Conversion in Karnataka : ಹಾಸನದಲ್ಲೂ ಮತಾಂತರದ ಸದ್ದು, ಪ್ರಾರ್ಥನಾ ಸ್ಥಳದ ಮುಂದೆ ಪ್ರತಿಭಟನೆ

By Suvarna NewsFirst Published Nov 29, 2021, 7:43 PM IST
Highlights

* ಮತ್ತೆ ಚರ್ಚೆಗೆ ಬಂದ ಮತಾಂತರ ವಿಚಾರ
* ಪ್ರಾರ್ಥನೆ ನಡೆಸುತ್ತಿದ್ದ ಜಾಗದ ಮುಂದೆ ಹಿಂದು ಕಾರ್ಯಕರ್ತರ ಪ್ರತಿಭಟನೆ
* ಹಾಸನ ಜಿಲ್ಲೆಯಿಂದ ಘಟನೆ ವರದಿ
* ಮತಾಂತರ ನಿಷೇಧ ಬಿಲ್ ಮಂಡನೆಗೆ ರಾಜ್ಯ ಸರ್ಕಾರ ಸಿದ್ಧ?

ಹಾಸನ (ನ.29) ರಾಜ್ಯದಲ್ಲಿ ತಣ್ಣಗಾಗಿದ್ದ  ಒತ್ತಾಯದ ಮತಾಂತರ ವಿಚಾರ ಮತ್ತೆ ಸದ್ದು ಮಾಡುತ್ತಿದೆ. ಚಿತ್ರದುರ್ಗದಿಂದ (Chitradurga) ಆಗುತ್ತಿದ್ದ ಸುದ್ದಿ ಈ ಬಾರಿ ಹಾಸನದಿಂದ (Hassan) ಆಗಿದೆ. ಹಿಂದೂ (Hindu) ಧರ್ಮದ ಜನರನ್ನು ಪುಸಲಾಯಿಸಿ ಮತಾಂತರ ಮಾಡುತ್ತಿದ್ದ ಆರೋಪದ ಕಾರಣಕ್ಕೆ ಕ್ರಿಶ್ಚಿಯನ್ ಪ್ರಾರ್ಥನಾ ಕೇಂದ್ರದ ಎದುರು ಹಿಂದು ಪರ (Bajrang Dal )ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.'

ಈ ವೇಳೆ ಪ್ರಾರ್ಥನಾ ನಿರತರು ಪ್ರತಿಭಟನಾಕಾರರ ನಡುವೆ ವಾಗ್ವಾದ ನಡೆದಿದೆ. ನಾವು ಪ್ರಾರ್ಥನೆಗೆ ಬಂದಿದ್ದೇವೆ ಅದನ್ನು ಕೇಳೋಕೆ ನೀವ್ಯಾರು ಎಂದು ಮಹಿಳೆಯರು ವಾದ ಮಾಡಿದ್ದಾರೆ. ಈ ವೇಳೆ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ಪೊಲೀಸರು (Karnataka Police) ಹತೋಟಿಗೆ ತಂದಿದ್ದಾರೆ.

ಹಾಸನ ಜಿಲ್ಲೆ ಬೇಲೂರು ಪಟ್ಟಣದ ಬಿಕ್ಕೋಡು ರಸ್ತೆಯಲ್ಲಿ ಪ್ರಕರಣ ನಡೆದಿದೆ. ತಾಲೂಕಿನಲ್ಲಿ ಅಕ್ರಮವಾಗಿ ಪ್ರಾರ್ಥನಾ ಕೇಂದ್ರ ತೆರೆದು ಮತಾಂತರ ಮಾಡುತ್ತಿರೋ ಬಗ್ಗೆ ಆರೋಪ ಕೇಳಿ ಬಂದಿತ್ತು. ಸೂಕ್ತ ಕ್ರಮಕ್ಕೆ ಹಿಂದುಪರ ಸಂಘಟನೆಗಳ ಮುಖಂಡರ ಆಗ್ರಹ ಮಾಡಿದ್ದಾರೆ.

ಕರ್ನಾಟಕದ ಉಡುಪಿ, ಕೊಡಗು, ಬೆಳಗಾವಿ, ಚಿಕ್ಕಬಳ್ಳಾಪುರ, ಕನಕಪುರ ಮತ್ತು ಅರಸೀಕೆರೆಯಿಂದ ಈ ರೀತಿಯ ಪ್ರಕರಣಗಳು ಮೇಲಿಂದ ಮೇಲೆ ವರದಿಯಾಗಿದ್ದವು. ಬೆಳಗಆವಿ ಪೊಲೀಸರು  ಈ ಬಗೆಯ ಮತಾಂತರ ಮಾಡಲು ಮುಂದಾದರೆ ಕಠಿಣ ಕ್ರಮ ಎಂದು  ಎಚ್ಚರಿಸಿದ್ದರು. ಮತಾಂತರ ನಿಷೇಧ  ಕಾನೂನು ಸಹ ಚರ್ಚೆಯಾಗುತ್ತಲೇ ಇದೆ. ಚಳಿಗಾಲದ ಅಧಿವೇಶನದಲ್ಲಿ ಬಿಲ್ ಮಂಡನೆಯಾಗುವ ಸಾಧ್ಯತೆ ಇದೆ.

