ಬಾಗಲಕೋಟೆ: ಫಲಾನುಭವಿಗಳಿಗೆ ಜಾನುವಾರು ಖರೀದಿಸಿ ಕೊಟ್ಟ ಜಿಪಂ ಸಿಇಒ

By Kannadaprabha News  |  First Published Feb 27, 2020, 2:17 PM IST

ಸಮುದಾಯ ಬಂಡವಾಳ ನಿಧಿ​ಯಿಂದ ಜಾನುವಾರು ಖರೀದಿಸಿ ಕೊಟ್ಟ ಗಂಗೂಬಾಯಿ ಮಾನಕರ| ನರೇಗಾ ಯೋಜನೆಯಡಿ ಎಮ್ಮೆ, ಆಕಳು ಮತ್ತು ಕುರಿಗಳಿಗೆ ಶೆಡ್‌ಗಳನ್ನು ನಿರ್ಮಿಸಿ ಕೊಡಲಾಗುತ್ತಿದೆ| ಗ್ರಾಮ ಪಂಚಾಯತಿಗಳ ಮೂಲಕ ಮಹಿಳಾ ಒಕ್ಕೂಟಗಳನ್ನು ರಚಿಸಲಾಗುತ್ತಿದೆ|


ಬಾಗಲಕೋಟೆ(ಫೆ.27): ಮಹಿಳೆಯರು ಸ್ವ-ಉದ್ಯೋಗ ಕೈಗೊಂಡು ಆರ್ಥಿಕವಾಗಿ ಸದೃಢಗೊಂಡು ಸ್ವಾವಲಂಬಿ ಜೀನವ ನಡೆಸಲು ಅನುಕೂಲವಾಗುವಂತೆ ಜಿಪಂ ಸಿಇಒ ಗಂಗೂಬಾಯಿ ಮಾನಕರ ಸಮುದಾಯ ಬಂಡವಾಳ ನಿಧಿ​ಯಿಂದ ಜಾನುವಾರುಗಳನ್ನು ಖರೀದಿಸಿ ಕೊಡುವ ಕೆಲಸ ಮಾಡಿದ್ದಾರೆ.

ಬಾದಾಮಿ ತಾಲೂಕಿನ ಬೇಲೂರ ಗ್ರಾಮದ ಜಾನುವಾರು ಸಂತೆಯಲ್ಲಿ ಬುಧವಾರ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದಡಿ ಮಂಗಳೂರು ಗ್ರಾಪಂ ವ್ಯಾಪ್ತಿಯಲ್ಲಿ ಬರುವ 11 ಮಹಿಳಾ ಸ್ವ-ಸಹಾಯ ಗುಂಪುಗಳಿಗೆ ಬಿಡುಗಡೆ ಮಾಡಿದ ಒಟ್ಟು 9.20 ಲಕ್ಷ ರು.ಗಳ ಸಮುದಾಯ ಬಂಡವಾಳ ನಿಧಿ​ಯಿಂದ 13 ಎಮ್ಮೆ, 13 ಆಕಳು ಮತ್ತು 35 ಆಡು ಮತ್ತು ಕುರಿಗಳನ್ನು ಖರೀದಿ ಮಾಡಿ ಕೊಡಲಾಯಿತು.

