ಬಾಗಲಕೋಟೆ ಕುಡಚಿ ರೈಲು ಮಾರ್ಗ 2027ಕ್ಕೆ ಪೂರ್ಣ: ಕೇಂದ್ರ ಸಚಿವ ಸೋಮಣ್ಣ

By Kannadaprabha News  |  First Published Jan 15, 2025, 10:10 AM IST

ಬಾಗಲಕೋಟೆ-ಕುಡಚಿ ರೈಲು ಮಾರ್ಗದ ಖಜ್ಜಿಡೋಣಿ ನಿಲ್ದಾಣದ ಬಳಿ ಮಂಗಳ ವಾರ ಕಾಮಗಾರಿ ವೀಕ್ಷಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಮಾರ್ಗದ ಒಟ್ಟು ಕಾಮಗಾರಿ ವೆಚ್ಚ ₹1650 ಕೋಟಿ ಆಗಲಿದ್ದು ಸದ್ಯ ಶೇ.35ರಷ್ಟು ಕಾಮಗಾರಿ ಪೂರ್ಣಗೊಂಡಿದೆ ಎಂದು ತಿಳಿಸಿದ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ


ಬಾಗಲಕೋಟೆ(ಜ.15):  ಬಹುನಿರೀಕ್ಷಿತ ಬಾಗಲಕೋಟೆ ಕುಡಚಿ ರೈಲು ಮಾರ್ಗವನ್ನು 2027ರ ಮಾರ್ಚ್ ಅಂತ್ಯಕ್ಕೆ ಪೂರ್ಣಗೊ ಳಿಸುವುದಾಗಿ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ವಿಶ್ವಾಸ ವ್ಯಕ್ತಪಡಿಸಿದರು.  ಜಿಲ್ಲೆಯಲ್ಲಿ ಬಾಗಲಕೋಟೆ-ಕುಡಚಿ ರೈಲು ಮಾರ್ಗದ ಖಜ್ಜಿಡೋಣಿ ನಿಲ್ದಾಣದ ಬಳಿ ಮಂಗಳ ವಾರ ಕಾಮಗಾರಿ ವೀಕ್ಷಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಮಾರ್ಗದ ಒಟ್ಟು ಕಾಮಗಾರಿ ವೆಚ್ಚ ₹1650 ಕೋಟಿ ಆಗಲಿದ್ದು ಸದ್ಯ ಶೇ.35ರಷ್ಟು ಕಾಮಗಾರಿ ಪೂರ್ಣಗೊಂಡಿದೆ ಎಂದು ಸಚಿವರು ತಿಳಿಸಿದರು. 

ಪ್ರಸಕ್ತ ಬಜೆಟ್‌ನಲ್ಲಿ ಈ ವರ್ಷ ಈ ಕಾಮಗಾರಿಗೆ ₹140 ಕೋಟಿ ಹಣವನ್ನು ಮೀಸಲಿಡಲಿದ್ದು ಈಗಾಗಲೇ ಬಾಗಲಕೋಟೆಯಿಂದ ಖಜ್ಜಿಡೋಣಿವರೆಗೆ ಕಾಮಗಾರಿ ಪೂರ್ಣಗೊಂಡು ಮಾರ್ಚ್ ಅಂತ್ಯಕ್ಕೆ ಲೋಕಾಪೂರದವರೆಗೆ ಪೂರ್ಣಗೊಳ್ಳಲಿದೆ. ಈ ವರ್ಷ ಲೋಕಾಪೂರದಿಂದ ಯಾದವಾಡದವರೆಗೆ 23 ಕಿಮೀ ರೈಲು ಮಾರ್ಗ ನಿರ್ಮಾಣಗೊಂಡು 2025ರ ಸೆಪ್ಟೆಂಬರರ್‌ವರೆಗೆ ಮುಕ್ತಾಯಗೊಳ್ಳಲಿದೆ ಎಂದರು. 

Tap to resize

Latest Videos

ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಉದ್ಯೋಗಾವಕಾಶಕ್ಕೆ ಕ್ರಮ: ಕೇಂದ್ರ ಸಚಿವ ವಿ.ಸೋಮಣ್ಣ

ಬಾಗಲಕೋಟೆ ಬೆಳಗಾವಿ ಸಂಪರ್ಕ ಕಲಿಸುವ ರೈಲ್ವೆ ಮಾರ್ಗ ಈವರೆಗೆ ಇರಲಿಲ್ಲ. ಬೆಳಗಾವಿ ಸಂಪರ್ಕಿಸಲು ಬಾಗಲಕೋಟೆಯಿಂದ ಗದಗ- ಹುಬ್ಬಳ್ಳಿ- ಧಾರವಾಡ ರೈಲ್ವೆ ಮಾರ್ಗವನ್ನು ಅವಲಂಬಿಸಬೇಕಿತ್ತು. ನಿಗದಿತ ಸಮಯದಲ್ಲಿ ಬಾಗಲಕೋಟೆ ಕುಡಚಿ ಮಾರ್ಗ ಪೂರ್ಣಗೊಂಡರೆ ಕೈಗಾರಿಕೆ ಹಾಗೂ ವಾಣಿಜ್ಯ ಕ್ಷೇತ್ರವನ್ನು ವಿಸ್ತರಿಸಬಹುದಾಗಿದೆ ಎಂದು ತಿಳಿಸಿದರು.