ಚಿತ್ರದುರ್ಗ ಕರ್ನಾಟಕದ ಉಡುಪಿ, ಕೊಡಗು, ಬೆಳಗಾವಿ, ಚಿಕ್ಕಬಳ್ಳಾಪುರ, ಕನಕಪುರ ಮತ್ತು ಅರಸೀಕೆರೆಯಿಂದ ಈ ರೀತಿಯ ಪ್ರಕರಣಗಳು ಮೇಲಿಂದ ಮೇಲೆ ವರದಿಯಾಗಿದ್ದವು. ಬೆಳಗಆವಿ ಪೊಲೀಸರು  ಈ ಬಗೆಯ ಮತಾಂತರ ಮಾಡಲು ಮುಂದಾದರೆ ಕಠಿಣ ಕ್ರಮ ಎಂದು  ಎಚ್ಚರಿಸಿದ್ದರು. ಮತಾಂತರ ನಿಷೇಧ  ಕಾನೂನು ಸಹ ಚರ್ಚೆಯಾಗುತ್ತಲೇ ಇದೆ. ಚಳಿಗಾಲದ ಅಧಿವೇಶನದಲ್ಲಿ ಬಿಲ್ ಮಂಡನೆಯಾಗುವ ಸಾಧ್ಯತೆ ಇದೆ.

ಶಾಸಕರೆ ಆರೋಪಿಸಿದದ್ದರು; ಚಿತ್ರದುರ್ಗ ಹೊಸದುರ್ಗ  ಶಾಸಕ ಗೂಳಿಹಟ್ಟಿ ಶೇಖರ್  ವಿಧಾನಸಭೆಯಲ್ಲೇ ಮತಾಂತರ ವಿಚಾರವನ್ನು ಪ್ರಸ್ತಾಪ ಮಾಡಿದ್ದರು. ತಮ್ಮ ತಾಯಿಯನ್ನೇ ಮತಾಂತರ ಮಾಡಲಾಗಿದೆ ಎಂದಿದ್ದು ಕೋಲಾಹಲಕ್ಕೆ  ಕಾರಣವಾಗಿತ್ತು. ಇದಾದ ಮೇಲೆ ಗೂಳಿಹಟ್ಟಿ ನೇತೃತ್ವದಲ್ಲಿಯೇ ಘರ್ ವಾಪಸಿ ಕಾರ್ಯಕ್ರಮ ನಡೆದಿತ್ತು. ಶಾಸಕರ ತಾಯಿ ಮರಳಿ ಹಿಂದು ಧರ್ಮಕ್ಕೆ ಬಂದಿದ್ದು ಆಘಾತದಿಂದ ಚೇತರಿಸಿಕೊಂಡಿದ್ದರು. 

ಮತಾಂತರ ಪ್ರಕರಣಗಳು ಹೆಚ್ಚಾಗುತ್ತಿರುವ ಕುರಿತು ತೀವ್ರ ಚರ್ಚೆಗಳು ನಡೆಯುತ್ತಿರುವ ಕಾರಣ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿಯು ರಾಜ್ಯದಲ್ಲಿನ ಅಧಿಕೃತ ಮತ್ತು ಅನಧಿಕೃತ ಕ್ರಿಶ್ಚಿಯನ್‌ ಮಿಷನರಿಗಳು ಎಷ್ಟಿವೆ ಎಂಬುದರ ಬಗ್ಗೆ ಮಾಹಿತಿ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿತ್ತು.

