ಬಾಗಲಕೋಟೆ ಸಾಲಗಾರರಿಂದ ತಪ್ಪಿಸಿಕೊಳ್ಳಲು ಹೆಂಡತಿ ಬುರ್ಖಾ ಧರಿಸಿ ಓಡಾಟ

Published : Jan 28, 2025, 03:23 PM IST
ಬಾಗಲಕೋಟೆ ಸಾಲಗಾರರಿಂದ ತಪ್ಪಿಸಿಕೊಳ್ಳಲು ಹೆಂಡತಿ ಬುರ್ಖಾ ಧರಿಸಿ ಓಡಾಟ

ಸಾರಾಂಶ

ಬಾಗಲಕೋಟೆಯಲ್ಲಿ ವ್ಯಕ್ತಿಯೊಬ್ಬ ಸಾಲಗಾರರಿಂದ ತಪ್ಪಿಸಿಕೊಳ್ಳಲು ಹೆಂಡತಿಯ ಬುರ್ಖಾ ಧರಿಸಿ ಓಡಾಡುತ್ತಿದ್ದ. ಸಾಲಗಾರರು ಆತನನ್ನು ಹಿಡಿದು ಥಳಿಸಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಬಾಗಲಕೋಟೆ (ಜ.28): ನಮ್ಮ ಮನೆಯಲ್ಲಿ ಕಷ್ಟ ಇದೆ ಎಂದು ಹೇಳಿಕೊಂಡ ವ್ಯಕ್ತಿ ಹಲವು ಜನರಿಂದ ಲಕ್ಷಾಂತರ ರೂ. ಸಾಲವನ್ನು ಪಡೆದುಕೊಂಡಿದ್ದಾನೆ. ನಂತರ, ಮೈತುಂಬಾ ಸಾಲ ಹೆಚ್ಚಾದ ನಂತರ, ಸಾಲಗಾರರಿಂದ ತಪ್ಪಿಸಿಕೊಳ್ಳಲು ಹೆಂಡತಿಯ ಬುರ್ಖಾ ಧರಿಸಿ ಓಡಾಡುತ್ತಿದ್ದವನನ್ನು ಹಿಡಿದು ಗೂಸಾ ಕೊಟ್ಟಿದ್ದಾರೆ.

ಸಾಲಗಾರರಿಂದ ತಲೆ ಮರೆಸಿಕೊಂಡು ಬೂರ್ಖಾ ಧರಿಸಿ ವ್ಯಕ್ತಿ ಓಡಾಟ. ಸಾಲ ಕೊಟ್ಟವರಿಗೆ ತನ್ನ ಗುರುತು ಸಿಗದಂತೆ ಹೆಂಡತಿಯ ಬುರ್ಖಾ ಧರಿಸಿಕೊಂಡು ವೇಷ ಬದಲಿಸಿ ಓಡಾಡುತ್ತಿದ್ದನು. ಸಾಲ ಕೊಟ್ಟವರು ಈತನ ಮನೆಯ ಬಳಿ ಬಂದು ಹುಡುಕಿದರೂ ಈತ ಮಾತ್ರ ಸಿಗುತ್ತಿರಲಿಲ್ಲ. ರಾತ್ರಿವರೆಗೆ ಮನೆ ಬಾಗಿಲ ಬಳಿ ಕಾಯುತ್ತಾ ಕುಳಿತರೀ ಬರುತ್ತಿರಲಿಲ್ಲ. ಆದರೆ, ಬಿರ್ಖಾ ಧರಿಸಿ ಅವರ ಮನೆಯೊಳಗೆ ಮಹಿಳೆಯರು ಓಡಾಡುವುದನ್ನು ನೋಡಿದ್ದಾರೆ. ಆಗ ಮನೆಯಲ್ಲಿದ್ದ ಎಲ್ಲರನ್ನೂ ಪರಿಶೀಲನೆ ಮಾಡಿದರೂ ಸಿಕ್ಕಿಲ್ಲ. ಊರಿನಲ್ಲಿ ಸಾಲ ಪಡೆದವನಿಗಾಗಿ ಹುಡುಕಿದರೂ ಸಿಗದ ಕಾರಣ ತುಂಬಾ ಕೋಪಗೊಂಡಿದ್ದಾರೆ. ಆದರೆ, ಸಾಲ ಪಡೆದ ವ್ಯಕ್ತಿ ಮಾತ್ರ ಹೆಂಡತಿಯ ಬುರ್ಖಾ ಧರಿಸಿ ನಿರ್ಭಯವಾಗಿ ಎಲ್ಲೆಡೆ ಓಡಾಡಿಕೊಂಡಿದ್ದಾನೆ.

