ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಮೇ.24): ದೇಶದ ವಿವಾದಿತ ಕೇಂದ್ರಗಳಲ್ಲಿ ಒಂದಾಗಿರುವ ಚಿಕ್ಕಮಗಳೂರು ಜಿಲ್ಲೆಯ ಇನಾಂ ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ. ಈ ವಿವಾದಿತ ಕೇಂದ್ರದಲ್ಲಿ ಕಳೆದ 15ದಿನಗಳಿಂದ ಒಂದಲ್ಲ ಒಂದು ವಿವಾದದ ಕಿಚ್ಚು ಸುತ್ತಿಕೊಳ್ಳುತ್ತಿದೆ. ಮಾಂಸದೂಟ ಪ್ರಕರಣದಿಂದ ನಮಾಜ್ ಪ್ರಕರಣದವರೆಗೂ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಈ ವಿವಾದಕ್ಕೆ ಭಜರಂಗದಳದವೂ ಎಂಟ್ರಿಯಾಗಿದ್ದು ಅಪವಿತ್ರಗೊಂಡಿರುವ ಸ್ಥಳದಲ್ಲಿ ಹೋಮ ಮಾಡುವುದಿಲ್ಲ ಮುಂದಿನ ಜಯಂತಿಯನ್ನು ನಿಷೇಧಿತ ಸ್ಥಳದಲ್ಲೇ ಮಾಡುತ್ತೇವೆ ಎಂದು ಜಿಲ್ಲಾಧಿಕಾರಿಗೆ ಒತ್ತಾಯ ಮಾಡಿದ್ದಾರೆ.
ಭಜರಂಗದಳದಿಂದ ಜಿಲ್ಲಾಧಿಕಾರಿಗಳಿಗೆ ಒತ್ತಾಯ: ಚಿಕ್ಕಮಗಳೂರಿನ ಹಿಂದೂ-ಮುಸಲ್ಮಾನರ ವಿವಾದಾತ್ಮಕ ಕೇಂದ್ರ ಶ್ರೀ ಗುರು ದತ್ತಾತ್ರೇಯ ಬಾಬಾಬುಡನ್ ದರ್ಗಾ. ಹಿಂದೂ, ಮುಸ್ಲಿಮರ ವಿವಾದಿತ ಕೇಂದ್ರ. ಹಲವು ದಶಕಗಳಿಂದ ವಿವಾದದ ಸ್ವರೂಪವನ್ನು ಪಡೆದುಕೊಂಡಿದೆ. ಪೂಜಾ ವಿವಾದ ದಿಂದ ಹಿಡಿದು ಜಾಗ ವಿವಾದವೂ ಕೋರ್ಟ್ ಹಂತದಲ್ಲಿ ವಿಚಾರಣೆ ನಡೆಯುತ್ತಿದೆ. ಅರ್ಚಕರ ನೇಮಕ ವಿಚಾರವಾಗಿ ಸರ್ಕಾರದ ಉಪಸಮಿತಿಯ ಹಂತದಲ್ಲಿ ಇದೆ. ಇದರ ನಡುವೆ ಇದೀಗ ದತ್ತಪೀಠದಲ್ಲಿ ಕಳೆದ 15ದಿನಗಳಿಂದ ಸಾಕಷ್ಟು ವಿವಾದಗಳಿಂದ ಚರ್ಚೆಗೆ ಗ್ರಾಸವಾಗಿದೆ.