ಲೋಕಾಪೂರಕ್ಕೆ ಪ್ಯಾಸೆಂಜರ್‌ ರೈಲು: 

ಬಾಗಲಕೋಟೆಯಿಂದ ಲೋಕಾಪೂರವರೆಗೆ ರೈಲ್ವೆ ಮಾರ್ಗ ಪೂರ್ಣಗೊಂಡಿರುವುದರಿಂದ ಪ್ರಯಾಣಿಕರ ಅನುಕೂಲಕ್ಕಾಗಿ ಪ್ರತಿನಿತ್ಯ ಬೆಳಗ್ಗೆ ಹಾಗೂ ಸಾಯಂಕಾಲ ಪ್ಯಾಸೆಂಜರ ರೈಲನ್ನು ಆರಂಭಿಸುವ ಕುರಿತು ಇಲಾಖೆ ಚಿಂತನೆ ನಡೆಸಿದ್ದು, ಸದ್ಯದಲ್ಲಿಯೇ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಸಚಿವ ಸೋಮಣ್ಣ ತಿಳಿಸಿದರು. 

ವಂದೇ ಮಾತರಂ ರೈಲು ಓಡಿಸುವ ಚಿಂತನೆ: 

ದೇಶಾದ್ಯಂತ ಈಗಾಗಲೇ ಸಂಪರ್ಕ ಸಾಧಿಸುತ್ತಿರುವ ವಂದೇ ಮಾತರಂ ರೈಲನ್ನು ಬಾಗಲಕೋಟೆ ಮಾರ್ಗದಲ್ಲಿ ಆರಂಭಿಸಲು ಹಲವು ತಾಂತ್ರಿಕ ಸಮಸ್ಯೆಗಳಿದೆ. ಉದಾಹರಣೆಗೆ ವೇಗದ ಮಿತಿಗೆ ಹಾಗೂ ವೇಗವನ್ನು ತಡೆದುಕೊಳ್ಳುವ ಸಾಮರ್ಥ ಈ ಮಾರ್ಗದ ರೈಲು ಹಳಿಗಳಿಗೆ ಸಾಧ್ಯತೆ ಕುರಿತು ಪರಿಶೀಲಿಸಿ ಸೂಕ್ತ ತಂತ್ರಜ್ಞಾನದ ಅಳವಡಿಕೆ ನಂತರ ವಂದೇದೆ ಮಾತರಂ ರೈಲನ್ನು ಓಡಿಸುವ ಕುರಿತು ನಿರ್ಧಾರ ಕೈಗೊಳ್ಳುವುದಾಗಿ ಸಚಿವರು ತಿಳಿಸಿದರು. 
ಈ ಸಂದರ್ಭದಲ್ಲಿ ಸಂಸದ ಪಿ.ಸಿ.ಗದ್ದಿಗೌಡರ, ಜಿಲ್ಲಾಧಿಕಾರಿ ಜಾನಕಿ, ಶಾಸಕರಾದ ಸಿದ್ದು ಸವದಿ, ಬಿಜೆಪಿ ಜಿಲ್ಲಾಧ್ಯಕ್ಷಶಾಂತಗೌಡ ಪಾಟೀಲ ಸೇರಿದಂತೆ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಇನ್ನು 3 ತಿಂಗಳು ತಡ್ಕೊಳ್ಳಿ, ಸರ್ಕಾರದ ಬಗ್ಗೆ ತಿಳಿಯುತ್ತೆ: ಸಚಿವ ವಿ.ಸೋಮಣ್ಣ

ಬಾಗಲಕೋಟೆ: ಇನ್ನು 3 ತಿಂಗಳು ತಡ್ಕೊಳಯ್ಯೋ, ಸರ್ಕಾರದ ಬಗ್ಗೆ ನಿಮಗೆ ತಿಳಿಯುತ್ತೆ. ನಾವೇನು ಹೇಳಬೇ ಕಾಗಿಲ್ಲ, ಜನಾನೇ ಸರ್ಕಾರದ ಬಗ್ಗೆ ಹೇಳಿದಾರೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ. 
ಜಿಲ್ಲೆಯ ಖಜ್ಜಿಡೋಣಿ ಗ್ರಾಮದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವೇನು ಹೇಳಬೇಕಾ ಗಿಲ್ಲ. ಜನಾನೇ ಸರ್ಕಾರದ ಬಗ್ಗೆ ಹೇಳುತ್ತಿದಾರೆ ಎಂದ ಅವರು, ಹಾಗಾದ್ರೆ ಮೂರು ತಿಂಗಳ ನಂತರ ಸರ್ಕಾರ ಇರಲ್ಲ ಅಂತಾನಾ ಅರ್ಥ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಚಿವರು. ನಾನು ಆ ರೀತಿ ಹೇಳಿಲ್ಲ. ನಾನು ಮೂರು ತಿಂಗಳು ನೋಡ್ರಿ ಅಂದಷ್ಟೇ ಹೇಳಿದೆ ಎಂದು ಸ್ಪಷ್ಟನೆ ನೀಡಿದರು.