ಅಹ್ಮದ್ ಜನಮ್‌ಸಾಗರ್ ಎಂಬ ವ್ಯಕ್ತಿಯೇ ಸಾಲಗಾರನಾಗಿದ್ದು, ತನಗೆ ಕೊಟ್ಟ ಸಾಲವನ್ನು ವಾಪಸ್ ಕೊಡದೇ ಬುರ್ಕಾ ಹಾಕಿಕೊಂಡು ಓಡಾಡುತ್ತಿದ್ದನು. ಈ ಘಟನೆ ಬಾಗಲಕೋಟೆಯ ನವನಗರದ ಸೆಕ್ಟರ್ ನಂಬರ್ 47ರಲ್ಲಿ ಘಟನೆ. ಇದೀಗ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಾಲಗಾರರ ಬಳಿ ಲಕ್ಷಾಂತರ ರೂ ಸಾಲ ಪಡೆದು, ಅವರಿಗೆ ಸಿಗದೇ ಓಡಾಡುತ್ತಿದ್ದನು. ಸಾಲಾಗಾರರು ಅಹ್ಮದ್ ಮನೆಗೆ ಹೋದಾಗ, ಬುರ್ಕಾ ಹಾಕಿಕೊಂಡು ವೇಶ ಬದಲಿಸಿಕೊಂಡು ತಲೆ ಮರೆಸಿಕೊಂಡಿದ್ದಾನೆ ಎಂದು ತಿಳಿಸಿದೆ.

ಇದನ್ನೂ ಓದಿ: 35 ಜನರ ಆಧಾರ್ ಕಾರ್ಡ್ ಮೇಲೆ ಮೈಕ್ರೋ ಫೈನಾನ್ಸ್ ಸಾಲ ಪಡೆದು ಪರಾರಿಯಾದ ದಂಪತಿ!

ಆಗ ಸಾಲ ಕೊಟ್ಟವರು ಮನೆಯೊಳಗೆ ಬುರ್ಖಾ ಹಾಕಿಕೊಂಡು ಓಡಾಡುತ್ತಿದ್ದ ಅಹ್ಮದ್ ಅವರನ್ನ ಮನೆಯಿಂದ ಹೊರಗಡೆ‌ ಎಳೆದುಕೊಂಡು ಬಂದು ಬುರ್ಕಾ ಕಳಚಿದ್ದಾರೆ. ನಂತರ, ತಾವು ಕೊಟ್ಟ ಸಾಲವನ್ನು ವಾಪಸ್ ಕೊಡದೇ ಸತಾಯಿಸಿ ವೇಷ ಬದಲಿಸಿಕೊಂಡು ಓಡಾಡಿದ್ದಕ್ಕೆ ಸಿಟ್ಟಿಗೆದ್ದು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಬಾಗಲಕೋಟೆಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಆದರೆ, ಪೊಲೀಸ್ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ.

PREV
Read more Articles on
click me!

Recommended Stories

ದುಬಾರೆ ಶಿಬಿರದಲ್ಲಿ ಕಳೆದ 10 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ತಕ್ಷ ಹೆಸರಿನ ಆನೆ ಸಾವು
ಕಾರಲ್ಲ, ಸರ್ಕಾರ ಕೆಲಸಕ್ಕೆ ಓಡಾಡಲು ಹೆಲಿಕಾಪ್ಟರ್, ವಿಮಾನ ಖರೀದಿಗೆ ಡಿಕೆಶಿ ನೇತೃತ್ವದಲ್ಲಿ ಸಭೆ