ಬೆಂಗಳೂರು: ಮೆಟ್ರೋ ನೇರಳೆ ಮಾರ್ಗಕ್ಕೆ ಚೀನಾದಿಂದ ಬಂತು ಮೊದಲ ರೈಲು

By Kannadaprabha News  |  First Published Jan 15, 2025, 9:39 AM IST

ಈ ರೈಲು ಪ್ರಯಾಣಿಕ ಸೇವೆಗೆ ಒದಗಲು ಕನಿಷ್ಠ 6 ತಿಂಗಳು ತಗುಲಲಿದೆ. ಯಾವುದೇ ಹೊಸ ಮಾದರಿ ರೈಲು ಬಂದರೂ ಕೂಡ ಸಂಚಾರಕ್ಕೆ ಮೊದಲು ಆರ್ ಡಿಎಸ್‌ಒ (ರಿಸರ್ಚ್ ಡಿಸೈನ್ ಆ್ಯಂಡ್ ಸ್ಟ್ಯಾಂಡರ್ಡ್ಸ್ ಆರ್ಗನೈಸೇಶನ್) ಪ್ರಮಾಣ ಪತ್ರ ಅಗತ್ಯ. 


ಬೆಂಗಳೂರು(ಜ.15):  ನಮ್ಮ ಮೆಟ್ರೋ ನೇರಳೆ ಮಾರ್ಗಕ್ಕಾಗಿ ಚೀನಾದ ಸಿಆರ್ ಆರ್‌ಸಿ (ಚೀನಾ ರೈಲ್ವೆ ರೋಲಿಂಗ್ ಸ್ಟಾಕ್ ಕಾರ್ಪೊರೇಷನ್) ನಿರ್ಮಿತ 6 ಬೋಗಿಗಳ ಮೊದಲ ರೈಲು (ಪ್ರೊಟೊಟೈಪ್) ಬಂದಿದ್ದು, ಪೀಣ್ಯ ಮೆಟ್ರೋ ಡಿಪೋದಲ್ಲಿ ಇದನ್ನು ಜೋಡಿಸಿ ಕೊಂಡು ಪರೀಕ್ಷಾರ್ಥ ಟ್ರ್ಯಾಕ್‌ಗೆ ಸ್ಥಳಾಂತರಿಸಲಾಗಿದೆ. 

ನಮ್ಮ ಮೆಟ್ರೋದಲ್ಲಿ ರೈಲುಗಳ ಕೊರತೆ ನೀಗಿಸುವ, ಪ್ರಯಾಣಿಕರ ದಟ್ಟಣೆ ನಿವಾರಣೆಯಾಗಿಸಲು ಇದು ನೆರವಾಗಲಿದೆ. ಈ ರೈಲಿನ ಮಾದರಿಯಲ್ಲಿ ಪ್ರಸ್ತುತ ಕಾರ್ಯಾಚರಣೆ ಆಗುತ್ತಿರುವ ಹಸಿರು, ನೇರಳೆ ಮಾರ್ಗಕ್ಕೆ ಇನ್ನು 20 ರೈಲುಗಳನ್ನು ಕೋಲ್ಕತಾದ ತೀತಾಫ‌ರ್ ರೈಲ್ ಸಿಸ್ಟಂ ಲಿ. (ಟಿಆರ್‌ಎಸ್ ಎಲ್) ಕಳಿಸಲಿದೆ. ಕಳೆದ ವಾರವಷ್ಟೇ ಹಳದಿ ಮಾರ್ಗಕ್ಕಾಗಿ ಟಿಆರ್‌ಎಸ್‌ಎಲ್ ಸಂಸ್ಥೆಯು ಸಿಬಿಟಿಸಿ ತಂತ್ರ ಜ್ಞಾನದ ರೈಲನ್ನು ಬಿಎಂಆರ್‌ಸಿಎಲ್‌ಗೆ ಹಸ್ತಾಂತರ ಮಾಡಿತ್ತು. 