ಮಾರ್ಚ್‌ನಲ್ಲಿ ಬೆಂಗಳೂರಿನಿಂದ ತಿಪಟೂರಿಗೆ ಮೆಮೊ ರೈಲು: ಕೇಂದ್ರ ಸಚಿವ ವಿ.ಸೋಮಣ್ಣ

ನಾನು ಬೇರೆಯವರ ಹಾಗೇ ಮಾತನಾಡಲ್ಲ, ಯಾಕೆ ಹೇಳ್ತಿನಿ ಅಂದ್ರೆ ಒಂದು ರೀತಿ ಅಸ ಹೈ, ಅಲರ್ಜಿ, ಬೇಸರ ಈ ಸರ್ಕಾರದ ಬಗ್ಗೆ ಬಂದಿದೆ. ನಮ್ಮ ಸರ್ಕಾರ ಈಗಿನ ಸರ್ಕಾರ ನೋಡಿದರೆ, ಮೋದಿ ಅವರ ಕಾರ್ಯವೈಖರಿ, ದೇಶದ ಬಗ್ಗೆ ಇರುವ ಕಾಳಜಿ ಒಂದು ಪರ್ಸೆಂಟ್ ಇವರಲ್ಲಿ ಇಲ್ಲ. ಈ ಸರ್ಕಾರದವರು ಏನು ಮಾಡಿದ್ದಾರೆ ಎಂದು ಪ್ರಶ್ನೆ ಮಾಡಿದರು. ಸಿಎಂ ಕುರ್ಚಿ ವಿಚಾರದ ಕುರಿತು ಮಾತನಾಡಿ, ಯಾರ ಸಿಎಂ, ಯಾರ ಮಂತ್ರಿನೋ, ಈ ಸರ್ಕಾರ ಏನಾಗಿದೆ ಅಂತಾ ನಂಗೆ ಒಂದು ಗೊತ್ತಾಗುತ್ತಿಲ್ಲ. ಒಂದಂತೂ ಸತ್ಯ, ಈ ಸರ್ಕಾರಕ್ಕೆ ಕಿವಿ, ಬಾಯಿ ಇಲ್ಲ. ಎಲ್ಲವೂ ಮುಗಿದು ಹೋಗಿದೆ. ಈ ಸರ್ಕಾರ ಅಸ್ತಿಪಂಜರ ವಾಗಿದೆ. ಅಸ್ಥಿಪಂಜರಯಾವತ್ತೂ ಸುಟ್ಟೋಗದೋ ಗೊತ್ತಿಲ್ಲ ಎಂದು ಮಾರ್ಮಿಕವಾಗಿ ನುಡಿದರು. 

ನಾನು ಸಿಎಂ ಸಿದ್ದರಾಮಯ್ಯ ಜೊತೆ ಮಂತ್ರಿ ಆಗಿ ಕೆಲಸ ಮಾಡಿದ್ದೇನೆ. ಸಿಎಂ ಸಿದ್ದರಾಮಯ್ಯ ಅವರ 5 ವರ್ಷದ ಹಿಂದಿನ ಆಡಳಿತ ನೋಡಿದ್ದೇನೆ. ಇವತ್ತಿನ ಆಡಳಿತ ಇದು ನನಗೆ ಮಾನಸಿಕವಾಗಿ ಅವರು ಸಿಎಂ ಕಾರ್ಯವೈಖರಿ ಇದೇನಾ ಎನ್ನುವಂತಾಗಿದೆ. ಅಲ್ಲಾರಿ ಈ ಸರ್ಕಾರದಲ್ಲಿ ಯಾವ ಅಧಿಕಾರಿಗೆ ಬೆಲೆ ಇದೆ ಅಂದುಕೊಂಡಿದ್ದೀರಿ? ಅವರು ಯಾವದನ್ನು ತಲೆಯಲ್ಲಿ ಹಿಡಿದುಕೊಂಡು ಅಧಿಕಾರ ನಡೆಸ್ತಿದ್ದಾರೆ. ಸರ್ಕಾರ ಇದೆಯಾ ರಾಜ್ಯದಲ್ಲಿ? ನನಗಂತೂ ರಾಜ್ಯದಲ್ಲಿ ಸರ್ಕಾರ ಇದೆ ಅಂತಾ ಅನಿಸಿಲ್ಲ ಎಂದು ಹೇಳಿದರು.

click me!