Vijayapura ಮಕ್ಕಳ ಮಾರಾಟ ಜಾಲ ಸಕ್ರಿಯ, ಮತ್ತೆ ಮುನ್ನಲೆಗೆ ಜಯಮಾಲಾ ಕೇಸ್
ದತ್ತಪೀಠದ ತಾತ್ಕಲಿಕ ಶೆಡ್ ನಲ್ಲಿ ಮಾಂಸದೂಟ ಜೊತೆಗೆ ಗೋರಿಗಳಿಗೆ ಪೂಜೆ ಮಾಡಿದ ಪ್ರಕರಣ ವೈರಲ್ ವಿಡಿಯೋ ಹಿಂದೂ ಸಂಘಟನೆ ಮುಖಂಡರ ಕೆಂಗಣ್ಣಿಗೆ ಗುರಿಯಾಗಿತ್ತು. ಜಿಲ್ಲಾಡಳಿತದ ವಿರುದ್ದ ಕಿಡಿಕಾರಿದ್ದ ಸಂಘಟನೆ ಮುಖಂಡರು ದತ್ತಜಯಂತಿ ಸಮಯದಲ್ಲಿ ಹೋಮ ಹವನ ನಡೆಸುವ ಸ್ಥಳ ಅಪವಿತ್ರಗೊಂಡಿದೆ ಎಂದು ಕಿಡಿಕಾರಿದ್ದರು. ತದನಂತರ ಎಚ್ಚೇತಗೊಂಡ ಜಿಲ್ಲಾಡಳಿತ ದತ್ತಪೀಠದ ತಾತ್ಕಲಿಕ ಶೆಡ್ ನನ್ನು ಬಂದ್ ,ಕ್ಲೀನ್ ಮಾಡಿತ್ತು. ಶ್ರೀ ರಾಮಸೇನೆಯ ಸಂಘಟನೆ ಮುಖಂಡರು ಕೂಡ ಅಪವಿತ್ರಗೊಂಡಿದೆ ಎಂದು ಆಕ್ರೋಶ ಹೊರಹಾಕಿ ಗೋ ಮೂತ್ರ ಹಾಕಿ ಸ್ವಚ್ಚತಾ ಕಾರ್ಯ ವನ್ನು ಮಾಡಿದ್ದರು.
ಇದಾದ ಬಳಿಕ ಮತ್ತೊಂದು ವಿಡಿಯೋ ಸಾಕಷ್ಟು ವಿವಾದಕ್ಕೆ ಎಡೆಮಾಡಿಕೊಟ್ಟಿತು. ದತ್ತಪೀಠದ ನಿಷೇಧದ ಪ್ರದೇಶ ಎನ್ನಲಾದ ಸ್ಥಳದಲ್ಲಿ ನಮಾಜ್ ಪ್ರಕರಣ ವಿವಾದದ ಕಿಡಿ ಹೊತ್ತಿಸಿತು. ಅಲ್ಲದೆ ಜಿಲ್ಲಾಡಳಿತ ವಿರುದ್ದ ಹಿಂದೂಪರ ಸಂಘಟನೆ ಮುಖಂಡರು ಆಕ್ರೋಶ ಹೊರಹಾಕಿದರು. ಇದಕ್ಕೆ ಜಿಲ್ಲಾಧಿಕಾರಿ ಕೆ ಎಸ್ ರಮೇಶ್ ಪ್ರತಿಕ್ರಿಯೆ ನೀಡಿ ನಮಾಜ್ ಮಾಡಿರುವ ವಿಡಿಯೋ ಬಗ್ಗೆ ತನಿಖೆ ನಡೆಸಲಾಗುವುದು ಅಲ್ಲದೆ ನಿಷೇಧಿತ ಸ್ಥಳದಲ್ಲಿ ನಮಾಜ್ ನಡೆದಿಲ್ಲ ಎನ್ನುವ ಹೇಳಿಕೆಯನ್ನು ನೀಡಿದ್ದರು.
