ಸ್ವಾಮೀಜಿಯೊಬ್ಬರು ಮಳೆಗಾಗಿ ಜಲಾನುಷ್ಠಾನ ಮತ್ತು ಮೌನ ವ್ರತ ಆರಂಭಿಸಿದ್ದಾರೆ. ರಾಯಚೂರು ತಾಲೂಕಿನ ಮಲಿಯಾಬಾದ್ ಬೆಟ್ಟದಲ್ಲಿ ಬಾಲಯೋಗಿ ವೀರ ಸಂಗಮೇಶ್ವರ ಶ್ರೀಗಳು ಪೂಜೆ ಶುರು ಮಾಡಿದ್ದಾರೆ. ಏಳು ಬೆಟ್ಟಗಳ ನಡುವೆ ಸ್ವಾಮೀಜಿ ಅವರು ಪೂಜೆಗೆ ಕುಳಿತಿದ್ದಾರೆ.
ರಾಯಚೂರು(ಜು.25): ಮುನಿಸಿಕೊಂಡಿದ್ದ ವರುಣ ಇದೀಗ ರಾಜ್ಯಾದ್ಯಂತ ಸುರಿಯಲಾರಂಭಿಸಿದ್ದಾನೆ. ಆದ್ರೆ, ರಾಯಚೂರಿನಲ್ಲಿ ಮಾತ್ರ ಇನ್ನೂ ಮುನಿಸಿಕೊಂಡಿದ್ದಾನೆ. ಹೌದು, ರಾಯಚೂರು ಜಿಲ್ಲೆಯಾದ್ಯಂತ ಮಳೆ ಇಲ್ಲದೆ ಅನ್ನದಾತರು ಅಕ್ಷರಶಃ ಕಂಗಾಲಾಗಿದ್ದಾರೆ.
ಸ್ವಾಮೀಜಿಯೊಬ್ಬರು ಮಳೆಗಾಗಿ ಜಲಾನುಷ್ಠಾನ ಮತ್ತು ಮೌನ ವ್ರತ ಆರಂಭಿಸಿದ್ದಾರೆ. ರಾಯಚೂರು ತಾಲೂಕಿನ ಮಲಿಯಾಬಾದ್ ಬೆಟ್ಟದಲ್ಲಿ ಬಾಲಯೋಗಿ ವೀರ ಸಂಗಮೇಶ್ವರ ಶ್ರೀಗಳು ಪೂಜೆ ಶುರು ಮಾಡಿದ್ದಾರೆ. ಏಳು ಬೆಟ್ಟಗಳ ನಡುವೆ ಸ್ವಾಮೀಜಿ ಅವರು ಪೂಜೆಗೆ ಕುಳಿತಿದ್ದಾರೆ.
undefined
ಬೆಂಗ್ಳೂರು ಬಿಟ್ಟು ಉಳಿದೆಲ್ಲೆಡೆ ಭಾರೀ ಮಳೆಯಾಗುವ ಸಾಧ್ಯತೆ
ಬಾಲಯೋಗಿ ವೀರ ಸಂಗಮೇಶ್ವರ ಶ್ರೀಗಳು ಮೌನವ್ರತ ಪೂಜೆ ಮಾಡುತ್ತಿದ್ದಾರೆ. ಮಳೆ ಮತ್ತು ಬೆಳೆಗಾಗಿ ರಾಮಲಿಂಗೇಶ್ವರ ದೇಗುಲದಲ್ಲಿ ವಿಶೇಷ ಪೂಜೆ ನಡೆಯುತ್ತಿದೆ.
ಕಳೆದ 30 ದಿನಗಳಿಂದ ನಿರಂತರವಾಗಿ ಪೂಜೆ ನಡೆಯುತ್ತಿದೆ. ನಿತ್ಯ ಶಿವ ಮತ್ತು ಜಗನ್ಮಾತೆ ಶಾಂಭವಿ ದೇವಿಯ ವಿಶೇಷ ಪೂಜೆ ಮಾಡಲಾಗುತ್ತಿದೆ. ದಿನಕ್ಕೆ ಮೂರು ಬಾರಿ ಜಲಾನುಷ್ಠಾನ ಪೂಜೆ ನೆರವೇರಿಸಲಾಗುತ್ತಿದೆ. ಏಳು ಬೆಟ್ಟದ ನಡುವಿನ ಬಾವಿಯಲ್ಲಿ ಬಾಲಯೋಗಿ ವೀರ ಸಂಗಮೇಶ್ವರ ಶ್ರೀಗಳು ಕುಳಿತು ಮಳೆಗಾಗಿ ಪೂಜೆ ಮಾಡುತ್ತಿದ್ದಾರೆ.