ಕಲಾದಗಿಯ 2004-05ನೇ ಸಾಲಿನ SSLC ವಿದ್ಯಾರ್ಥಿಗಳಿಂದ ಅಪೂರ್ವ ಗುರುವಂದನೆ & ಸ್ನೇಹ ಸಮ್ಮಿಲನ

Published : May 18, 2026, 10:50 AM IST
SSLC Students

ಸಾರಾಂಶ

ಕಲಾದಗಿಯ ಹಣ್ಣು ಬೆಳೆಗಾರರ ವಿದ್ಯಾ ಸಂಸ್ಥೆಯ 2004-05ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು, ತಮಗೆ ಜ್ಞಾನ ನೀಡಿದ ಗುರುಗಳನ್ನು ಗೌರವಿಸಲು ಗುರುವಂದನೆ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಈ ಅಭೂತಪೂರ್ವ ಕಾರ್ಯಕ್ರಮದಲ್ಲಿ ಹಳೆಯ ವಿದ್ಯಾರ್ಥಿಗಳು ತಮ್ಮ ಗುರುಗಳಿಗೆ ಕಿರುಕಾಣಿಕೆ ನೀಡಿ ಸನ್ಮಾನಿಸಿದರು.

ಬಾಗಲಕೋಟೆ: ಅಕ್ಷರ ಜ್ಞಾನ ಕಲಿಸಿದ ಗುರುಗಳನ್ನು ಜೀವಮಾನಪೂರ್ತಿ ಮರೆಯಲು ಸಾಧ್ಯವಿಲ್ಲ. ಅಂತಹ ಶಿಕ್ಷಕರಿಗೆ ಗುರುವಂದನಾ ಕಾರ್ಯಕ್ರಮ ಆಯೋಜಿಸಿ ಕಿರು ಗುರುಕಾಣಿಕೆ ನೀಡಿ ಗೌರವಿಸಿ ಸನ್ಮಾನ ಮಾಡಿರುವುದು ಅಭೂತಪೂರ್ವ ಕಾರ್ಯಕ್ರಮ ಎಂದು ಹಣ್ಣು ಬೆಳೆಗಾರರ ಸಂಘದ ಉಪಾಧ್ಯಕ್ಷ ಎಸ್.ಬಿ. ಅಂಗಡಿ ಅಭಿಪ್ರಾಯಪಟ್ಟರು.

ಹಣ್ಣು ಬೆಳೆಗಾರರ ವಿದ್ಯಾ ಸಂಸ್ಥೆಯ 2004-05ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಂದ ವಿದ್ಯಾಸಂಸ್ಥೆಯ ಸಭಾಭವನದಲ್ಲಿ ಆಯೋಜಿಸಿದ್ದ ಗುರುವಂದನೆ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವಿದ್ಯಾ ಸಂಸ್ಥೆಯ ಅಧ್ಯಕ್ಷ ಕೆ.ಟಿ.ಪಾಟೀಲ, ಕಾರ್ಯದರ್ಶಿ ವಿ.ಜಿ.ದೇಶಪಾಂಡೆ, ಶಿಕ್ಷಕ ಎಂ.ಆರ್.ದೇಶಪಾಂಡೆ, ಶಿಕ್ಷಕ ಬಿ.ಎಲ್. ವಾಸನದ, ಎಸ್.ಎಂ. ಸೂಳಿಕೇರಿ, ಟಿ.ವಿ. ನರಸನ್ನವರ, ಎಂ.ವೈ. ಹುಲ್ಲಿಕೇರಿ, ಯು.ಎಲ್. ಕಾಂಬಳೆ, ಎಂ.ಕೆ. ಧಾರವಾಡ ಮಾತನಾಡಿದರು.

ಹಣ್ಣು ಬೆಳೆಗಾರರ ಸಂಘದ .ಕಾರ್ಯದರ್ಶಿ ಎಸ್.ಆರ್. ವಾಘ್, ಕೋಶಾಧ್ಯಕ್ಷ ಕೆ.ಎಲ್. ಬಿಲಕೇರಿ, ಹ.ಬೆ.ವಿ.ಸಂ ಅಧ್ಯಕ್ಷ ಕೆ.ಟಿ.ಪಾಟೀಲ, ಮುಖ್ಯಶಿಕ್ಷಕ ಆರ್.ವಿ.ಜಾಧವ, ಶ್ರೀಕಾಂತ ಕೆರಕಲಮಟ್ಟಿ, ಶಿಕ್ಷಕ ಆರ್.ಪಿ.ಜೋಶಿ, ಎಸ್.ಎಂ.ಕಲವಾರ್, ಪಿ.ಎಚ್.ಕವಡಿಮಟ್ಟಿ, ಯು.ಎಸ್.ರಾಜನಾಳ, ಕೆ.ಆರ್.ಜೋಶಿ, ಜಿ.ಆರ್.ಹಂಜಾಟೆ, ಜಿ.ಕೆ.ಹೊಸಮನಿ, ವಾಯ್.ಆರ್.ಮಕಾಣಿ, ಪಿ.ಆಯ್.ಕುಲಕರ್ಣಿ, ಎ.ಜಿ.ಅಚನೂರ, ಐ.ಕೆ.ಪತ್ತಾರ, ಬಿ.ಎಂ.ತೆಗ್ಗಿ, ಎಂ.ಎಂ.ಮಂಟೂರು, ಆರ್.ವಾಯ್.ವಾಸನದ ಇನ್ನಿತರರು ಇದ್ದರು.