ಶಾಸಕರಾದ ಗೂಳಿಹಟ್ಟಿಶೇಖರ್‌(Goolihattishekhar), ಪುಟ್ಟರಂಗ ಶೆಟ್ಟಿ, ಬಿ.ಎಂ.ಫಾರೂಕ್‌, ವಿರೂಪಾಕ್ಷಪ್ಪ ಬಳ್ಳಾರಿ, ಅಶೋಕ್‌ ನಾಯ್ಕ್‌ ಸೇರಿದಂತೆ ಇತರರು ಭಾಗವಹಿಸಿದ್ದರು. ಮಿಷನರಿಗಳು(Missionaries) ಸರ್ಕಾರದಿಂದ ಪಡೆಯುತ್ತಿರುವ ಸೌಲಭ್ಯಗಳು ಮತ್ತು ಕ್ರಿಶ್ಚಿಯನ್‌(Christian) ಮಿಷನರಿಗಳ ನೋಂದಣಿಗೆ ಸಂಬಂಧಪಟ್ಟಂತೆ ಚರ್ಚೆ ನಡೆಸಲಾಯಿತು. ಮತಾಂತರಗೊಳ್ಳುವ ಸಮುದಾಯದವರಿಗೆ ಕಲ್ಪಿಸಲಾಗುತ್ತಿರುವ ಸರ್ಕಾರಿ ಸೌಲಭ್ಯಗಳನ್ನು ಹಿಂಪಡೆದುಕೊಳ್ಳಬೇಕು ಎಂಬ ಶಿಫಾರಸನ್ನು ಸಮಿತಿ ಸದಸ್ಯರು ಮಾಡಿದ್ದರು.

ಪ್ರಾಥಮಿಕ ಮಾಹಿತಿ ಪ್ರಕಾರ ಶೇ.40ರಷ್ಟು ಅನಧಿಕೃತ ಚರ್ಚ್‌ಗಳಿವೆ(Church). ಈ ಬಗ್ಗೆ ಇನ್ನೂ ಅಂಕಿ-ಅಂಶಗಳನ್ನು ಕಲೆ ಹಾಕಲಾಗುತ್ತಿದೆ. ಬಲವಂತದ ಮತಾಂತರ(Conversion) ಇದೆ ಎನ್ನುವ ವಿಚಾರ ಸಂಬಂಧ ಸಭೆ ನಡೆಸಲಾಗಿದೆ. ರಾಜ್ಯದಲ್ಲಿ ಮತಾಂತರ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿರುವ ಅಧಿಕೃತ ಮತ್ತು ಅನಧಿಕೃತ ಮಿಷನರಿಗಳ ಎಷ್ಟಿವೆ ಸೇರಿದಂತೆ ಇತರೆ ವಿಚಾರಗಳ ಕುರಿತು ಚರ್ಚೆ ನಡೆಸಲಾಗಿದೆ  ಎಂದು ಶಾಸಕ ಗೂಳಿಹಟ್ಟಿಶೇಖರ್‌ ತಿಳಿಸಿದ್ದರು. 

ಪ್ರೀತಿಸಿ ಮದುವೆ ಮತಾಂತರ... ಸ್ಪಂದಿಸದ ಗಂಡ... ಇನ್ಮುಂದೆ ನೊಂದವರ ಪರ ನನ್ನ ಹೋರಾಟ!

ಮತಾಂತರಕ್ಕೆ ಪ್ರಚೋದಿಸುವ ಕ್ರೈಸ್ತ ಧರ್ಮ ಪ್ರಚಾರದ ಪತ್ರಗಳು ಮಂಗಳೂರಿನ  ಉಳ್ಳಾಲದಲ್ಲಿ ಪತ್ತೆಯಾಗಿದ್ದವು.  ಉಳ್ಳಾಲ ಕೋಮುಸೂಕ್ಷ್ಮ ಪ್ರದೇಶ, ಕರಾವಳಿ ಭಾಗದ ಕ್ರೈಸ್ತ ಮಿಷನರಿಗಳು ಇದಕ್ಕೆ ಸಾಥ್ ನೀಡಿದ್ದಾರೆ. ಜೊತೆಗೆ ಕೇರಳ ಮೂಲದಿಂದ ಫಂಡಿಂಗ್ ಕೂಡಾ ನಡೆಯುತ್ತಿದೆ.  ಆದ್ದರಿಂದ ರೈಲಿನಲ್ಲಿ ಬಂದು ಧೈರ್ಯವಾಗಿ ಭಿತ್ತಿಪತ್ರ, ಪುಸ್ತಕ ಕೊಟ್ಟಿದ್ದಾರೆ‌. ಕೆಲವು ಕಡೆ ಚರ್ಚ್ ಗೆ ಪ್ರಾರ್ಥನೆಗೆ ಕರೆದಿದ್ದಾರೆ. ಆರೋಪಿಯನ್ನು ಬಂಧಿಸುವಂತೆ  ಸ್ಥಳೀಯರು ಪೊಲೀಸರಿಗೆ ಒತ್ತಾಯಪಡಿಸಿದ್ದರು. 

Bajrang Dal workers barge into a Christian prayer hall in Hassan district, Karnataka to disrupt prayer and allege religious conversion. ⁦⁩ pic.twitter.com/cljKvnueZ7

— Nikhila Henry (@NikhilaHenry)
click me!