ದತ್ತಪೀಠದಲ್ಲಿ ವಿವಾದ ಮೇಲೆ ವಿವಾದ , ಭಜರಂಗದಳ ಎಂಟ್ರಿ
ದತ್ತಪೀಠದಲ್ಲಿ ದಿನದಿಂದ ದಿನಕ್ಕೆ ವಿವಾದದ ಮೇಲೆ ವಿವಾದ ಸುತ್ತಿಕೊಳ್ಳುತ್ತಿದೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಇದೀಗ ರಾಜ್ಯ ಭಜರಂಗದಳವೂ ಎಂಟ್ರಿ ಆಗಿದೆ. ದತ್ತಪೀಠದಲ್ಲಿ ನಮಾಜ್, ಮಾಂಸದೂಟ ಪ್ರಕರಣದ ಬಗ್ಗೆ ರಾಜ್ಯ ಜರಂಗದಳದಿಂದ ಮುಖಂಡರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಈ ಎಲ್ಲಾ ಪ್ರಕರಣಗಳ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಡಿಸಿಗೆ ಮನವಿಯನ್ನು ಭಜರಂಗದಳ ಮುಖಂಡರು ಸಲ್ಲಿಸಿದ್ದಾರೆ. ದತ್ತಪೀಠದಲ್ಲಿ ಅಪವಿತ್ರಗೊಳಿಸಿದವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯ ಮಾಡಿರುವ ಮುಖಂಡರು ತನಿಖೆ ನಡೆಸಿ ಶೀಘ್ರವಾಗಿಯೇ ವರದಿ ಆಧಾರ ಮೇಲೆ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.
Hubballi Crime ಗುಟ್ಕಾ ಕೊಡಿಸದ್ದಕ್ಕೆ ಸ್ನೇಹಿತನನ್ನೆ ಮುಗಿಸಿದ ರೌಡಿ ಶೀಟರ್!
ಅಲ್ಲದೆ ಮುಂದಿನ ದತ್ತಜಯಂತಿಯನ್ನು ತಾತ್ಕಾಲಿಕ ಶೆಡ್ ನಲ್ಲಿ ಮಾಡುವುದಿಲ್ಲ ದತ್ತಪೀಠದ ಆವರಣದಲ್ಲಿ ಮಾಡುತ್ತೇವೆ, ತಾತ್ಕಲಿಕ ಶೆಡ್ ನಲ್ಲಿ ಮಾಂಸದೂಟ ಮಾಡಿ ಅಪವಿತ್ರಗೊಳಸಲಾಗಿದೆ. ಈ ಹಿನ್ನಲೆಯಲ್ಲಿ ಅಪವಿತ್ರಗೊಂಡಿರುವ ಸ್ಥಳದಲ್ಲಿ ದತ್ತಜಯಂತಿ ಸಮಯದಲ್ಲಿ ನಡೆಯುವ ಹೋಮ ಹವನವನ್ನ ನಡೆಸುವುದಿಲ್ಲ ಬದಲಾಗಿ ದತ್ತಪೀಠದ ತುಳಸಿಕಟ್ಟೆ ಹತ್ತಿರ ಹೋಮ ನಡೆಸಲು ಅವಕಾಶ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಜಿಲ್ಲಾಧಿಕಾರಿ ಕೆ ಎಸ್ ರಮೇಶ್ ಗೆ ಭಜರಂಗದಳದ ಸಹ ಸಂಯೋಜಕ ರಘು ನೇತೃತ್ವದಲ್ಲಿ ಮನವಿ ಸಲ್ಲಿಸಲಾಗಿದ್ದು ಭಜರಂಗದಳದ ಜಿಲ್ಲಾ ಸಂಯೋಜಕ ಶಶಾಂಕ್ ಹೆರೂರ್ ಗಜಂಗಳ ಜಿಲ್ಲಾ ಸಹ ಸಂಯೋಜಕ ಅಮಿತ್ ವಿಶ್ವ ಹಿಂದೂ ಪರಿಷತ್ ನಗರ ಅಧ್ಯಕ್ಷರು ಆಟೋ ಶಿವಣ್ಣ ಬಜರಂಗದಳ ನಗರ ಸಂಯೋಜಕ ಶ್ಯಾಮ್ ವಿ ಗೌಡ ಇತರರು ಇದ್ದರು.