ಮುಧೋಳ: .ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮ

ಧರ್ಮವೀರ ಛತ್ರಪತಿ ಸಂಭಾಜಿ ಮಹಾರಾಜರ ಜನ್ಮ ಜಯಂತಿ ನಿಮಿತ್ತ ಛತ್ರಪತಿ ಸಂಭಾಜಿ ಮಹಾರಾಜ ಸೇವಾ ಸಮಿತಿ ಮುಧೋಳ ವತಿಯಿಂದ ಭಾನುವಾರ ನಗರದ ಲಕ್ಷ್ಮೀ ದೇವಸ್ಥಾನದ ಸಭಾಭವನದಲ್ಲಿ ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ, ಪದವಿ, ಎಂಜಿನಿಯರಿಂಗ್ ಮತ್ತಿತರ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಮತ್ತು ರಾಜ್ಯ ಹಾಗೂ ರಾಷ್ಟ್ರಮಟ್ಟದ ಕ್ರೀಡಾಪಟುಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಇದನ್ನೂ ಓದಿ: ಓದಿದ ಶಾಲೆಗೆ 25 ವರ್ಷದ ಬಳಿಕ ಮರಳಿದ 1999-2001 ಬ್ಯಾಚ್‌ನ ವಿದ್ಯಾರ್ಥಿಗಳು: ಭಾವನಾತ್ಮಕ ಸಮಾರಂಭ

ಮುಖ್ಯ ವಕ್ತಾರರಾಗಿದ್ದ ನಂದು ಗಾಯಕವಾಡ, ಧರ್ಮವೀರ ಛತ್ರಪತಿ ಸಂಭಾಜಿ ಮಹಾರಾಜ ಸೇವಾ ಸಮಿತಿ ಮುಧೋಳ ಘಟಕದ ಅಧ್ಯಕ್ಷ ರಾಜೇಶ ಗೋರ್ಪಡೆ, ಉಪಾಧ್ಯಕ್ಷ ಪರಶುರಾಮ ನಿಗಡೆ, ಕಿಶೋರ ಕೋರ್ಪಡೆ, ವಿಠ್ಠಲ ಜಾಂಬ್ರೆ, ವಿಠ್ಠಲ ಕುಡೆ, ಪರಶುರಾಮ ಕದಂ, ಗೋವಿಂದ ಕೂಡಗ, ವಿಜಯ ಶಿಂಧೆ, ಸತೀಶ ಗೋರ್ಪಡೆ, ಸುರೇಶ ಪವಾರ್, ಸಂಜು ನಿಗಡೆ, ಸಂಜು ಗೋರ್ಪಡೆ, ಸಚಿನ್ ಗೋರ್ಪಡೆ, ಸುರೇಶ ಕೋಡಗ, ದೇವಾ ತೋರತ್‌ ಹಾಗೂ ಮಾತೆಯರು, ಹಿರಿಯರು ಉಪಸ್ಥಿತರಿದ್ದರು.

ಇದನ್ನೂ ಓದಿ: 60 ವರ್ಷದ ಬಳಿಕ ಗೆಳೆಯರ ಭೇಟಿ; ಪದವಿ ಮುಗಿದಾಗ ಇದ್ದಿದ್ದು 122, ಈಗ ಉಳಿದಿರೋದು 12 ಜನ ಮಾತ್ರ

PREV
Read more Articles on
click me!

Recommended Stories

Kodagu ಜಿಲ್ಲಾ ನ್ಯಾಯಾಲಯ ಸಂಕೀರ್ಣಕ್ಕೆ ಮತ್ತೆ ಹುಸಿ ಬಾಂಬ್ ಬೆದರಿಕೆ: ಪೊಲೀಸರು ಹೈ ಅಲರ್ಟ್
Hebbal ಟ್ರಾಫಿಕ್‌ ಕಿರಿಕಿರಿಗೆ ಮುಕ್ತಿ, ವೆಟರ್ನರಿ ಕಾಲೇಜು ಆವರಣದಲ್ಲಿ ಸುರಂಗ ಮಾರ್ಗಕ್ಕೆ ಮಣ್ಣು ಪರೀಕ್ಷೆ ಆರಂಭ