Tap to resize

Latest Videos

ಬೆಂಗಳೂರು ಮೆಟ್ರೋ ರೈಲು ಸಂಚಾರ ಸಮಯ ಬದಲಾವಣೆ; ಇಲ್ಲಿದೆ ಅಪ್ಡೇಟ್ ಮಾಹಿತಿ!

37 ಬಗೆಯ ವಿವಿಧ ಪರೀಕ್ಷೆ: 

ಚೀನಾದಿಂದ ಚೆನ್ನೈ ಬಂದರಿಗೆ ಬಂದ 6 ಬೋಗಿಗಳನ್ನು ಟ್ರಕ್ ಮೂಲಕ ರಸ್ತೆ ಮಾರ್ಗದಲ್ಲಿ ಬೆಂಗಳೂರಿಗೆ ತರಲಾಗಿದೆ. ಬೆಂಗಳೂರು ಮೆಟ್ರೋ ರೈಲು ನಿಗಮವು ಇದನ್ನು ಪಡೆದು ರೈಲಾಗಿ ಜೋಡಿಸಿಕೊಂಡಿದೆ. ಚೀನಾದಿಂದ ಬಂದ ಮೊದಲ ಡಿಸ್ಟೆನ್ಸ್ ಟು ಗೋ (ಡಿಟಿಜಿ) ತಂತ್ರಜ್ಞಾನ ಸ್ವರೂಪದ ರೈಲ ರೈಲು ಇದಾಗಿದೆ. ಎಲೆಕ್ನಿಕಲ್ ಪರೀಕ್ಷೆ ಸೇರಿದಂತೆ ಮುಂದಿನ ಕೆಲ ತಿಂಗಳ ಕಾಲ ಸುಮಾರು 37 ಬಗೆಯ ವಿವಿಧ ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ಮೆಟ್ರೋ ನೇರಳೆ ಮಾರ್ಗಕ್ಕಾಗಿ ಚೀನಾದಿಂದ ಬಂದ ರೈಲು ಬಿಂಎಆರ್‌ಸಿಎಲ್ ತಿಳಿಸಿದೆ. 

ಸೇವೆಗೆ 6 ತಿಂಗಳು ಬೇಕು: 

ಈ ರೈಲು ಪ್ರಯಾಣಿಕ ಸೇವೆಗೆ ಒದಗಲು ಕನಿಷ್ಠ 6 ತಿಂಗಳು ತಗುಲಲಿದೆ. ಯಾವುದೇ ಹೊಸ ಮಾದರಿ ರೈಲು ಬಂದರೂ ಕೂಡ ಸಂಚಾರಕ್ಕೆ ಮೊದಲು ಆರ್ ಡಿಎಸ್‌ಒ (ರಿಸರ್ಚ್ ಡಿಸೈನ್ ಆ್ಯಂಡ್ ಸ್ಟ್ಯಾಂಡರ್ಡ್ಸ್ ಆರ್ಗನೈಸೇಶನ್) ಪ್ರಮಾಣ ಪತ್ರ ಅಗತ್ಯ. ಪರೀಕ್ಷೆಗಳ ಬಳಿಕ ರಾತ್ರಿ ವೇಳೆ ಮುಖ್ಯ ಲೈನ್‌ನಲ್ಲಿ ಪ್ರಾಯೋಗಿಕ ಸಂಚಾರ ನಡೆಸಲಾಗುವುದು. ಬಳಿಕ ಹೊಸ ರೈಲುಗಳಿಗಾಗಿ ಲೋಕೋಪೈಲಟ್‌ಗಳ ನೇಮಕಾತಿ ಮಾಡಿಕೊಂಡು ಅವರಿಗೆ ತರಬೇತಿ ನೀಡಬೇಕಾಗುತ್ತದೆ. ನಂತರವಷ್ಟೇ ಈ ರೈಲಿನ ವಾಣಿಜ್ಯ, ಸಂಚಾರ ಪ್ರಾರಂಭವಾಗಲಿದೆ ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದರು. 

click me!