Tap to resize

Latest Videos

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇದೇ ಸಂದರ್ಭದಲ್ಲಿ ಮಾತನಾಡಿದ ಜಿಪಂ ಸಿಇಒ ಗಂಗೂಬಾಯಿ ಮಾನಕರ, ಅವರು ಗ್ರಾಮೀಣ ಭಾಗದ ಮಹಿಳೆಯರು. ಸ್ವಂತ ಉದ್ಯೋಗ ಕೈಗೊಂಡು ಆರ್ಥಿಕವಾಗಿ ಬಲಿಷ್ಠಗೊಂಡು ಸ್ವಾವಲಂಬಿ ಜೀವನ ನಡೆಸುವಂತೆ ಮಾಡುವ ನಿಟ್ಟಿನಲ್ಲಿ ಗ್ರಾಮೀಣ ಭಾಗದಲ್ಲಿ ಮಹಿಳಾ ಒಕ್ಕೂಟಗಳನ್ನು ರಚಿಸಿ ಅವುಗಳಿಗೆ ಸಮುದಾಯ ಬಂಡವಾಳ ನಿಧಿ​ಯ ಮೂಲಕ ವಿವಿಧ ಸ್ವಯಂ ಉದ್ಯೋಗ ಕೈಗೊಳ್ಳಲು ಸಹಾಯಧನ ನೀಡಾಗುತ್ತಿದೆ. ಅಲ್ಲದೇ ನರೇಗಾ ಯೋಜನೆಯಡಿ ಎಮ್ಮೆ, ಆಕಳು ಮತ್ತು ಕುರಿಗಳಿಗೆ ಶೆಡ್‌ಗಳನ್ನು ನಿರ್ಮಿಸಿ ಕೊಡಲಾಗುತ್ತಿದೆ ಎಂದರು.

ಈಗಾಗಲೇ ಜಿಲ್ಲೆಯಾದ್ಯಂತ ವಿವಿಧ ಮಹಿಳಾ ಒಕ್ಕೂಟಗಳಿಗೆ ಒಟ್ಟು 2.20 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದ್ದು, ಮಹಿಳಾ ಒಕ್ಕೂಟಗಳಿಗೆ ಬಿಡುಗಡೆ ಮಾಡಿದ ಸಹಾಯಧನವನ್ನು ಬಳಕೆ ಮಾಡಿಕೊಳ್ಳದೇ ವಿವಿಧ ತರಹದ ಉದ್ಯೋಗಗಳನ್ನು ಕೈಗೊಂಡು ಸ್ವಾವಲಂಬಿ ಜೀವನ ನಡೆಸುವಂತಾಗಬೇಕು. ಮಹಿಳೆ ಆರ್ಥಿಕವಾಗಿ ಸದೃಢರಾಗುವಂತೆ ಮಾಡುವುದೇ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಗ್ರಾಮ ಪಂಚಾಯತಿಗಳ ಮೂಲಕ ಮಹಿಳಾ ಒಕ್ಕೂಟಗಳನ್ನು ರಚಿಸಲಾಗುತ್ತಿದೆ ಎಂದರು.

ಈಗ ಖರೀದಿಸಿದ ಎಮ್ಮೆ, ಆಕಳು, ಕುರಿ ಮತ್ತು ಆಡುಗಳನ್ನು ಪಡೆದುಕೊಂಡವರು ಸಾಗಾಣಿಕೆ ಕೈಗೊಂಡು ಒಂದಕ್ಕೆ ಎರಡರಷ್ಟು ಮಾಡಬೇಕು. ಆರ್ಥಿಕವಾಗಿ ಸದೃಢವಾಗುವ ಮೂಲಕ ಇನ್ನು ಹೆಚ್ಚಿನ ವಹಿವಾಟು ಮಾಡುವಂತಾಗಬೇಕು. ಜಿಲ್ಲೆಯಲ್ಲಿ ಈಗಾಗಲೇ ನೀಡಿದ ಅನುದಾನ ಸದ್ಬಳಕೆಯಾಗಬೇಕು. ಇದಕ್ಕಾಗಿ ಸಾಕಷ್ಟು ಸಭೆಗಳನ್ನು ಮಾಡುವ ಮೂಲಕ ಸೌಲಭ್ಯಗಳ ಮಾಹಿತಿಯನ್ನು ನೀಡಲಾಗುತ್ತಿದೆ. ಇದೇ ರೀತಿ ಯಾವ ಅನುದಾನ ಪಡೆದಿದ್ದೀರಿ ಅವರು ಉದ್ಯೋಗ ಸದ್ಬಳಕೆ ಮಾಡಿಕೊಳ್ಳುವಂತೆ ಮನವಿ ಮಾಡಿಕೊಂಡಿದ್ದಾರೆ.

click me!