ಸಹಪಾಠಿಗಳ ಕಿರುಕುಳ, ಬಾಗಲಕೋಟೆಯಲ್ಲಿ ಕಾಲೇಜ್‌ ವಿದ್ಯಾರ್ಥಿನಿ ಆತ್ಮಹತ್ಯೆ!

Published : Aug 09, 2025, 10:47 AM ISTUpdated : Aug 11, 2025, 09:04 AM IST
Bagalkote Death

ಸಾರಾಂಶ

ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡದಲ್ಲಿ 21 ವರ್ಷದ ಕಾಲೇಜು ವಿದ್ಯಾರ್ಥಿನಿ ಅಂಜಲಿ ಸಹಪಾಠಿಗಳ ಮಾನಸಿಕ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಡೆತ್ ನೋಟ್‌ನಲ್ಲಿ ಸಹಪಾಠಿಗಳ ಹೆಸರು ಉಲ್ಲೇಖಿಸಿದ್ದಾರೆ.

ಬಾಗಲಕೋಟೆ (ಆ.9): ಸಹಪಾಠಿಗಳ ಮಾನಸಿಕ ಕಿರುಕುಳಕ್ಕೆ ಬೇಸತ್ತ ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡದ 21 ವರ್ಷದ ಕಾಲೇಜು ವಿದ್ಯಾರ್ಥಿನಿ ಅಂಜಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ತಮ್ಮ ಸಾವಿಗೆ ಕಾರಣರಾದ ಮೂವರ ಹೆಸರನ್ನು ಬರೆದಿಟ್ಟಿರುವ ಡೆತ್ ನೋಟ್ ಕೂಡ ಪತ್ತೆಯಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಗುಳೇದಗುಡ್ಡದ ನಿವಾಸಿಯಾಗಿರುವ ಅಂಜಲಿ, ಬಿಎ ನಾಲ್ಕನೇ ಸೆಮಿಸ್ಟರ್‌ನಲ್ಲಿ ಓದುತ್ತಿದ್ದರು. ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಗುಳೇದಗುಡ್ಡ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ಪೊಲೀಸರಿಗೆ ಲಭ್ಯವಾಗಿರುವ ಡೆತ್ ನೋಟ್‌ನಲ್ಲಿ ಅಂಜಲಿ, 'ನನ್ನ ಸಾವಿಗೆ ಕಾರಣವಾದ ಈ ಮೂವರು ವ್ಯಕ್ತಿಗಳು ನನ್ನ ಬದುಕಿನಲ್ಲಿ ಪರಿಣಾಮವನ್ನು ಬೀರಿದ್ದಾರೆ. ಅವರುಗಳೆಂದರೆ ವರ್ಷಾ, ಪ್ರದೀಪ್‌ ಮತ್ತು ಇನ್ನಿತರ ಸ್ನೇಹಿತರು. ನನ್ನ ಬಗ್ಗೆ, ನನ್ನನ್ನು ಮಾನಸಿಕವಾಗಿ ಕುಗ್ಗಿಸಿದ್ದಾರೆ ಮತ್ತು ಅವರು ನನ್ನ ಬದುಕಿನ ಮಾರಕ ವ್ಯಕ್ತಿಗಳಾಗಿರುತ್ತಾರೆ. ಇವರನ್ನು ಸುಮ್ಮನೆ ಬಿಡಬಾರದು. ಸೈನಿಂಗ್‌ ಗುಡ್‌ ಬಾಯ್‌' ಎಂದು ಅಂಜಲಿ ತಮ್ಮ ಡೆತ್‌ನೋಟ್‌ನಲ್ಲಿ ಬರೆದಿದ್ದಾರೆ.

ಈ ಘಟನೆಯ ಕುರಿತು ಗುಳೇದಗುಡ್ಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಡೆತ್ ನೋಟ್‌ನಲ್ಲಿ ಉಲ್ಲೇಖವಾಗಿರುವ ವ್ಯಕ್ತಿಗಳ ಬಗ್ಗೆ ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ಆತ್ಮಹತ್ಯೆ ಯಾವುದೇ ಸಮಸ್ಯೆಗೆ ಪರಿಹಾರವಲ್ಲ. ನೀವು ಮಾನಸಿಕ ಒತ್ತಡ ಅಥವಾ ಆಲೋಚನೆಗಳಿಂದ ಬಳಲುತ್ತಿದ್ದರೆ. ಕೇಂದ್ರ ಸರ್ಕಾರದ ಟೆಲಿ ಮಾನಸ್‌ಗೆ ಕರೆ ಮಾಡಿ. ಟೆಲಿ ಮಾನಸ್ ಒಂದು ಸಮಗ್ರ ಮಾನಸಿಕ ಆರೋಗ್ಯ ರಕ್ಷಣಾ ಸೇವೆಯಾಗಿದೆ. ಅಲ್ಲಿನ ಕೌನ್ಸಿಲರ್‌ರನ್ನು ಸಂಪರ್ಕಿಸಲು ಕೆಳಗಿನ ಟೋಲ್-ಫ್ರೀ ಸಂಖ್ಯೆಗಳಾದ 14416 ಅಥವಾ 18008914416ಗೆ ಕರೆ ಮಾಡಿ.

 

PREV
Read more Articles on
click me!

Recommended Stories

ಪಬ್‌ನಲ್ಲಿ ಶಾರುಖ್ ಪುತ್ರನ ದುರ್ವರ್ತನೆ ಕೇಸ್: ಆರ್ಯನ್ ಖಾನ್ ಸೇರಿ ಮೂವರ ವಿರುದ್ಧ ಹಿಂದೂ ಮುಖಂಡನಿಂದ ದೂರು
Namma Metro Update: ಕೆಂಗೇರಿ ಮೆಟ್ರೋ ದುರಂತ; ಮೃತರ ಗುರುತು ಪತ್ತೆ, ಸಂಚಾರ ಸಹಜ ಸ್ಥಿತಿಗೆ!