನಲ್ಲಿ ಪೊಲೀಸ್ ಕಮಿಷನರ್ ಭೇಟಿಯಾದ ಆಫ್ಘನ್ ವಿದ್ಯಾರ್ಥಿಗಳು ಕಮಿಷನರ್ ಭೇಟಿಯಾಗಿ ತಮಗೆ ರಕ್ಷಣೆ ನೀಡುವಂತೆ ಮನವಿ 

ಮಂಗಳೂರು (ಆ.21):  ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಟ್ಟಹಾಸ ಮೆರೆಯುತ್ತಿದ್ದು, ಅಪ್ಘಾನ್ ವಿದ್ಯಾರ್ಥಿಗಳು ಮಂಗಳೂರಿನಲ್ಲಿ ಪೊಲೀಸ್ ಕಮಿಷನರ್ ಭೇಟಿಯಾಗಿ ತಮಗೆ ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾರೆ. 

ಮಂಗಳೂರು ವಿವಿ, ಸುರತ್ಕಲ್ ಎನ್ ಐಟಿಕೆ ಕಾಲೇಜು ಮತ್ತು ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿಗ ಸುಮಾರು 58 ವಿದ್ಯಾರ್ಥಿಗಳು ಮಂಗಳೂರು ಕಮಿಷನರ್ ಶಶಿಕುಮಾರ್ ಭೇಟಿ ಮಾಡಿದ್ದಾರೆ. 

ಅಷ್ಘಾನಿಸ್ತಾನ ಸರ್ಕಾರಕ್ಕೆ ನೀಡಿದ ಶಸ್ತ್ರಾಸ್ತ್ರಗಳೆಲ್ಲಾ ತಾಲಿಬಾನಿಗಳ ಪಾಲು!

22 ಜನ ಯುಜಿ ವಿದ್ಯಾರ್ಥಿಗಳು, 13 ಜನ ಪಿಜಿ ವಿದ್ಯಾರ್ಥಿಗಳು ಹಾಗೂ ರಿಸರ್ಚ್ ವಿದ್ಯಾರ್ಥಿಗಳು ತಮ್ಮ ಕುಟುಂಬದ ಜೊತೆ ಮಂಗಳೂರು ಕಮಿಷನರ್ ಭೇಟಿಯಾಗಿ ಮನವಿ ಮಾಡಿದ್ದಾರೆ.

ಆಫ್ಘನ್ ತಾಲಿಬಾನ್ ಆತಂಕದ ಬೆನ್ನಲ್ಲೇ ತಮಗೆ ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾರೆ. ಕೇಂದ್ರ ಸರ್ಕಾರಕ್ಕೆ ತಮ್ಮ ಬಗ್ಗೆ ಮಾಹಿತಿ ನೀಡುವಂತೆ ಮತ್ತು ಇಲ್ಲಿನ ವಾಸ್ತವ್ಯದ ಬಗ್ಗೆ ಮಾಹಿತಿ ನೀಡುವಂತೆ ಕಮಿಷನರ್ ಬಳಿ ಕೋರಿದ್ದಾರೆ.

ಮಂಗಳೂರು ಕಮಿಷನರ್ ಜೊತೆ ಕೆಲ ಕಾಲ ಮಾತುಕತೆ ನಡೆಸಿದ ವಿದ್ಯಾರ್ಥಿಗಳು ತಮ್ಮ ರಕ್ಷಣೆಗಾಗಿ ಕೋರಿದ್ದಾರೆ. 

PREV
click me!

Recommended Stories

ತುಮಕೂರಿನಲ್ಲಿ ಉದ್ಯಮಿಗೆ ಲಂಚಕ್ಕೆ ಬೇಡಿಕೆ; ಇಬ್ಬರು ಭ್ರಷ್ಟ ಅಧಿಕಾರಿಗಳು ಲೋಕಾಯುಕ್ತ ಬಲೆಗೆ!
ಮಂಡ್ಯಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ರಾಜಕೀಯ ಹೊಸ ದಾಳ ಉರುಳಿಸಿದ ದಳಪತಿ!